ಚಳ್ಳಕೆರೆ ನಗರದಲ್ಲಿ ಕಳೆದ ಒಂದು ವಾರದಿಂದ ನಡೆಯುವ ಕ್ರೀಡಾ ಕೂಟ ಗ್ರಾಮೀಣ ಭಾಗದ ಮಕ್ಕಳ ಕ್ರೀಡಾಸಕ್ತಿಯನ್ನು ಹಿಮ್ಮಡಿಗೊಳಿಸಿದೆ
ಆದರೆ ಮಕ್ಕಳಿಗೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವಲ್ಲಿ ಶಿಕ್ಷಣ ಇಲಾಖೆ ಮರೆತಂತಿದೆ.
ಹೌದು ಕಳೆದ ಒಂದು ವಾರದಿಂದ ನಗರದ ಬಿಎಂಜಿಹೆಚ್ ಎಸ್ ಶಾಲಾ ಮೈದಾನದಲ್ಲಿ ನಡೆಯುವ ಕ್ರೀಡಾ ಕೂಟದಲ್ಲಿ ಗ್ರಾಮೀಣ ಪ್ರದೇಶದ ನೂರಾರು ಮಕ್ಕಳು ತಾಲ್ಲೂಕು ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡೆಯಲ್ಲಿ ತೊಡಗಬೇಕಿದೆ. ಅದರಂತೆ ಪ್ರಾಥಮಿಕ ಹಂತ, ಪ್ರೌಢಶಾಲಾ ಮಕ್ಕಳ ವಿಭಾಗ ಹಾಗೂ ಕಾಲೇಜು ಹಂತದ ಕ್ರೀಡೆಯಲ್ಲಿ ಮಕ್ಕಳು ಭಾಗವಹಿಸಿದ್ದಾರೆ.
ಆದರೆ ಮಕ್ಕಳ ಹಿತ ದೃಷ್ಟಿಯಿಂದ ಸೂಕ್ತ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಿ ಶಿಕ್ಷಕರ ಕಣ್ಗಾವಲಿನಲ್ಲಿ ಇರಬೇಕಾದ ಮಕ್ಕಳು ಇಂದು ಬೇಕಾಬಿಟ್ಟಿಯಾಗಿ ಶಾಲಾ ಕೊಠಡಿಯ ಎರಡು ಹಂತಸ್ತು ಕಟ್ಟಡದ ಮೇಲೆ ನಿಂತು ಕ್ರೀಡೆಯನ್ನು ವಿಕ್ಷಿಸುತ್ತಿದ್ದಾರೆ ಆದರೆ ಕೊಂಚ ಯಾಮಾರಿದೂ ಸಾವುನೊವುಗಳು ಸಂಭವಿಸುವ ಸಾಧ್ಯತೆಗಳಿವೆ ಆದರೆ ಇದರ ಬಗ್ಗೆ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ನೋವಿಬ ಸಂಗತಿ
ಇನ್ನಾದರೂ ನಾಳೆ ನಡೆಯುವ ಕಾಲೇಜು ಮಟ್ಟದ ಕ್ರೀಡಾ ಕೂಟದಲ್ಲಿ ಈ ತರಹದ ಘಟನೆಗಳು ಜರುಗದಂತೆ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳುವುದು ಕಾದು ನೋಡಬೇಕಿದೆ..