ಕಾಂಗ್ರೇಸ್ ಸರಕಾರ ನುಡಿದಂತೆ ನಡೆದ ಸರಕಾರ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ನಾವು ನುಡಿದಂತೆ ನಡೆದಿದ್ದೆವೆ ನಮ್ಮ ಮುಖ್ಯ ಮಂತ್ರಿಗಳು ಇಂದು ರಾಜ್ಯದ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಸ್ವಾಲಂಬಿ ಜೀವನ ಕಟ್ಟಿಕೊಳ್ಳಲು ಹಾಗೂ ಅವರ ಜೀವನ ನಿರ್ವಹಣೆಗೆ ಗೃಹ ಲಕ್ಷಿö್ಮ ಯೋಜನೆ ಇಂದು ಅನುಷ್ಠಾನಗೊಳಿಸಿದ್ದಾರೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಕಂಬಳಿ ಮಾರುಕಟ್ಟೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದರು, ಚುನಾವಣೆ ಪೂರ್ವ ಸಂಧರ್ಭದಲ್ಲಿ ಎಲ್ಲಾ ಪಕ್ಷಗಳು ನೀಡಿದಂತೆ ಕಾಂಗ್ರೇಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಭರವಸೆ ನೀಡಿತ್ತು ಅದರಂತೆ ನಮ್ಮ ಕಾಂಗ್ರೇಸ್ ಪಕ್ಷದ ನೇತೃತ್ವದ ಸರಕಾರ ನುಡಿದಂತೆ ನಡೆಯುವ ಮೂಲಕ ಐದು ಗ್ಯಾರಂಟಿ ಯೋಜನೆಗಳನ್ನು ಒಂದೊAದಾಗಿ ಜಾರಿಗೆ ತರುವ ಮೂಲಕ ಜನಪರವಾದ ಆಡಳಿತ ನೀಡುತ್ತಿದೆ, ಅನ್ನ ಭಾಗ್ಯ ಯೋಜನೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹ ಜ್ಯೋತಿ, ಯುವನಿಧಿ, ಹಾಗೂ ಗೃಹಲಕ್ಷಿö್ಮ ಯೋಜನೆಯನ್ನು ಇಂದು ಜಾರಿಗೆ ತರವು ಮೂಲಕ ರಾಜ್ಯದ ಲಕ್ಷಾಂತರ ಜನರಿಗೆ ವರದಾನವಾಗಿದೆ.
ಅದರಂತೆ ತಾಲೂಕಿನಲ್ಲಿ ಸುಮಾರು 77 ಸಾವಿರ ಫಲಾನುಭಿವಿಗಳು ಈ ಯೋಜನೆಯಲ್ಲಿ ಪಾಳ್ಗೊಂಡಿದ್ದಾರೆ ಇನ್ನೂ 11 ಸಾವಿರ ಕುಟುಂಬಗಳು ನೊಂದಾಯಿಸಬೇಕಾಗಿದೆ, ಸು.13% ರಷ್ಟು ಬಾಕಿ ಉಳಿದಿವೆ, ಮುಂದಿನ ಹಂತಗಳಲ್ಲಿ ಎಲ್ಲಾ ಕುಟುಂಬದ ಅರ್ಹ ಮಹಿಳೆಯ ಯಜಮಾನಿಗೆ ಈ ಯೋಜನೆ ಸಿಗಲಿದೆ ಎಂದರು.
ನಗರಸಭೆ ಸದಸ್ಯೆ ಮಂಜುಳಾ ಪ್ರಸನ್ನ ಕುಮಾರ್ ಮಾತನಾಡಿ, ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಕುಟುಂಬದ ಯಜಮಾನಿ ಮಹಿಳೆಯರಿಗೆ ಎರಡು ಸಾವಿರ ಹಣ ನೀಡುವ ಈ ಮಹತ್ವ ಯೋಜನೆ ಮಹಿಳೆಯರ ಸ್ಥಾನ ಮಾನ ಹೆಚ್ಚಿಸಿದೆ, ಅದರಂತೆ ಬಡತನ ಎಷ್ಟೋ ಮಹಿಳೆಯರಿಗೆ ಈ ಯೋಜನೆ ವರದಾನವಾಗಿದೆ, ಸ್ವಾಲಂಬಿ ಜೀವನ ರೂಪಿಸಿಕೊಳ್ಳಲು ಗೌರವದಿಂ ಬದುಕಲು ಈ ಗೃಹ ಲಕ್ಷಿö್ಮ ಯೋಜನೆ ನೆರವಾಗಿದೆ ಎಂದರು.

ಇದೇ ಸಂಧರ್ಭದಲ್ಲಿ ನಗರಸಭಾ ಸದಸ್ಯ ಕೆ.ಸಿ.ನಾಗರಾಜ್, ಮಂಜುಳಾ ಪ್ರಸನ್ನ ಕುಮಾರ್, ಜಯಲಕ್ಷ್ಮಿ, ಮಲ್ಲಿಕಾರ್ಜುನ, ಚಳ್ಳಕೆರೆರಪ್ಪ, ರಮೇಶ್ ಗೌಡ, ಕೆ.ವೀರಭದ್ರಪ್ಪ, ಹುಣ್ಣೆ ಕೈ ಮಗ್ಗ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ, ಜಗದೀಶ್, ತಹಶಿಲ್ದಾರ ರೇಹಾನ್ ಪಾಷ, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಶಿಶುಅಭಿವೃದ್ದಿ ಹಾಗೂ ಮಕ್ಕಳ ಕಲ್ಯಾಣ ಅಧಿಕಾರಿ ಹರಿಪ್ರಸಾದ್, ಗದ್ದಿಗೆ ತಿಪ್ಪೇಸ್ವಾಮಿ, ಲಿಂಗೇಗೌಡ, ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನಗರಸಭೆಯಿಂದ ನಗರದ ಆರು ಕಡೆ ನೇರ ಪ್ರಸಾರ ಕಾರ್ಯವನ್ನು ಆಯೋಜಿಸಲಾಗಿತ್ತು, ಅದರಂತೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಈಡೀ ಯೋಜನೆ ಬಗ್ಗೆ ಸಂಪೂರ್ಣವಾಗಿ ಮಹಿಳೆಯರಿಗೆ ತಿಳಿಸುವ ಮೂಲಕ ಬೇಟಿ ನೀಡಿ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

Namma Challakere Local News
error: Content is protected !!