ಡಾ.ವಿಷ್ಟುವರ್ಧನ 73ನೇ ಜನ್ಮದಿನಕ್ಕೆ ಕೆಕ್ ಕತ್ತರಿಸಿ ಸಂಭ್ರಮಿಸಿದ ಚಳ್ಳಕೆರೆ ನಗರದ ಅಭಿಮಾನಿ ಬಳಗ

ಚಳ್ಳಕೆರೆ : ಮೆರುನಟ ಡಾ.ವಿಷ್ಟುವರ್ಧನ ಹುಟ್ಟು ಹಬ್ಬದ ಅಂಗವಾಗಿ ನಗರದ ಚಿತ್ರದುರ್ಗ ರಸ್ತೆಯಲ್ಲಿ ಐ.ಬಿ.ಮುಂಭಾಗದ ಸೋಮಗುದ್ದು ರಸ್ತೆಗೆ ವಿಷ್ಣುವರ್ಧನ್ ರಸ್ತೆ” ಎಂದು ನಾಮಕರಣ ಮಾಡುವುದು ಹಾಗೂ ರಸ್ತೆಗೆ “ಡಾ||ವಿಷ್ಣುವರ್ಧನ್ ಮಹಾದ್ವಾರ” ಎಂದು ನಾಮಕರಣ ಮಾಡುವ ಸ್ಥಳದಲ್ಲಿ ಇಂದು ನಗರದ ಅಪಾರ ಅಭಿಮಾನಿ ಬಳಗ ಕೆಕ್ ಕತ್ತರಿಸುವ ಮೂಲಕ ಜನ್ಮದಿನಕ್ಕೆ ಶುಭಾಷಯ ಕೋರಿದ್ದಾರೆ.
ಇನ್ನೂ ವಿಷ್ಟು ವರ್ಧನ ಅಭಿಮಾನಿ ಬಳಗ ತಾಲೂಕು ಸಂಘದ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ದೇಶ ಕಂಡ ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ ಮೆರುನಟ ಡಾ.ವಿಷ್ಟುವರ್ಧನ ಅವರ ನಟಿಸಿದ ಹಲವು ಚಿತ್ರಗಳು ಇಂದು ಸಂಸಾರಿಕ ಜೀವನದಲ್ಲಿ ಹಾಸುಹೊಕ್ಕಾಗಿವೆ ಆದ್ದರಿಂದ ಅವರ ನೆನಪಿಗಾಗಿ ಚಿತ್ರದುರ್ಗ ರಸ್ತೆಯಲ್ಲಿ ಐ.ಬಿ.ಮುಂಭಾಗದಿAದ ಸೋಮಗುದ್ದು ರಸ್ತೆಗೆ ವಿಷ್ಣುವರ್ಧನ್ ರಸ್ತೆ” ಎಂದು ನಾಮಕರಣ ಮಾಡುವುದು ಹಾಗೂ ರಸ್ತೆಗೆ “ಡಾ||ವಿಷ್ಣುವರ್ಧನ್ ಮಹಾದ್ವಾರ” ಎಂದು ನಾಮಕರಣ ಮಾಡಲು ಈಗಾಗಲೇ ಸರಕಾರದ ಹಂತದಲ್ಲಿ ಹಾಗೂ ಜನಪ್ರತಿನಿಧಿಗಳ ಮೂಲಕ ಮನವಿ ಸಲ್ಲಿಸಲಾಗಿದೆ ಎಂದರು.

ಮಾಜಿ ಪುರಸಭಾ ಅಧ್ಯಕ್ಷ ಚೇತನ್ ಕುಮಾರ (ಕುಮ್ಮಿ) ಮಾತನಾಡಿ, ಕನ್ನಡದ ಜನಪ್ರಿಯ ನಟರಾದ ಇವರು ಅನೇಕ ರಾಜ್ಯ ಪ್ರಸಸ್ತಿ, ರಾಷ್ಟ್ರಪ್ರಶಸ್ತಿ ಪಡೆದು ನಮ್ಮ ನಾಡಿಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಇವರ ಬಗ್ಗೆ ತಿಳಿಸಲು ಇವರ ನೆನಪಿಗಾಗಿ ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯಲ್ಲಿ ಸದರಿಯವರ ಹೆಸರನ್ನು ಚಿರಸ್ಥಾಯಿಗೊಳಿಸಲು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹಾಗೂ ನಗರಸಭಾ ಸದಸ್ಯರು ಅಭಿಮಾನಿ ಬಳಗದವರು ಕೈಜೋಡಿಸಬೇಕು ಎಂದರು.

ತಾಲೂಕು ಸಂಘದ ಉಪಾಧ್ಯಕ್ಷ ರವಿಕುಮಾರ್ ಮಾತನಾಡಿ, ಸಾಹಸ ಸಿಂಹ ಅಭಿನವ ಭಾರ್ಗವ ಡಾ|| ವಿಷ್ಣುವರ್ಧನ್ ರವರು ಕನ್ನಡ ಭಾಷೆ, ಈ ಮೇಲ್ಕಂಡ ವಿಷಯಕ್ಕೆ ಸಂಬAಧಿಸಿದAತೆ ಕನ್ನಡದ ಹೆಸರಾಂತ ನಟ ನೆಲ, ಜಲ, ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡಿ ಕನ್ನಡದ ಕೀರ್ತಿಯನ್ನು ಉಳಿಸಿಕೊಂಡು ಬಂದಿದ್ದಾರೆ ಎಂದರು.

ಇದೇ ಸಂಧರ್ಭದಲ್ಲಿ ಸಂಘದ ಕಾರ್ಯದರ್ಶಿ ಮಂಜುನಾಥ್, ರವಿ ಕುಮಾರ್, ಕೃಷ್ಣಾ, ಮಹೇಶ್, ಉಮೇಶ್, ಮೂರ್ತಿ, ರಮೇಶ್, ತಿಮ್ಮರಾಜ್, ಮಾರಣ್ಣ, ಮಂಜುನಾಥ, ಮಧು, ಕೃಷ್ಣ ಯಾದವ್, ಇಂದ್ರೇಶ್, ಆರ್.ರವಿಕುಮಾರ್, ತಿಪ್ಪೆಸ್ವಾಮಿ, ವೆಂಕಟೇಶ್, ಇತರರು ಹಾಜರಿದ್ದರು.

About The Author

Namma Challakere Local News
error: Content is protected !!