ಬಯಲು ಸೀಮೆ ಗೋವುಗಳಿಗೆ ವರದಾನವಾದ ಶ್ರೀ ಜಪಾನಂದ ಸ್ವಾಮಿಜೀ..!
ನಿರಂತರವಾಗಿ ಮೇವು ನೀಡುತ್ತಿರುವ ಶ್ರೀ ರಾಮಕೃಷ್ಣ ಸೇವಾ ಟ್ರಸ್ಟ್..!!
ಶಾಸಕರ-ಸಚಿವರನ್ನು ತೀಕ್ಷ÷್ಣವಾಗಿ ಕಂಡಿಸಿದ ಓಬಣ್ಣ

ಚಳ್ಳಕೆರೆ : ಬರದನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಚಳ್ಳಕೆರೆ ನಾಯಕನಹಟ್ಟಿ ಪರಶಾಂಪುರ ಹೋಬಳಿಗಳಲ್ಲಿ ಜಾನುವಾರುಗಳ ಪರಿಸ್ಥಿತಿ ಚಿಂತಾ ಜನಕವಾಗಿದೆ ಹೊಟ್ಟೆಗೆ ಮೇವು ಇಲ್ಲದೆ ಸಾವಿನ ಮಡಿಲು ಸೇರುತ್ತಿವೆ ಇನ್ನೂ ಸರಕಾರ ಜಾಣ ಕುರುಡು ತನ ಪ್ರದರ್ಶನ ತೋರುತ್ತಿದೆ ಆದರೆ ಬುಡಕಟ್ಟು ಸಂಪ್ರಾಯದ ಗೋವುಗಳು ನಿರಂತರವಾಗಿ ಸಾವಿನ ಮನೆ ಸೇರುತ್ತಿವೆ
ಇಂತಹ ಸಂದ್ಗಿತ ಪರಸ್ಥಿತಿಯಲ್ಲಿ ಮೂಖ ಪ್ರಾಣಿಗಳ ವೇಧನೆ ಹರಿತ ಶ್ರೀ ರಾಮಕೃಷ್ಣ ಸೇವಾ ಟ್ರಸ್ಟ್ ಹಾಗೂ ಶ್ರೀಮತಿ ಸುಧಾ ಮೂರ್ತಿ ಅವರ ಆಸೆಯಂತೆ ಜಪಾನಂದ ಸ್ವಾಮೀಜಿಯವರ ರವರ ಕಾಯಕ ನಿಜಕ್ಕೂ ಶ್ಲಾಘನೀಯ ತನ್ನವರಂತೆ ಗೋವುಗಳ ರಕ್ಷಣೆಗೆ ಕಳೆದ ಹಲವು ವರ್ಷಗಳಿಂದ ಮೇವು ನೀರು ಹೊದಗಿಸುವ ಇವರ ಸೇವೆ ನಿಜಕ್ಕು ಅನನ್ಯ.

ಇನ್ನೂ ಗೋವುಗಳಿಗೆ ಮೆವು ವಿತರಿಸಿ ಮಾತನಾಡಿದ ಶ್ರೀ ಜಪಾನಂದ ಸ್ವಾಮಿಜೀ ರವರು ನಾನು ಸ್ವಾಮೀಜಿಯಾಗಿ ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ ದೇವರ ಹಸುಗಳಿಗೆ ಹುಲ್ಲನ್ನು ತಂದು ಹಾಕುತ್ತೇನೆ, ಆದರೆ ಕ್ರೂರಿ ಮನುಷ್ಯ ಹಸು ಹಾಲು ಕೊಡುತ್ತಿಲ್ಲವೆಂದು ಖಸಾಯಿ ಖಾನೆಗೆ ಹಾಕುತ್ತಾನೆ ಎಂದು ಪಾವಗಡದ ಜಪಾನಂದ ಸ್ವಾಮಿಗಳು ಭಾವುಕರಾಗಿ ಹೇಳಿದರು
ನಗರದ ಅಜ್ಜನ ಗುಡಿಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಿರುವ ಶ್ರೀ ರಾಮಕೃಷ್ಣ ಸೇವಾ ಟ್ರಸ್ಟ್ ಹಾಗೂ ಶ್ರೀಮತಿ ಸುಧಾ ಮೂರ್ತಿ ಅವರ ಆಸೆಯಂತೆ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮ ಒಂದರಲ್ಲಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು ಇವರು ದೇವರ ಎತ್ತುಗಳು ಹಾಗೂ ಕಿಲಾರೀಗಳು ದೇಶದ ಹಿಂದೂ ಸಂಸ್ಕೃತಿ ಆಚಾರ-ವಿಚಾರಗಳ ಆರಾಧ್ಯ ದೈವಗಳಾಗಿವೆ, ಈ ಹಿನ್ನಲೆಯಲ್ಲಿ ಸ್ಥಳೀಯ ಶಾಸಕರು, ಸಚಿವರು ಜಾನುವಾರುಗಳ ಮೇಲೆ ಕಾಳಜಿ ತೋರಬೇಕು ಎಂದರು,
ಅಲ್ಲದೆ ಇತ್ತೀಚಿನ ದಿನಗಳಲ್ಲಿ ರೈತರು ತಮ್ಮ ಹಸುಗಳಿಗೆ ಮೇವು ಸಿಗದೇ ಚಿಂತಿಸುತ್ತಿದ್ದಾರೆ ಆದರೆ ಮೇವು ಸಿಗದೇ ಹೋದರೆ ನಮ್ಮ ಆಶ್ರಮದಲ್ಲಿ ಸಾಕುತ್ತೇವೆ ಎಂದು ಭರವಸೆ ಕೊಟ್ಟರು
ಹಸುಗಳು ಹುಲ್ಲನ್ನು ತಿಂದು ಅಮೃತದಂತೆ ಹಾಲನ್ನು ಕೊಡುತ್ತವೆ ಆ ಹಾಲನ್ನು ಕುಡಿದ ಕ್ರೂರಿ ಮನುಷ್ಯ ತನ್ನ ಹಣದ ಆಸೆಗೆ ಖಸಾಯಿ ಖಾನೆಗೆ ಹಾಕುತ್ತಿರುವುದು ಯಾವ ನ್ಯಾಯ ಹೇಳಿ, ರೈತರು ಮಳೆ ಇಲ್ಲ ಬೆಳೆ ಇಲ್ಲ ಭೂಮಿಗೆ ಹಾಕಿದ ಬೀಜಗಳು ಹುಟ್ಟದೆ ಕಮರಿ ಹೋಗಿವೆ ತಾವು ಸಾಕಿದ ಜಾನುವಾರುಗಳಿಗೆ ಮೇವುಗಳನ್ನು ಒದಗಿಸದೆ ಹತಾಶರಾಗಿದ್ದಾರೆ ಎಂದು ರೈತರಿಗೆ ತಿಳುವಳಿಕೆ ಹೇಳಿದರು

