ಪಟ್ಟಣದ ಎಸ್ ಟಿ ಎಸ್ ಆರ್ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ವಿದ್ಯಾರ್ಥಿಗಳಿಗೆ ಜಾಗೃತಿ
.
ನಾಯಕನಹಟ್ಟಿ:: ಪಟ್ಟಣದ ಎಸ್ ಟಿ ಎಸ್ ಆರ್ ಪ್ರೌಢ ಶಾಲೆಯಲ್ಲಿ ನಾಯಕನಹಟ್ಟಿ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟನೆ ಮಾಡಲಾಯಿತು.
ಪ್ರಾಸ್ತಾವಿಕ ಮಾತುಗಳನಾಡಿದ ತಾಲೂಕು ಯೋಜನಾಧಿಕಾರಿಗಳಾದ ಅಣ್ಣಪ್ಪ ವಿದ್ಯಾರ್ಥಿಗಳು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಅವುಗಳನ್ನು ರೂಢಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಕುರಿತು ಹಾಗೂ ಕೆಟ್ಟ ಹವ್ಯಾಸಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಈ ಕಾರ್ಯಕ್ರಮದ ಉದ್ದೇಶ ಇದರ ಪ್ರಯೋಜನದ ಕುರಿತು ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪ್ರಭುದೇವ್ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಚಿತ್ರದುರ್ಗ ಇವರು ಮಕ್ಕಳು ಕುಟುಂಬದ ಕಣ್ಣುಗಳಾಗಿದ್ದು ಪೋಷಕರ ಅಭಿಲಾಷೆಯಂತೆ ಅವರು ವಿದ್ಯಾಭ್ಯಾಸದಲ್ಲಿ ತೊಡಗಿ ಪ್ರಗತಿ ಸಾಧಿಸಬೇಕು ವಿದ್ಯಾರ್ಥಿಗಳು ತಮ್ಮ ಆರೋಗ್ಯ ಪಾಲನೆಗೆ ಹಲವು ಮೂಲ ತಿಳುವಳಿಕೆಗಳನ್ನು ಗಳಿಸುವ ಅಗತ್ಯತೆ ವಿದೆ ಮಧ್ಯವಸನೆ ಗುಟ್ಕಾ ಧೂಮಪಾನಗಳಿಂದ ಯುವ ಜನತೆಯ ಜೀವನ ಹಾಳಾಗುತ್ತಿದೆ ಸಹವಾಸ ದೋಷ ಆಕಸ್ಮಿಕ ಆಕರ್ಷಣೆಗಳ ಕಾರಣ ದುಷ್ಟ ಒಮ್ಮೆ ಆರಂಭವಾದರೆ ಬದುಕು ವಿನಾಶದ ಹಾದಿಯಲ್ಲಿ ಸಾಗುತ್ತದೆ ಇದರಿಂದ ವೈಯಕ್ತಿಕ ಜೀವನದ ಜೊತೆ ಸಮಾಜದ ಸ್ವಾಸ್ಥ್ಯ ಸಹ ಹಾಳಾಗುತ್ತದೆ ವಿದ್ಯಾರ್ಥಿ ಜೀವನದ ದೆಸೆಯಿಂದಲೇ ಉತ್ತಮ ಕ್ರಿಯೆ ಶೀಲಾ ಹವ್ಯಾಸಗಳನ್ನು ರೂಡಿಸಿಕೊಂಡು ಉತ್ತಮ ಸಮಾಜ ಕಟ್ಟುವ ಕಾರ್ಯಕ್ರಮಕ್ಕೆ ದೃಢಕ ಸಂಕಲ್ಪ ಕೈಗೊಳ್ಳಬೇಕು ಎಂದು ತಿಳಿಸಿದರು.

ತಿಪ್ಪೇಸ್ವಾಮಿ ಸಾಮಾಜಿಕ ದುಶ್ಚಟಗಳನ್ನ ನಿಯಂತ್ರಿಸುವುದರ ಕುರಿತು ಹಾಗೂ ಬಿಡುವುದರ ಕುರಿತು ಅವರ ಜಾಗೃತಿ ಮೂಡಿಸಿದರು*

ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಂ ವೈ ಟಿ ಸ್ವಾಮಿ ಜಿಲ್ಲಾ ಆಪ್ ಕಮ್ ಸಂಸ್ಥೆಯ ಅಧ್ಯಕ್ಷರು ಇವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಡುವ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಮಧ್ಯವರ್ಜನ ಶಿಬಿರ ಆಯೋಜನೆ ಮಾಡುವ ಕುರಿತು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಸ್ ಟಿ ಎಸ್ ಆರ್ ವಿದ್ಯಾ ಸಂಸ್ಥೆಯ ಸಹ ಕಾರ್ಯದರ್ಶಿ ಎಸ್ ಚಂದ್ರಶೇಖರ್,ಶಾಲೆಯ ಮುಖ್ಯೋಪಾಧ್ಯಾಯರಾದ ಬಿ ಆರ್ ರಮೇಶ್, ಎಂ ಫಣಿಂದ್ರ, ವಿ ಗೋವಿಂದ, ಹಿರಿಯ ಶಿಕ್ಷಕರು ಹಾಗೂ ಶಾಲಾ ಶಿಕ್ಷಕ ವೃಂದದವರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವಲಯದ ಮೇಲ್ವಿಚಾರಕರಾದ ಸಂತೋಷ್ ಮತ್ತು ಸೇವಾ ಪ್ರತಿನಿಧಿಯಾದ ಅಶ್ವಿನಿ , ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.

About The Author

Namma Challakere Local News
error: Content is protected !!