ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಇಸ್ರೋ ಮಾದರಿಯ ನಕಾಶೆ ರಚನೆ ಮುಖ್ಯ ಶಿಕ್ಷಕಿ ಎನ್ ಇಂದಿರಮ್ಮ
ನಾಯಕನಹಟ್ಟಿ:: ಇಸ್ರೋ ವಿಜ್ಞಾನಿಗಳ ಕಾರ್ಯ ಅತ್ಯಂತ ಮಹತ್ವವಾದದ್ದು ಎಂದು ಮುಖ್ಯ ಶಿಕ್ಷಕಿ ಎನ್ ಇಂದಿರಮ್ಮ ಹೇಳಿದ್ದಾರೆ.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಾಯಕನಹಟ್ಟಿಯ ಕೇಂದ್ರ ಸ್ಥಾನದಲ್ಲಿ ಇಸ್ರೋ ಮಾದರಿಯ ನಕಾಶೆ ಮಕ್ಕಳಿಂದ ಗುಂಪು ರಚಿಸಿ ಅತ್ಯಂತ ಮಾದರಿ ಶಾಲೆಯಾಗಿ ಹೊರಹೊಮ್ಮಿದೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ದೇಶವು ಮುಂಚೂಣಿಯಲ್ಲಿರುವ ಮಾದರಿಯನ್ನು ಮಕ್ಕಳಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಮುಖ್ಯ ಶಿಕ್ಷಕರಾದ ಶ್ರೀಮತಿ ಎನ್ ಇಂದಿರಮ್ಮ ಹಾಗೂ ಸಹಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಸಾರ್ವಜನಿಕರಿಂದ ಅತ್ಯಂತ ಮೆಚ್ಚುಗೆ ವ್ಯಕ್ತವಾಯಿತು