ಇನ್ನು ಈ ಸಂದರ್ಭದಲ್ಲಿ ಕನ್ನಡ ಇತಿಹಾಸ ಶಿಕ್ಷಕ ಓಬಣ್ಣ ಮಾತನಾಡಿ, ನಮ್ಮ ಧಾರ್ಮಿಕ ನೆಲೆಗಟ್ಟಿನ ಸಂಸ್ಕೃತಿಯಲ್ಲಿ ಹಿಂದೂ ಧರ್ಮ ಶ್ರೇಷ್ಠ ಈ ಸಂಸ್ಕೃತಿಯ ಅಡಿಯಲ್ಲಿ ಗೋವುಗಳ ಮಾರಣಹೋಮ ನಡೆಯುತ್ತಿದೆ, ಇದು ಅಲ್ಲದೆ ದೇವರ ಎತ್ತುಗಳಿಗೆ ಮೇವು ಇಲ್ಲದ ಪರಿಸ್ಥಿತಿ ಬಂದೊದಗಿದೆ, ಈ ನಿಟ್ಟಿನಲ್ಲಿ ರಾಜಕಾರಣಿಗಳನ್ನು ಸಂಪರ್ಕಿಸಿದರೆ ದೇವರ ಹಸುಗಳಿಗೆ ಜಪಾನಂದ ಸ್ವಾಮಿಗಳಿದ್ದಾರೆ, ಅವರನ್ನು ಕೇಳಿ ಎಂದು ಉಡಾಫೆ ಉತ್ತರ ಕೊಡುತ್ತಿದ್ದಾರೆ ಇಂತಹ ರಾಜಕಾರಣಿಗಳು ಗೋ ಸಂರಕ್ಷಣೆ ಹೇಗೆ ಮಾಡುತ್ತಾರೆ ಎಂದು ಮುಗ್ಧ ಮನಸ್ಸಿನಿಂದ ಜನಪ್ರತಿನಿಧಿಗಳನ್ನು ತೀಕ್ಷಣವಾಗಿ ಕಂಡಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲಿ 4 ಟ್ಯಾಕ್ಟರಿಯ ಮೂಲಕ ಜಪಾನಂದ ಸ್ವಾಮಿಜೀ ನೂರಾರು ಹಸುಗಳಿಗೆ ಮೇವು ವಿತರಿಸಿದರು
ಇನ್ನು ಈ ವೇಳೆ ಸ್ಥಳಿಕರಾದ ಸುರೇಶ್‌ಪಾಲನಾಯಕ, ಕ್ಯಾಸರೆ ಪಾಲಯ್ಯ, ಮಹೇಶ್, ಅಜ್ಜನ ಗುಡಿ ದೇವಸ್ಥಾನದ ಪೂಜಾರಿಗಳು ಸಾರ್ವಜನಿಕರು ಹಾಜರಿದ್ದರು

About The Author

Namma Challakere Local News
error: Content is protected !!