ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲ ತಳಕು ವೃತ್ತ ನಿರೀಕ್ಷಕ ಕೆ ಸಮಿವುಲ್ಲ ಕರೆ ನೀಡಿದ್ದಾರೆ
ನಾಯಕನಹಟ್ಟಿ:: ಸೆ.14. ಗೌರಿ ಗಣೇಶ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕು ಡಿಜೆ ಬಳಸುವಂತಿಲ್ಲ ಎಂದು ತಳಕು ವೃತ್ತ ನಿರೀಕ್ಷಕ ಕೆ ಸಮಿವುಲ್ಲ ಹೇಳಿದರು.
ಅವರು ಗುರುವಾರ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಈದ್ ಮಿಲಾದ್ ಹಾಗೂ ಗಣೇಶೋತ್ಸವ ಹಬ್ಬಗಳ ಆಚರಣೆ ಅಂಗವಾಗಿ ಸಾರ್ವಜನಿಕರಿಗೆ ವಿವಿಧ ಸಂಘ ಸಂಸ್ಥೆ ಹಾಗೂ ಮುಸ್ಲಿಂ ಸಮುದಾಯದ ಮುಖಂಡರಿಗೆ ಆಯೋಜಿಸಿದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು ನಾಯಕನಹಟ್ಟಿ ಎಂದರೆ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಪುಣ್ಯ ಕ್ಷೇತ್ರ ಹೋಬಳಿಯಲ್ಲಿ ಎಲ್ಲಾ ಸಮುದಾಯದವರು ಎಲ್ಲಾ ಹಬ್ಬಗಳನ್ನು ಶಾಂತಿಯಿಂದ ಆಚರಣೆ ಮಾಡುತ್ತಾ ಬಂದಿದ್ದಾರೆ ಸರ್ಕಾರದ ಮಾರ್ಗಸೂಚಿಯೇ ತಿಳುವಳಿಕೆ ಹೇಳುವುದು ನಮ್ಮ ಕರ್ತವ್ಯವಾಗಿದೆ ಸೆಪ್ಟೆಂಬರ್ 18ರಂದು ಗಣೇಶ ಪ್ರತಿಷ್ಠಾಪಿಸಲಾಗುತ್ತದೆ ಹೋಬಳಿಯ ಸುಮಾರು 54 ಸ್ಥಳಗಳಲ್ಲಿ ಸಂಘ ಸಂಸ್ಥೆಯವರು ಗಣೇಶ ಪ್ರತಿಷ್ಠಾಪನ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಬೇಕು.
ಹೋಬಳಿಯಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆ ಹಾಗೂ ಸಾಮರಸ್ಯವನ್ನು ಕಾಪಾಡಬೇಕು ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಹೋಬಳಿಯ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಜೀವನ ನಡೆಸುತ್ತಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಇದುವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಗೌರಿ ಗಣೇಶ ಈದ್ ಮಿಲಾದ್ ಹಬ್ಬಗಳನ್ನು ಎರಡು ಸಮುದಾಯದವರು ತಮ್ಮದೇ ಆದ ಸಂಪ್ರದಾಯಗಳಲ್ಲಿ ಆಚರಿಸುತ್ತಾರೆ ಪಟ್ಟಣದಲ್ಲಿ ಹಬ್ಬಗಳ ದಿನದೆಂದು ಶಾಂತಿ ಕಾಪಾಡುವುದು ಸಾರ್ವಜನಿಕರ ಕರ್ತವ್ಯವಾಗಿದ್ದು ಪೋಲಿಸ್ ಇಲಾಖೆ ಸೂಕ್ತ ಬಂದೋಬಸ್ತ್ ಕಾರ್ಯವನ್ನು ಕೈಗೊಂಡಿರುತ್ತದೆ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿ ಇಲಾಖೆಯ ಮಾರ್ಗದರ್ಶನದಂತೆ ನಿಯಮಗಳನ್ನು ಪಾಲಿಸಿಕೊಂಡು ಹಬ್ಬಗಳನ್ನು ಆಚರಿಸಬೇಕು ಎಂದು ತಿಳಿಸಿದರು.
