ಚಳ್ಳಕೆರೆ : ಟಿಪ್ಪರ ಲಾರಿಗೆ ಸಿಲುಕಿ ಕುರಿಗಳ ಮಾರಣ ಹೊಮ : 12 ಕುರಿಗಳು ದಾರುಣ ಸಾವು ಚಳ್ಳಕೆರೆ ತಾಲೂಕಿನ ಹೊಟ್ಟೆಪನಹಳ್ಳಿ ನಂದಿಪುರ ಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುವ ವೇಳೆ ಅತೀ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಸುಮಾರು ಮುವತ್ತುಕುರಿಗಳ ಮೇಲೆ ಹಾದು ಹೊಗಿದೆ ಅದರಲ್ಲಿ ಸು.12 ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲಿ ಸಾವನ್ನಪ್ಪಿದರೆ ಇನ್ನೂ ಕೆಲವು ಸಾವು ಬ್ಉಕಿನ ಮಧ್ಯೆ ಹೋರಟ ನಡೆಸುತ್ತಿವೆ. ಹೊಟ್ಟೆಪನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಎಳವಜ್ಜವರ ಚಿಕ್ಕಣ್ಣ ಎಂಬುವವರಿಗೆ ಸೇರಿದ ಕುರಿಗಳು ಇನ್ನೂ ರಸ್ತೆ ಮೇಲೆ ರಕ್ತಸಿಕ್ತವಾಗಿ ಸಾವನಪ್ಪಿರುವ ಕುರಿಗಳ ಕಂಡು ಕುರಿಗಾಯಿಗಳ ಆಂಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಸ್ಥಳಿಯ ನಿವಾಸಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಆಗಮಿಸಿದ್ದರು.