ದಾವಣಗೆರೆ ವಿಶ್ವವಿದ್ಯಾನಿಲಯದ 2022-23ನೇ ಸಾಲಿನ ಅಂತಿಮ ವರ್ಷದ ಬಿ.ಎ./ಬಿ.ಕಾಂ. ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು, ಎಸ್.ಜೆ.ಎಂ. ಕಲಾ & ವಾಣಿಜ್ಯ ಮಹಾವಿದ್ಯಾಲಯದ ಬಿ.ಎ. ವಿದ್ಯಾರ್ಥಿನಿ ಸಂಗೀತ ಪಿ. 90% ಹಾಗೂ ಪ್ರಶಾಂತಿನಿ ಪಿ. 88% ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅಬ್ದುಲ್ ಅಜೀಜ್ 92.1% ಹಾಗೂ ನೇತ್ರ ಆರ್. ಇವರು 91% ಅಂಕ ಪಡೆದು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿದ್ದಾರೆ ಹಾಗೂ “Sಣಚಿಣisಣiಛಿs ಒeಣhoಜs” ವಿಷಯದಲ್ಲಿ 04 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ. ಕಾಲೇಜಿನ ಒಟ್ಟು ಫಲಿತಾಂಶ ಬಿ.ಎ. ಪದವಿ 88.68% ಹಾಗೂ ಬಿ.ಕಾಂ. 100% ಫಲಿತಾಂಶ ಬಂದಿದೆ. ಅತಿ ಹೆಚ್ಚು ಅಂಕ ಪಡೆದು ಕಾಲೇಜಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿರುವ ವಿದ್ಯಾರ್ಥಿಗಳಿಗೆ ಎಸ್.ಜೆ.ಎಂ. ವಿದ್ಯಾಪೀಠದ ಉಸ್ತುವಾರಿ ಅಧ್ಯಕ್ಷರಾದ ಶ್ರೀ ಬಸವಪ್ರಭು ಸ್ವಾಮಿಗಳು, ಆಡಳಿತಾಧಿಕಾರಿಯವರಾದ ಶ್ರೀಮತಿ ರೇಖಾ ಬಿ.ಎಸ್. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.