ಠಾಣೆಯ ಪಿಎಸ್ಐ ದೇವರಾಜ್ ಮಾತನಾಡಿ ಪೋಲಿಸ್ ಇಲಾಖೆ ಇರುವುದು ಸಾರ್ವಜನಿಕರ ರಕ್ಷಣೆಗಾಗಿ ಸರ್ಕಾರ ನಿಯಮಗಳನ್ನು ಪಾಲಿಸುವುದು ಇಲಾಖೆಯ ಜವಾಬ್ದಾರಿಯಾಗಿರುತ್ತದೆ ಗಣೇಶ ಹಬ್ಬದಂದು ಪೊಲೀಸ್ ಪಟ್ಟಣದ ಮತ್ತು ಗ್ರಾಮೀಣ ಪ್ರದೇಶದ ಗಣೇಶ ಹಬ್ಬದಂದು ಪೊಲೀಸ್ ಇಲಾಖೆ ಪಟ್ಟಣ ಪಂಚಾಯಿತಿ ಬೆಸ್ಕಾಂ ಇಲಾಖೆಗಳ ಅನುಮತಿ ಪಡೆದು ಪರಿಸರಸ್ನೇಹಿ ಮಣ್ಣಿನ ಗಣೇಶವನ್ನು ಪ್ರತಿಷ್ಠಾಪಿಸಬೇಕು ಸಂಜೆ 7 ರಿಂದ ರಾತ್ರಿ 10: ವರಗೆ ಮಾತ್ರ ಮನೋರಂಜನೆ ಕಾರ್ಯಕ್ರಮಗಳಿಗೆ ಅವಕಾಶವಿದ್ದು ಗಣೇಶ ವಿಸರ್ಜನೆಯ ದಿನ ಮೆರವಣಿಗೆ ಸಾಗುವ ಮಾರ್ಗಗಳನ್ನು ಪೊಲೀಸ್ ಇಲಾಖೆಗೆ ತಿಳಿಸಬೇಕು .
ನಿಯಮಗಳನ್ನು ಉಲ್ಲಂಗಿಸಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಈದ್ ಮಿಲಾದ್ ಹಬ್ಬದ ವೇಳೆ ಮುಸ್ಲಿಂ ಬಾಂಧವರು ಶಾಂತಿಯನ್ನು ಕಾಪಾಡಿ ತಮ್ಮ ಆಚರಣೆಯನ್ನು ಕೈಗೊಳ್ಳಬೇಕು ಯಾವುದೇ ಅಹಿತಕರ ಘಟನೆ ನಡೆದಂತೆ ಸಾರ್ವಜನಿಕರು ಸಹಕರಿಸಬೇಕು ಎಂದರು
ಗ್ರಾಮದ ಹಿರಿಯ ಮುಖಂಡರಾದ ಎಂವೈಟಿ ಸ್ವಾಮಿ ಮಾತನಾಡಿ ಪಟ್ಟಣದಲ್ಲಿ ಎರಡು ಧಾರ್ಮಿಕ ಹಬ್ಬಗಳು ಒಂದೇ ತಿಂಗಳಲ್ಲಿ ಆಚರಣೆಗೆ ಬಂದಿರುವುದರಿಂದ ಹಿಂದೂ ಮುಸ್ಲಿಂ ಸಮುದಾಯವು ಸಹೋದರತೆಯ ಮನೋಭಾವವನ್ನು ಬೆಳೆಸಿಕೊಂಡು ಆಚರಿಸೋಣ ಯಾವುದೇ ಹಹಿತಕರ ಘಟನೆಗಳು ನಡೆದಂತೆ ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಿ ಇಡೀ ರಾಜ್ಯಕ್ಕೆ ಮಾದರಿಯಾಗೋಣ ಎಂದು ಕರೆ ನೀಡಿದೆ.
ಇದೆ ಸಂದರ್ಭದಲ್ಲಿ ಪಿಎಸ್ಐ ದೇವರಾಜ್, ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ಸಂದೀಪ್, ಬೆಸ್ಕಾಂ ಶಾಖಾಧಿಕಾರಿ ಎನ್ ಬಿ ಬೋರಣ್ಣ, ಗ್ರಾಮಸ್ಥರಾದ ಎಂ ವೈ ಟಿ ಸ್ವಾಮಿ, ಪಿ ಶಿವಣ್ಣ, ಶ್ರೀ ಗುರುತಿಪಾರುದ್ರಸ್ವಾಮಿ ದೇವಸ್ಥಾನ ಸಿಬ್ಬಂದಿ ಎಸ್ ಸತೀಶ್, ಪಂಚಾಕ್ಷರಯ್ಯ, ಜಾಕಿರ್ ಹುಸೇನ್, ವೇಣು, ಜಿ ಬಿ ಮುದಿಯಪ್ಪ, ಮನ್ಸೂರ್, ಫಯಾಜ್ ,ಕೌಸರ್ ಗೌಡಗೆರೆ ಮಾಜಿ ಅಧ್ಯಕ್ಷ ಟಿ ರಂಗಪ್ಪ,ಎಚ್ ಬಿ ತಿಪ್ಪೇಸ್ವಾಮಿ ಜೋಗಿಹಟ್ಟಿ, ಗುಂತ ಕೋಲಮ್ಮನಹಳ್ಳಿ ವಿಷ್ಣು, ನಿರಂಜನ್, ಪೊಲೀಸ್ ಸಿಬ್ಬಂದಿಗಳಾದ ಎಎಸ್ಐ ತಿಪ್ಪೇಸ್ವಾಮಿ, ದಾದಾಪೀರ್, ಪೇದೆಗಳಾದ ಅಣ್ಣಪ್ಪ, ನಾರಾಯಣಿ, ರುದ್ರಪ್ಪ, ಸೇರಿದಂತೆ ಗಣೇಶ ಸಂಘಗಳ ಸದಸ್ಯರು ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು