ತರಾಸು ಹುಟ್ಟಿದ ತವರೂರು..! ಮೂಲಭೂತ ಸೌಲಭ್ಯ ಮರಿಚೀಕೆ –ಕರ್ನಾಟಕ ರಾಜ್ಯ ರೈತ ಸಂಘದಿAದ ಸೆ.22ಕ್ಕೆ ರಸ್ತೆ ತಡೆದು ಪ್ರತಿಭಟನೆ
ಚಳ್ಳಕೆರೆ : ತರಾಸು ಹುಟ್ಟಿದ ತವರೂರು ಆದರೂ ಮೂಲಭೂತ ಸೌಲಭ್ಯ ಮರಿಚೀಕೆ ಹೌದು ಪ್ರತಿ ಹಂತದಲ್ಲಿ ಹಿಂದೂಳಿದಿರುವ ತಳಕು ಗ್ರಾಮವು ಸಾರ್ವಜನಿಕರಿಗೆ ಸಂಚಾರದ ಸೇವೆ ನಿಡುವಲ್ಲಿ ನಿಲ್ಯಕ್ಷö್ಯ ತೋರಿದೆ ಹೌದು ನಿಜಕ್ಕೂ ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರ ಗೋಳು ಕೇಳುವವರಿಲ್ಲವಾಗಿದೆ.
ದಿನ ಬೆಳಗಾದರೆ ಸಾಕು ನೂರಾರು ಜನರು ವಿವಿಧ ಕೆಲಸ ಕಾರ್ಯಗಳತ್ತ ದಾವಿಸುವ ಜನರು ಇಂದು ಸಂಚರಿಸಲು ಸರಕಾರಿ ಬಸ್ ಇಲ್ಲದೆ ಖಾಸಗಿ ವಾಹನಗಳಿಗೆ ಪರದಾಡುವಂತಾಗಿದೆ. ಇದೆಲ್ಲವನ್ನೂ ಮನಗಂಡೆ ಕರ್ನಾಟಕ ರಾಜ್ಯ ರೈತ ಸಂಘವು ಇದೇ ಸೆಪ್ಟೆಂಬರ್22 ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಕರೆ ನೀಡಿದ್ದಾರೆ.
22ರ ಶುಕ್ರವಾರ ರಂದು ಗರಣಿ ಪೆಟ್ರೋಲ್ ಬಂಕ್‌ಸಮೀಪದಲ್ಲಿ ರಸ್ತೆ ಚಳುವಳಿ ಮಾಡುವ ಮೂಲಕ ಸರಕಾರಕ್ಕೆ ಹಾಗೂ ಸಾರಿಗೆ ವ್ಯವಸ್ಥಪಕರಿಗೆ ಮನವಿ ನೀಡಲಾಗುದು ಎಂದು ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರಾಜ್ ಕರೆ ನೀಡಿದ್ದಾರೆ.
ತಳಕು ಹೋಬಳಿ ಕೇಂದ್ರ ಸ್ಥಾನವನ್ನು ಗ್ರಾಮಕ್ಕೆ ಸರ್ಕಾರಿ ಬಸ್‌ಗಳು ಬಾರದೇ ಇರುವುದನ್ನು ಖಂಡಿಸಿ ರಸ್ತೆ ತಡೆ ಚಳುವಳಿ ಮಾಡಲಾಗುವುದು ಬಳ್ಳಾರಿಯಿಂದ ಚಳ್ಳಕೆರೆ ಮಾರ್ಗದ ಮಧ್ಯೆ ಬರುವ ತಳಕು, ಬಿ.ಜಿ.ಕೆರೆ ಹಾನಗಲ್‌ಗೆ ಸರಕಾರಿ ಬಸ್‌ಗಳು ಬಾರದೇ ಬೈಪಾಸ್‌ನಲ್ಲಿ ಸಂಚಾರ ನಡೆಸುತ್ತಿವೆ ಬಳ್ಳಾರಿ, ರಾಯಚೂರು, ಕೊಪ್ಪಳ, ಗುಲ್ಬರ್ಗಾ, ಬಾಗಲಕೋಟೆ, ಬೆಂಗಳೂರು, ಚಿತ್ರದುರ್ಗ, ಹಾಸನ, ಕೋಲಾರ, ಮಂಗಳೂರು, ತುಮಕೂರು, ಡಿಪೋ ಬಸ್‌ಗಳು ಬಹುತೇಕ ಬಸ್‌ಗಳು ಬಸ್ ನಿಲ್ದಾಣಕ್ಕೆ ಬರುವುದಿಲ್ಲ ಇನ್ನೂ ಪ್ರಯಾಣಿಕರು ಕೇಳಿದರೆ ತಳಕು ಗ್ರಾಮಕ್ಕೆ ನಮ್ಮ ಬಸ್‌ಗಳಿಗೆ ಪರವಾನಿಗೆ ಕೊಟ್ಟಿಲ್ಲವೆಂದು ಹೇಳುತ್ತಾರೆ. ಪ್ರಯಾಣಿಕರು ದಿನನಿತ್ಯ ಗಲಾಟೆ ಮಾಡಿ ಕಂಡಕ್ಟರ್‌ನೊAದಿಗೆ ಜಗಳ ಕಾಯುವುದೇ ಕಾರ್ಯಕವಾಗಿ ಬಿಟ್ಟದೆ, ರಾತ್ರಿ ವೇಳೆ ಬೈಪಾಸ್‌ನಲ್ಲಿ ಇಳಿಸುತ್ತಾರೆ, ಮಹಿಳೆಯರು, ಶಾಲಾ ಮಕ್ಕಳು, ವಿಲಕಚೇತನರು, ಹಿರಿಯ ನಾಗಲೀಕರು ಬಸ್‌ಗಾಗಿ ದಿನವಿಡೀ ಕಾಯುವ ಪರಸ್ಥಿತಿ ಬಂದೋದಗಿದೆ,
ಈ ತಳಕು ಗ್ರಾಮದಲ್ಲಿ ನಾಡಕಛೇರಿ, ಗ್ರಾಮ ಪಂಚಾಯಿತಿ, ಪೊಲೀಸ್ ಠಾಣೆ, ಬೆಸ್ಕಾ ಇಲಾಖೆ, ತರಾಸು ಗ್ರಂಥಲಾಯ, ರೈತ ಸಂಪರ್ಕ ಕೇಂದ್ರ, , ಬಿ.ಎಸ್.ಎನ್.ಎ, ಕಛೇರಿ, ಅಂಚೆ ಕಛೇರಿ, ಇನ್ನೂ ಶಾಲಾ ಕಾಲೇಜುಗಳು ಈಗೇ ದಿನವೀಡಿ ನೂರಾರು ಸಂಖ್ಯೆಯಲ್ಲಿ ಸಂಚರಿಸುವ ಜನರಿಗೆ ಸೌಲಭ್ಯ ವಂಚಿತವಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಬೇಡರೆಡ್ಡಿಹಳ್ಳಿ ಬಸವರಾಜ್, ಡಿ.ಚಂದ್ರಶೇಖರ್ ನಾಯ್ಕ್, ಚಂದ್ರಣ್ಣ, ಹೊನ್ನೂರು ಶ್ರೀನಿವಾಸ್, ಓಬ್ಯನ್ಯಾಯ್ಕ್, ರಾಮಣ್ಣ, ಕುಮಾರ್ ಇತರರು ಇದ್ದರು.