ಚಳ್ಳಕೆರೆ : ಎಲ್ಲಾ ಮಕ್ಕಳಲ್ಲಿ ಪ್ರತಿಭೆ ಇರುತ್ತೆ ಅದನ್ನು ಹೊರತರುವ ಕೆಲಸ ಶಿಕ್ಷರಲ್ಲಿ ಮಾತ್ರ ಇರುತ್ತದೆ ಅಂತAಹ ಕೆಲಸ ಇಂದು ಹಾಗುತ್ತದೆ ಎಂದು ಚೆನ್ನಮ್ಮನಾಗತಿಹಳ್ಳಿ ಗ್ರಾಪಂ. ನೂತನ ಅಧ್ಯಕ್ಷ ಆನಂದ್ ಕುಮಾರ್ ಹೇಳಿದರು.
ನಗರದ ತಾಲೂಕಿನ ಪರ‍್ಲಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶದಿಂದ ಪ್ರತಿಭೆಹೊರ ಹೊಮ್ಮಿದಾಗ ಮಾತ್ರ ದೇಶದ ಪ್ರಗತಿಗೆ ನಾಂದಿ ಹಾಡಬಹುದು, ಆದ್ದರಿಂದ ನಾವು ಏನಾದರೂ ಸಾಧಿಸಲು ಹೊರಟರೆ ನಮ್ಮ ಗುರಿ ದೊಡ್ಡದಾಗಿರಬೇಕು, ಆದಾಗ ಮಾತ್ರ ನಮ್ಮ ಶ್ರಮಕ್ಕೆ ತಕ್ಕ ಫಲಸಿಗುವುದು ಎಂದರು.
ಸಿಆರ್‌ಪಿ.ಸAಜೀವಮ್ಮ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಪ್ರತಿಭಾ ಕಾರಂಜಿ ಆಯೋಜಿಸಿದೆ, ಇದರಲ್ಲಿ ಭಾಗವಹಿಸಿದ ಮಕ್ಕಳು ನಾನೇ ಗೆಲ್ಲಬೇಕು ಎಂಬ ದೂರಲೋಚನೆ ಕೈ ಬಿಡಬೇಕು ಸ್ವರ್ಧೆ ಎಂದು ಭಾಗವಹಿಸಬೇಕು ಎಂಬ ಮನೋಭಾವದಿಂದ ಭಾಗವಹಿಸಿ ಎಂದರು.
ಈ ಸಂಧರ್ಭದಲ್ಲಿ ಅಧ್ಯಕ್ಷ ಆನಂದ್ ಕುಮಾರ್, ಉಪಾಧ್ಯಕ್ಷೆ ರೂಪವಾಣಿ ಬಸವರಾಜ್, ಪಿಡಿಓ ವೇದಮೂರ್ತಿ, ಮುಖ್ಯ ಶಿಕ್ಷಕ ಚಂದ್ರಶೇಖರ್, ಎಸ್‌ಡಿಎಂಸಿ ಅಧ್ಯಕ್ಷ ಕಾಂತರಾಜ್, ಗ್ರಾಪಂ. ಸದಸ್ಯ ರಾಜಣ್ಣ, ತಿಪ್ಪೆಸ್ವಾಮಿ, ಇನ್ನಿತರು ಭಾಗವಹಿಸಿದ್ದರು.