ನಲಗೇತನಹಟ್ಟಿ ದಲಿತ ಕಾಲೋನಿಯಲ್ಲಿ ಅದ್ದೂರಿಯಾಗಿ ಜರುಗಿದ ಹೋಳಿಗೆಮ್ಮ ಆಚರಣೆ
ನಾಯಕನಹಟ್ಟಿ:: ಹೋಬಳಿಯ ನಲಗೇತನಹಟ್ಟಿ ದಲಿತ ಕಾಲೋನಿಯಲ್ಲಿ ಸಂಭ್ರಮ ಸಡಗರದಿಂದ ಹೋಳಿಗಮ್ಮ ಹಬ್ಬವನ್ನು ಆಚರಣೆ ಮಾಡಿದರು.
ಪ್ರತಿವರ್ಷದಂತೆ ಈ ಭಾರಿಯೂ ಸಹ ಹೋಳಿಗಮ್ಮ ಹಬ್ಬವನ್ನು ದಲಿತ ಕಾಲೋನಿಯ ನಿವಾಸಿಗಳು ಪ್ರತಿ ಮನೆಯಿಂದ ಹೋಳಿಗೆಮ್ಮಗೆ ನೈವೇದ್ಯ ಎಡೆಯನ್ನು ವಿಶೇಷ ಪೂಜೆ ಕೈಕಾರಿಗಳ ನೆರವೇರಿಸಿ ಊರು ಗಡಿಭಾಗಕ್ಕೆ ಹೋಳಿಗೆಮ್ಮ ದೇವಿಯನ್ನು ಕೊಂಡೊಯ್ದು ಭಕ್ತಿ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಕು.ಓಬಯ್ಯ, ಬಾಲೇನಹಳ್ಳಿ ತಿಮ್ಮಯ್ಯ, ಕಾಳೆ ವೆಂಕಟೇಶ, ಕೆ ನಿಂಗಯ್ಯ, ಪಂಪಾಪತಿ, ನಾಗೇಶ್, ಕಾಳೆ ಅಭಿನವ, ಕಾಳೆ ಹರೀಶ್, ಮನು, ಜೀವನ್, ಸೇರಿದಂತೆ ಮುಂತಾದವರಿದ್ದರು