ಚಳ್ಳಕೆರೆ : ಯಾರು ಕೂಡ ಅಬಕಾರಿ ಅಕ್ರಮಗಳಲ್ಲಿ ಭಾಗಿಯಾಗಬಾರದು ಅಬಕಾರಿ ಅಕ್ರಮ ಮದ್ಯ ಮಾರಾಟ ಮಾಡಿದರೆ ಅಬಕಾರಿ ಕಾನೂನಿನ ವಿವಿಧ ಕಲಂಗಳ ಅಡಿಯಲ್ಲಿ ಘೋರ ಶಿಕ್ಷೆಗೆ ಗುರಿಪಡಿಸಬೇಕಾಗುತ್ತದೆ ಎಂದು ಅಬಕಾರಿ ನೀರೀಕ್ಷಕರಾದ ನಾಗರಾಜ್ ಹೇಳಿದರು.
ಅವರು ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿರುವ ಪೆಟ್ಟಿಗೆ ಅಂಗಡಿಗಳ ಮೇಲೆ ದಾಳಿ ನಡೆಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮದಲ್ಲಿ ಶಾಂತಿ ವಾತವರಣ ಸೃಷ್ಠಿ ಮಾಡಲು ಶಾಲಾ ಆವರಣ, ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಅಕ್ರಮ ಮಧ್ಯ ಮಾರಾಟ ನೀಷೇಧ ಮಾಡಬೇಕು, ಇನ್ನೂ ಮಹೇಶ್ ಸಿ ನಗರಂಗೆರೆ ರಾಜ್ಯ ಸಂಘಟನ ಕಾರ್ಯದರ್ಶಿ ರವರು ದೇವರ ಮರಿಕುಂಟೆ ಗ್ರಾಮದಲ್ಲಿ ಪೋಲಿ ಹುಡುಗರು ಶಾಲಾ ಆವರಣದಲ್ಲಿ ಮದ್ಯ ಸೇವನೆ ಮಾಡುತ್ತಿರುವ ಸಂಬAದ ನೀಡಿದ ದೂರಿನ ಮೇರೆಗೆ ಬೇಟಿ ನೀಡಿದ್ದೆವೆ ಆದರೆ ಅಕ್ರಮ ಮಧ್ಯ ಮಾರಾಟ ಕಂಡು ಬಂದಿಲ್ಲ ಆದ್ದರಿಂದ ಮದ್ಯ ಮಾರಾಟಗಾರರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಯಿತು ದೇವರಮರಿಕುಂಟೆ ಗ್ರಾಮದಲ್ಲಿ ಗ್ರಾಮಸ್ಥರನ್ನು ಜನಪ್ರತಿನಿಧಿಗಳನ್ನು ಸೇರಿಸಿ ಗ್ರಾಮ ಪಂಚಾಯಿತಿ ಪಿ.ಡಿ.ಒ . ಕಾರ್ಯದರ್ಶಿರವರ ಉಪಸ್ಥಿತಿಯಲ್ಲಿ ಗ್ರಾಮಸಭೆ ನಡೆಸಿದರು.

ಇನ್ನು ಶಾಲಾ ಮುಖ್ಯೋಪಾದ್ಯಾಯರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಪರಿಶೀಲಿಸಲಾಯಿತು ಯಾವುದೇ ಅಬಕಾರಿ ಅಕ್ರಮಗಳು ಕಂಡುಬAದಿರುವುದಿಲ್ಲ, ಶಾಲಾ ಆವರಣದಲ್ಲಿ ಮದ್ಯ , ಗಾಂಜಾ , ಸಿಗರೇಟ್ , ಗುಟ್ಕಾ ಸೇವನೆಯಂತಹ ಅನೈತಿಕ ಚಟುವಟಿಕೆಗಳಲ್ಲಿ ಗ್ರಾಮದ ಯುವಕರು ಭಾಗಿಯಾಗಬಾರದು ಎಂದು ಗ್ರಾಮಸ್ಥರಲ್ಲಿ, ಯುವಕರಲ್ಲಿ ಅಬಕಾರಿ ಕಾನೂನು ಅರಿವು ಮೂಡಿಸಲಾಯಿತು ಅಲ್ಲದೆ ಅಬಕಾರಿ ಅಕ್ರಮಗಳಿಗೆ ಸಂಬದಿಸಿದAತೆ ದೂರುಗಳು ಕಂಡುಬAದರೆ ನಮ್ಮ ಇಲಾಖೆ ಗಮನಕ್ಕೆ ತನ್ನಿ ಎಂದು ಕಛೇರಿ & ನಮ್ಮ ದೂರವಾಣಿ ನಂಬರ್ ನೀಡಲಾಯಿತು

ಈ ಸಂದರ್ಭದಲ್ಲಿ ಚಳ್ಳಕೆರೆ ವಲಯ ಅಬಕಾರಿ ನಿರೀಕ್ಷಕರು & ಉಪ ನಿರೀಕ್ಷಕರು ವಲಯ ಸಿಬ್ಬಂದಿ ಹಾಜರಿದ್ದರು

About The Author

Namma Challakere Local News
error: Content is protected !!