ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ : ಹುಲಿಕುಂಟೆ-ಬೆಳೆಗರೆ ಗ್ರಾಮದಲ್ಲಿ ದಾಳಿ..! ಪ್ರಕರಣ ದಾಖಲು

ಚಳ್ಳಕೆರೆ : ಸ್ತ್ರೀ ಶಕ್ತಿ ಸಂಘದವರಿAದ, ಜನಪ್ರತಿನಿಧಿಗಳಿಂದ, ಸಾರ್ವಜನಿಕರಿಂದ, ಶಾಲಾ ಮಕ್ಕಳಿಂದ ಸಾಕಷ್ಟು ಬಾರಿ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಅಕ್ರಮ ಮಧ್ಯ ಮಾಡುವವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಇನ್ಸೆಪೆಕ್ಟೆರ್ ನಾಗರಾಜ್ ಹೇಳಿದರು.
ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಸ್ಥಳೀಯ ಶಾಸಕರು ಗ್ರಾಮಗಳಲ್ಲಿ ಕಟ್ಟುನಿಟ್ಟಾಗಿ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ದೇವರಮರಿಕುಂಟೆ, ಹುಲಿಕುಂಟೆ, ಯಲಗಟ್ಟೆ. ಬೆಳಗೆರೆ, ನಾರಾಯಣಪುರ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟದ ದೂರಿನ ಹಿನ್ನೆಲೆಯಲ್ಲಿ ದಾಳಿ ಅಬಕಾರಿ ಇಲಾಖೆ ತಂಡ ದಾಳಿ ನಡೆಸಿ ಹುಲಿಕುಂಟೆ, ಯಲಗಟ್ಟೆ ಗ್ರಾಮಗಳಲ್ಲಿ ಪಾನೀಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಹಿನ್ನೆಲೆಯಲ್ಲಿ ಅಬಕಾರಿ ಕಾಯ್ದೆ ಅನ್ವಯ ಎರಡು 15(ಎ) ಪ್ರಕರಣಗಳು ದಾಖಲು ಮಾಡಲಾಯಿತು.
ಅಕ್ರಮ ಮದ್ಯ ಮಾರಾಟಗಾರರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಯಿತು ಹಾಗೂ ದೇವರಮರಿಕುಂಟೆ .ಯಲಗಟ್ಟೆ. .ಹುಲಿಕುಂಟೆ ಗ್ರಾಮಗಳಲ್ಲಿ ಗ್ರಾಮಸ್ಥರನ್ನು ಜನಪ್ರತಿನಿಧಿಗಳನ್ನು ಸ್ತ್ರೀ ಶಕ್ತಿ ಸಂಘದವರನ್ನು ಸೇರಿಸಿ ಗ್ರಾಮಸಭೆ ನಡೆಸಿ ಗ್ರಾಮಸ್ಥರನ್ನು ಉದ್ದೇಶಿಸಿ ಯಾರು ಕೂಡ ಅಬಕಾರಿ ಅಕ್ರಮಗಳಲ್ಲಿ ಭಾಗಿಯಾಗಬಾರದು ಅಬಕಾರಿ ಅಕ್ರಮ ಮದ್ಯ ಮಾರಾಟ ಮಾಡಿದರೆ ಅಬಕಾರಿ ಕಾನೂನಿನ ವಿವಿಧ ಕಲಂಗಳ ಅಡಿಯಲ್ಲಿ ಘೋರ ಶಿಕ್ಷೆಗೆ ಗುರಿಪಡಿಸಬೇಕಾಗುತ್ತದೆ ಎಂದು ಗ್ರಾಮಸ್ಥರಲ್ಲಿ ಅಬಕಾರಿ ಕಾನೂನು ಅರಿವು ಮೂಡಿಸಲಾಯಿತು

Namma Challakere Local News
error: Content is protected !!