ಸಾಂಕ್ರಾಮಿಕ ರೋಗ ಹರಡುವ ಮುನ್ನೆವೇ ನಿಯಂತ್ರಿಸಿ..!
ನೂರೂರು ಲೋಡ್ ತ್ಯಾಜ್ಯದಿಂದ ಮುಕ್ತಿ ಕಾಣಿಸಿ.
ನಗರಸಭೆ ಅಧಿಕಾರಿಗಳ ವಿರುದ್ದ ಕಿಡಿಕಾರಿದ ನಗರಸಭೆ ಸದಸ್ಯ ಎಸ್.ಜಯಣ್ಣ
ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ನಗರದ ಜನವಸತಿ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಬೆಕಾದ ನಗರಸಭೆ ಅಧಿಕಾರಿಗಳು ಸಾಂಕ್ರಾಮಿಕ ರೋಗಳಿಗೆ ತಾವೇ ಆಹ್ವಾನ ನೀಡಿದಂತೆ ಇದೆ ಎಂದು ನಗರಸಭೆ ಸದಸ್ಯರಾದ ಎಸ್.ಜಯಣ್ಣ ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ.
ಹೌದು ನಗರದ ಚಿತ್ರದುರ್ಗ ರಸ್ತೆಯಲ್ಲಿ ಇರುವ ಕೋತಿ ಬಂಡೆಯಲ್ಲಿ ಇಡೀ ನಗರದ ತ್ಯಾಜ್ಯತಂದು ಸುರಿಯುವುದರಿಂದ ಇಲ್ಲಿನ ಜನ ವಸತಿ ಪ್ರದೇಶಗಳು ಗೊಬ್ಬು ವಾಸನೆಯಿಂದ ಮೂಗು ಮುಚ್ಚಿಕೊಂಡು ವಾಸ ಮಾಡುವಂತ ಪರಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಈ ಸಂಬAಧ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಖ್ಯಾರೆ ಎನ್ನುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಕೂಡ ಆರೋಪ ಮಾಡುತ್ತಿದ್ದಾರೆ.
ನೂರಾರು ಲೋಡ್‌ಗಟ್ಟಲೆ ತ್ಯಾಜ್ಯ ತಂದು ಜನ ವಸತಿ ಪ್ರದೇಶದ ಈ ಬಂಡೆಯಲ್ಲಿ ಸುರಿಯುವುದರಿಂದ ಇಲ್ಲಿನ ರಸ್ತೆಯಲ್ಲಿ ಓಡಾಡುವಂತಿಲ್ಲ ಇನ್ನೂ ದಿನ ನಿತ್ಯ ಶಾಲಾ ಮಕ್ಕಳು ಕಾಲೇಜಿಗೆ ತೆರಳುವು ವಿದ್ಯಾರ್ಥಿಗಳು ಈ ರಸ್ತೆಯನ್ನೆ ಅವಂಲಬಿಸಿದ್ದಾರೆ. ಆದರೆ ಸಂಬAದ ಪಟ್ಟ ಅಧಿಕಾರಿಗಳು ಮಾತ್ರ ಮೌನವಹಿಸಿರುವುದು ಗೋಚರಿಸುತ್ತದೆ.
ಈಗಾಗಲೇ ರಾಜ್ಯಾದ್ಯಾಂತ ಕಲುಷಿತ ನೀರು ಕುಡಿದು ಸಾವನಪ್ಪಿರುವ ಘಟನೆಗೆ ಸರಕಾರ ಸೂಕ್ತ ಆದೇಶ ನೀಡಿದ್ದರು ನಗರಸಭೆಯಲ್ಲಿ ಪಾಲನೆಯಾಗುತ್ತಿಲ್ಲ ಎಂಬುದು ಕಂಡುಬರುತ್ತಿದೆ ಎಂದು ಸ್ಥಳಿಯ ನಿವಾಸಿಗಳು ಆರೋಪ ಮಾಡಿದ್ದರೆ.
