ಶಿಕ್ಷಕ ವೃತ್ತಿ ಎಂಬುದು ದೇಶ ಕಟ್ಟುವ ಕೆಲಸ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಒಂದು ಸುಸಂಸ್ಕೃತಿ ದೇಶ ಕಟ್ಟಲು ಅಲ್ಲಿನ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಅಂತಹ ವಿದ್ಯಾರ್ಥಿಗಳನ್ನು ತಯಾರು ಮಾಡುವ ಗುರು ಸ್ಥಾನ ಅನನ್ಯ ಎಂದು ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಮಾತನಾಡಿದರು.
ನಗರದ ರೋಟರಿ ಬಾಲಭವನದಲ್ಲಿ ನಡೆದ ಪ್ರೌಢಶಾಲಾ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು, ಶಿಕ್ಷಕ ಎಂಬುವುದ ಕೇವಲ ಒಂದು ಪದವಲ್ಲ ಬದಲಾಗಿ ಕಲ್ಲು ಎಂಬ ಮೂರ್ತಿಯನ್ನು ಶಿಲೆಯಾನ್ನಾಗಿಸುವ ಶಕ್ತಿ ಈ ಶಿಕ್ಷಕನಿಗಿರುತ್ತದೆ ಆದ್ದರಿಂದ ಗುರು ಸ್ಥಾನ ಬಹುದೊಡ್ಡದು ಅಂತಹ ಶಿಕ್ಷಕರಿಗೆ ಇಂದು ಕಾರ್ಯಗಾರ ಏರ್ಪಡಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಎಸ್.ಸುರೇಶ್, ನಗರಸಭೆ ಸದಸ್ಯರಾದ ರಾಘವೇಂದ್ರ,ಶಿಕ್ಷಕರಾದ ಶ್ರೀನಿವಾಸ್, ಸಿಟಿ ವೀರೇಶ್, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು, ಶಿಕ್ಷಕರು, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.