ಚಳ್ಳಕೆರೆ : ಸಬ್ ರಿಜಿಷ್ಟರ್ ತಮ್ಮ ಇಷ್ಟದಂತೆ ಕಾನೂನು ರೂಪಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ಇಲ್ಲದೆ ಏಕಾ ಏಕಿ ಸ್ಥಿರಾಸ್ತಿಗಳ ಮಾರುಕಟ್ಟೆ ದರಪಟ್ಟಿ ಹೇರಿಕೆ ಮಾಡುವುದು ಆಕ್ಷಮ್ಯ ಅಪರಾದ ಆದರೆ ನೋಟಿಸ್ ಬೋರ್ಡ್ನಲ್ಲಿ ಯಾವುದೇ ದಿನಾಂಕ ನಮೂದು ಮಾಡದೆ ಕೇವಲ ನೆಪ ಮಾತ್ರಕ್ಕೆ ಸಹಿ ಸೀಲ್ ಇಲ್ಲದೆ ಕಾಗದ ಹಾಕಿರುವುದು ಇವರ ಬೇಜಾವ್ದಾರಿ ಎದ್ದು ತೋರುತ್ತಿದೆ, ನೆಪ ಮಾತ್ರಕ್ಕೆ ಅಧಿಕಾರಿಗಳ ಸಭೆ ಹಾಗೂ ಸಾರ್ವಜನಿಕರ ಆಕ್ಷೆಪಣೆಗಳು ಎಂಬುದು, ಇದನ್ನು ಜಿಲ್ಲಾಧಿಕಾರಿಗಳು ಪರೀಗಣಿಸಬೇಕು ಎಂದು ನಗರಸಭೆ ಸದಸ್ಯ ಎಂ.ಮಲ್ಲಿಕಾರ್ಜುನ, ವಿ.ವೈ.ಪ್ರಮೋದ್, ಸಾಮಾಜಿಕ ಕಾರ್ಯಕರ್ತ ಜಗದೀಶ್ ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ.
ಚಳ್ಳಕೆರೆ ನಗರದ ಸಬ್ ರಿಜಿಷ್ಟರ್ ಅಧಿಕಾರಿ ಭಾಗ್ಯಮ್ಮರವರಿಗೆ ಸಾರ್ವಜನಿಕರು, ಮೂರ್ತಿ ಡೆವಲರ‍್ಸ್ ಹಾಗೂ ನಗರಸಭೆ ಸದಸ್ಯರಿಂದ ಮನವಿ ಸಲ್ಲಿಸಿ ನಂತರ ಮಾತನಾಡಿದ ನಗರಸಭೆ ಸದಸ್ಯ ಎಂ.ಮಲ್ಲಿಕಾರ್ಜುನ ರವರು, ಬರಪೀಡೀತ ಪ್ರದೇಶವಾದ ನಮ್ಮ ಚಳ್ಳಕೆರೆ ತಾಲೂಕಿನಲ್ಲಿ ಏಕಾಏಕಿಯಾಗಿ ಸರಕಾರ ಸ್ಥಿರಾಸ್ತಿಗಳ ಮೌಲ್ಯದರ ಪಟ್ಟಿ ಹೆರಿಕೆ ಮಾಡಿದರೆ ಸಾಮನ್ಯ ಜನರ ಪಾಡೆನು, ಕಷ್ಟಪಟ್ಟು ನಗರ ಪ್ರದೇಶದಲ್ಲಿ ಸೂರು ಕಟ್ಟಿಕೊಳ್ಳಲು ಹಣ ಹೊಂದಿಸಿಕೊAಡು ಬಂದ ಜನ ಸಾಮಾನ್ಯರಿಗೆ ಈ ಸರಕಾರದ ಮಾನದಂಡಗಳಿAದ ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಸರಕಾರದ ವಿರುದ್ದ ಕಿಡಿಕಾರಿದರು.
ಇನ್ನೂ ನಗರಸಭೆ ಸದಸ್ಯ ವಿ.ವೈ.ಪ್ರಮೋದ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಇಲ್ಲದ ಸ್ಥಿರಾಸ್ತಿಗಳ ಮೌಲ್ಯದ ಮಾರುಕಟ್ಟೆ ಈಗ ಏಕಾ ಏಕಿ ಮಾರುವುದು ಬಡವರ ಹೊಟ್ಟೆ ಮೇಲೆ ಬರೆ ಎಳೆದಂತೆ ಹಾಗಿದೆ ಇದರಿಂದ ಮಧ್ಯಮ ವರ್ಗದ ಜನರಿಗೆ ತುಂಬಾ ಕಷ್ಟವಾಗುತ್ತಿದೆ ನೀವೇಶನಕ್ಕಿಂತ ಅದರ ದರಪಟ್ಟಿ ಹೆಚ್ಚಿಗೆ ಮಾಡುವುದು ಸರಿಯಲ್ಲ ಈ ಕೂಡಲೇ ಮಾನದಂಡ ಬದಲಾಯಿಸಬೇಕು, ಹಳೆ ಮಾನದಂಡದAತೆ ಮುಂದುವರೆಸಬೇಕು ಎಂದು ಒತ್ತಾಯಿಸಿದ್ದಾರೆ.