ನಗರದ ಮಧ್ಯ ಭಾಗದಲ್ಲಿ ಇಂತಹ ತ್ಯಾಜ್ಯ ತಂದು ಸುರಿಯುವವರಿಗೆ ಕಡಿವಾಣ ಹಾಕಬೇಕಾದ ನಗರಸಭೆ ಅದಿಕಾರಿಗಳು ಮೌನ ವಹಿಸಿದೆ ಕೇವಲ ಪತ್ರಿಕೆಗಳ ಜಾಹಿರಾತಿಗೆ, ಆಚರಣೆಗೆ ಮಾತ್ರ ಸೀಮಿತವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ರೀತಿಯಲ್ಲಿ ನಗರದ ಹಲವು ಕಡೆಗಳಲ್ಲಿ ಜನ ವಸತಿ ಪ್ರದೇಶಗಳಲ್ಲಿ ಇಂತಹ ಹಸಿ ಮತ್ತು ಘನ ತ್ಯಾಜ್ಯ ಸುರಿಯುವುದರಿಂದ ಭಯಾನಕ ರೋಗಗಳಿಗೆ ತುತ್ತಾಗುವ ಅನಿಯಾರ್ವತೆ ಕೂಡ ಇದೆ ಎನ್ನಲಾಗಿದೆ.
ಬಾಕ್ಸ್ ಮಾಡಿ :
ಕಲುಷಿತ ನೀರು ಕುಡಿದು ಸಾವನಪ್ಪಿರುವ ಘಟನೆ ರಾಜ್ಯಾದ್ಯಾಂತ ಹಬ್ಬಿರುವ ಬೆನ್ನಲೆ ರಾಜ್ಯ ಸರಕಾರ ಕಠಿಣವಾದ ಆದೇಶ ನೀಡಿದ್ದರು ಕೂಡ ಚಳ್ಳಕೆರೆ ನಗರಸಭೆಯಲ್ಲಿ ಪಾಲನೆಯಾಗುತ್ತಿಲ್ಲ ಸಾಂಕ್ರಮಿಕ ರೋಗಗಳ ತಾಣವಾದ ಈ ಪ್ರದೇಶದಲ್ಲಿ ನೂರಾರು ಲೋಡ್ ತ್ಯಾಜ್ಯ ತಂದು ಸುರಿಯುವುದರಿಂದ ಜನರು ವಾಸ ಮಾಡುವುದು ಕಷ್ಠಕರವಾಗಿದೆ ಆದರೆ ನಗರಸಭೆ ಅಧಿಕಾರಗಳು ನಿರ್ಲಕ್ಷö್ಯ ವಹಿಸಿರುವುದು ಶೋಚನೀಯ.—ಎಸ್.ಜಯಣ್ಣ ನಗರಸಭೆ ಸದಸ್ಯರು ಚಳ್ಳಕೆರೆ
ಬಾಕ್ಸ್ ಮಾಡಿ :
ಈ ಬಂಡೆಯಲ್ಲಿ ಇಷ್ಟೋಂದು ಪ್ರಮಾಣದಲ್ಲಿ ತ್ಯಾಜ್ಯ ತಂದು ಸುರಿಯುವವರ ಬಗ್ಗೆ ಯಾರೋಬ್ಬರು ಚಕಾರ ಎತ್ತುವುದಿಲ್ಲ ಇನ್ನೂ ಇಲ್ಲಿನ ನಗಸರಭೆ ಅಧಿಕಾರಿಗಳು ದಿನ ಬೆಳಗಾದರೆ ಸಾಕು ಸಾಂಕ್ರಾಮಿಕ ರೋಗ ನಿಯಂತ್ರಣ ಹಾಗೂ ಹಸಿಕಸ ಒಣಕಸ ತ್ಯಾಜ್ಯ ವಿಂಗಡಣೆ ಈಗೇ ಬೊಬ್ಬೆಹೊಡೆಯುವ ಅಧಿಕಾರಿಳು ಈ ತ್ಯಾಜ್ಯದ ಬಗ್ಗೆ ಗಮನಹರಿಸುತ್ತಿಲ್ಲ ಈ ಕೂಡಲೇ ಮುಂದಾಗಬಹುದಾದ ಸಮಸ್ಯೆಗಳನ್ನು ತಪ್ಪಿಸಲು ಈ ತ್ಯಾಜ್ಯದಿಂದ ಮುಕ್ತಿ ಕಾಣಿಸಬೇಕು.– ಸ್ಥಳೀಯ ನಿವಾಸಿ
ಪೋಟೋ : ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯ ಕೋತಿ ಬಂಡೆಯಲ್ಲಿ ನೂರಾರು ಲೋಡ್ ತ್ಯಾಜ್ಯವನ್ನು ತೆರವುಗೊಳಿಸುವಂತೆ ಅಧಿಕಾರಿಗಳ ವಿರುದ್ದ ಬೇಸರ ವ್ಯಕ್ತಪಡಿಸಿದ ನಗರಸಭೆ ಸದಸ್ಯ ಎಸ್.ಜಯಣ್ಣ, ವೆಂಕಟೇಶ್.