ಚಳ್ಳಕೆರೆ ತಾಲ್ಲೂಕು ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ಇಂದು ಬನಶ್ರೀ ವೃದ್ಧಾಶ್ರಮದಲ್ಲಿ ಚಂದ್ರಯಾನ -3 ನೌಕೆಯು ಯಶಸ್ವಿಗೊಂಡ ಕಾರಣಕ್ಕಾಗಿ ಹಬ್ಬದ ವಾತಾವರಣದೊಂದಿಗೆ ಹಿರಿಯರು ವೃದ್ಧರೊಂದಿಗೆ ಸಂಭ್ರಮಿಸಿ ಸಿಹಿಯನ್ನು ಹಂಚಿ ದೇಶದ ಇಸ್ರೋ ವಿಜ್ಞಾನಿಗಳಿಗೆ ಶುಭ ಕೋರಿದರು.
ಇನ್ನೂ ವಿಶ್ವದ ವಿಜ್ಞಾನಿಗಳಲ್ಲಿ ಒಬ್ಬರಾದ ಚಳ್ಳಕೆರೆ ತಾಲೂಕಿನ ಮಲ್ಲಿಕಾರ್ಜುನ್ ಹುಲಿಕುಂಟೆ ರವರು ಈ ಈ ಚಂದ್ರಯಾನ -3 ರಲ್ಲಿ ಯೋಜನೆಯಲ್ಲಿ ಇರುವುದು ನಮ್ಮ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸಂತೋಷ ಪಟ್ಟು ವೃದ್ಧಾಶ್ರಮದ ಹಿರಿಯರೊಂದಿಗೆ ಸಿಹಿಯಂಚಿ ಸಂಭ್ರಮಿಸಿದರು, ಇನ್ನೂ ಹಬ್ಬದ ವಾತಾವರಣ ನಿರ್ಮಾಣ ಏರ್ಪಟ್ಟಿತ್ತು,
ಚಳ್ಳಕೆರೆ ತಾಲೂಕು ಛಾಯಾಚಿತ್ರ ಸಂಘದ ಅಧ್ಯಕ್ಷರು ನೇತಾಜಿ ಪ್ರಸನ್ನ, ಕಾರ್ಯದರ್ಶಿ ಚಂದ್ರಶೇಖರ್, ನಿರ್ದೇಶಕರಾದ ಬಸವರಾಜ್ ಬಾಬು, ದಿವಾಕರ್, ಖಜಾಂಚಿ ಅಪ್ಪಿ ಅಜಯ್, ಕೊಟ್ರೇಶ್, ಕ್ಯಾಂಡೇಟ್ ಬೈಯಣ್ಣ, ಮತ್ತು ವೃತ್ತಿಯ ಬಂಧುಗಳು ಹಾಜರಿದ್ದರು ಜೊತೆಯಲ್ಲಿ ಬನಶ್ರೀ ವೃದ್ಧಾಶ್ರಮದ ಮುಖ್ಯಸ್ಥರಾದ ನಿವೃತ್ತ ಶಿಕ್ಷಕಿ ಮಂಜುಳಾ ಉಪಸ್ಥಿತಿ ಇದ್ದರು