2023-24ನೇ ಸಾಲಿನ ಪ್ರಸಕ್ತ ಹಣಕಾಸು ಸಾಲಿನಲ್ಲಿ ಚಿತ್ರುದುರ್ಗ, ಚಳ್ಳಕೆರೆ ಹಾಗೂ ಹಿರಿಯೂರು ತಾಲೂಕುಗಳಿಗೆ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ ಮೌಲ್ಯಗಳನ್ನು ಪರಿಷ್ಕರಣೆ ಕುರಿತಂತೆ ಸರಕಾರ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರವನ್ನು ಪರಿಷ್ಕರಿಸುವ ಸಲುವಾಗಿ ಸಾರ್ವಜನಿಕರಿಂದ ಆಕ್ಷೇಪಣ ಅರ್ಜಿ ಸಲ್ಲಿಕೆಗೆ ಆವಕಾಶ ನೀಡಿತ್ತು, ಈ ಹಿನ್ನಲೆಯಲ್ಲಿ ಸಾರ್ವಜನಿಕರು ತಹಶೀಲ್ದಾರ್ ಗೆ ಹಾಗೂ ಸಬ್ ರಿಜಿಷ್ಟçರ್‌ಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಹಶೀಲ್ದಾರ್‌ಗಳ ನೇತೃತ್ವದಲ್ಲಿ ಮಾರುಕಟ್ಟೆ ಮೌಲ್ಯಮಾಪನ ಉಪಸಮಿತಿ ಸಭೆಯಗಳಾಗಿದ್ದು ಸ್ಥಿರಾಸ್ತಿಗಳ ತಾತ್ಕಲಿಕ ಅಂದಾಜು ದರಪಟ್ಟಿ ಅಂಗೀಕರಿಸಲಾಗಿದ್ದು ಎಂಬುದು ಏಕಾಏಕಿಯಾಗಿ ಮಾರುಕಟ್ಟೆ ವ್ಯಾಲುವೇಷನ್‌ಗಿಂದ ಹೆಚ್ಚಿನ ದರ ನಿಗಧಿಮಾಡಿದ್ದು ಬಯಲು ಸೀಮೆ ಯಜನರಿಗೆ ಹೊಟ್ಟೆ ಮೇಲೆ ಬರೆ ಎಳೆದಂತೆತಾಗಿದೆ ಎಂದು ಸಾರ್ವಜನಿಕರು ಸಬ್ ರಿಜಿಷ್ಟರ್ ಭಾಗ್ಯಮ್ಮ ರವರಿಗೆ ಮನವಿ ಸಲ್ಲಿಸಿದ್ದಾರೆ.

About The Author

Namma Challakere Local News
error: Content is protected !!