ನಾಯಕನಹಟ್ಟಿ :: ಹೋಬಳಿ ತಿಮ್ಮಪ್ಪಯನಹಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿ ಗೃಹಲಕ್ಷ್ಮಿ ಯೋಜನೆಯ ಚಾಲನೆ ನೀಡಿ ಮಾತನಾಡಿದ್ದಾರೆ. ರಾಜ್ಯದ ಪ್ರತಿ ಮನೆಯ ಯಜಮಾನಿಗೆ ರೂ.2000 ಗೃಹಲಕ್ಷ್ಮಿ ಯೋಜನೆ ಅಡಿ ನಮ್ಮ ರಾಜ್ಯ ಸರ್ಕಾರ ನೀಡಲಿದೆ ಇದರ ಸದುಪಯೋಗವನ್ನು ಪ್ರತಿಯೊಬ್ಬ ಮನೆಯ ಯಜಮಾನಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಮಹಿಳೆಯರಿಗೆ ಕಿವಿಮಾತು ಹೇಳಿದರು.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಾಲರಾಜ್ ಮಾತನಾಡಿ ಕಾಂಗ್ರೆಸ್ ಪಕ್ಷವು ಚುನಾವಣೆಗು ಮುನ್ನ ನೀಡಿದ ಐದು ಗ್ಯಾರಂಟಿಗಳಲ್ಲಿ ಹಿಂದೂ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನಲ್ಲಿ ಸನ್ಮಾನ್ಯ ಸಿದ್ದರಾಮಯ್ಯನವರು ಹಾಗೂ ರಾಹುಲ್ ಗಾಂಧಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ನಮ್ಮ ಪಕ್ಷದ ವಿವಿಧ ನಾಯಕರು ಗೃಹಲಕ್ಷ್ಮಿ ಯೋಜನೆಗೆ ಇಂದು ಅದ್ದೂರಿಯಾಗಿ ಚಾಲನೆ ನೀಡಿದ್ದಾರೆ ರಾಜ್ಯದಲ್ಲಿ 140 ಕೋಟಿ ಜನಸಂಖ್ಯೆ ಇದೆ 70 ಕೋಟಿ ಮಹಿಳೆಯರು ಇದ್ದಾರೆ ಪ್ರತಿ ಕುಟುಂಬದ ಯಜಮಾನಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ರೂ. 2000 ಹಣವನ್ನು ನೇರವಾಗಿ ಖಾತೆಗೆ ನೀಡುತ್ತಿದೆ ಉತ್ತಮ ಜೀವನ ಸಾಗಿಸಲು ಸರ್ಕಾರ ಯೋಜನೆಯ ಜಾರಿಗೆ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ರವಿಕುಮಾರ್, ಉಪಾಧ್ಯಕ್ಷೆ ಲಕ್ಷ್ಮಿ ದೇವಿ ಮಹದೇವಪ್ಪ, ಸದಸ್ಯರಾದ ಬಂಡೆ ಕಪಿಲೆ ಓಬಣ್ಣ, ಕೆ ಎಸ್ ಮಂಜಣ್ಣ, ಎಂ ತಿಪ್ಪೇಸ್ವಾಮಿ, ಪಾಲಮ್ಮ ಜಿ ಬೋರಯ್ಯ, ಟಿ ಅಶೋಕ್, ಡಿ ರೇವಣ್ಣ, ಟಿ ಎನ್ ಶೈಲ, ಜಿ ಎಸ್ ವಿಜಯ್ ಕುಮಾರ್, ಕೆ ತಿಪ್ಪೇಸ್ವಾಮಿ, ರಾಧಮ್ಮ ಭೋಜರಾಜ್, ಶಾಂತಮ್ಮ, ಪ್ರೇಮಲತಾ ಶಂಕರ್ ಮೂರ್ತಿ, ಬಸಕ್ಕ ತಿಪ್ಪೇಸ್ವಾಮಿ, ಶ್ರೀಮತಿ ಮಲ್ಲಮ್ಮ, ಸೋಮಶೇಖರ್ ,ಲಕ್ಷ್ಮಿ, ಗೀತಮ್ಮ ಟಿ ಕುಮಾರ್, ಪಿಡಿಒ ಆರ್ ಶ್ರೀನಿವಾಸ್, ಕಾರ್ಯದರ್ಶಿ ನಾಗರಾಜ್ ನಾಯ್ಕ, ನೋಡಲ್ ಅಧಿಕಾರಿ ತಾಲೂಕು ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ಎಸ್ ಬಿ ತಿಪ್ಪೇಸ್ವಾಮಿ ಕುದಾಪುರ, ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಅಂಗನವಾಡಿ ಶಿಕ್ಷಕಿಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಸೇರಿದಂತೆ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು