ಇಂದಿನ ಮಕ್ಕಳು ಮೊಬೈಲ್ ಗೀಳಿನಿಂದ ಹೊರ ಬನ್ನಿ : ನಿವೃತ್ತ ಪ್ರಾಂಶುಪಾಲ ಎಸ್.ಲಕ್ಷ್ಮಣ್.
ಚಳ್ಳಕೆರೆ : ಆಧುನಿಕ ಯುಗದಲ್ಲಿ ಮೊಬೈಲ್ ಗೀಳಿನಿಂದ ಅನಾದಿಕಾಲದ ಸಂಪ್ರದಾಯ, ಸಂಸ್ಕೃತಿ ನಶಿಸಿಹೊಗುತ್ತಿದೆ ಎಂದು ನಿವೃತ್ತ ಪ್ರಾರ್ಚಾಯರಾದ ಎಸ್.ಲಕ್ಷಣ ವಿಷಾಧ ವ್ಯಕ್ತಪಡಿಸಿದರು
ಅವರು ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧಾ ಚಟುವಟಿಕೆಗಳ ಉದ್ಘಾಟಿಸಿ ಮಾತನಾಡಿದರು. ಸೋಲೇ ಗೆಲುವಿನಮಟ್ಟಿಲು ಸೋಲು ಕಂಡಿವೆ ಎಂದು ಅತಾಶೆಯಾಗದೆ ಮುಂದಿನ ಗೆಲುವಿಗೆ ಕಟಿ ಬದ್ದರಗಾಗಬೇಕು ಎಂದರು.
ಇನ್ನೂ ಪ್ರಾಚಾರ್ಯರಾದ ಎಂ.ರವೀಶ್ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳು ಇಂದಿನ ಯುವ ಜನತೆಗೆ ಅನಿವಾರ್ಯ ಹಿಂದಿನ ಕಾಲದಿಂದಲೂ ಉಳಿಸಿಕೊಂಡು ಬಂದಂತಹ ಕಲೆ, ಸಾಹಿತ್ಯ, ಸಂಗೀತ ಈಗೇ ವೀರಗಾಸ್ಯ, ಗಂಡುಕಲೆ ಯಕ್ಷಗಾನ ಎಲ್ಲಾವನ್ನು ಮನನ ಮಾಡುವ ಮೂಲಕ ನಮ್ಮ ದೇಶದ ಸಂಸ್ಕೃತಿ ಉಳಿಸಬೇಕಿದೆ, ಇನ್ನೂ ಪ್ರತಿ ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯವಾಗಿ ಸ್ವೀಕರಿಸಬೇಕು ಎಂದು ಕಿವಿಮಾತು ಹೇಳಿದರು.
ಹಿರಿಯ ಉಪನ್ಯಾಸಕರಾದ ಚಂದ್ರಶೇಖರ್ ಮಾತನಾಡಿ, ಇಂದು ನಡೆಯುವ ತಾಲೂಕಿನ ಎಲ್ಲಾ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಶಿಸ್ತಿನಿಂದ ನಡೆದುಕೊಳ್ಳಬೇಕು, ಎಲ್ಲಾ 11 ಸ್ಪರ್ದೇ ಗಳಲ್ಲಿ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು ಬಾಗಿವಹಿಸುವಂತೆ ಮಾಡಲಾಗುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎಂ.ರವೀಶ್ ಕುಮಾರ್, ನಿವೃತ್ತ. ಪ್ರಾರ್ಚರಾದ ಲಕ್ಷ್ಮಣ, ಉಪನ್ಯಾಸಕರಾದ ಅಬಿಬುಲ್ಲಾ, ಲಲಿತಾ, ವೆಂಕಟೇಶ,ಚಂದ್ರಶೇಖರ್, ಚಂದ್ರಣ್ಣ, ಇಸ್ಲಾಂ , ಪುಷ್ಪಲತಾ, ಎನ್ ಎಸ್ ಎಸ್. ಅಧಿಕಾರಿ ಶಾಂತಕುಮಾರಿ, ರೇಖಾ, ಇನಾಕೌಸರ್, ಭಿಮರೆಡ್ಡಿ, ನಾಗರಾಜ್, ವಸಂತ್ ಕುಮಾರ್, ಕುಮಾರಸ್ವಾಮಿ, ತ್ರಿವೇಣಿ , ಇತರ ಉಪನ್ಯಾಸಕರು, ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.