ಪ್ರತಿಯೊಬ್ಬ ನಾಗರೀಕರು ಸ್ವಚ್ಚ ಸರ್ವೇಕ್ಷಣದಲ್ಲಿ ಪಾಲ್ಗೊಂಡು ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು : ಪೌರಾಯುಕ್ತ ಸಿ.ಚಂದ್ರಪ್ಪ
ಚಳ್ಳಕೆರೆ ; ಪ್ರತಿವರ್ಷದಂತೆ ಈ ಬಾರಿಯೂ ಭಾರತ ಸರಕಾರ ನಡೆಸುವ ಸ್ವಚ್ಚ ಭಾರತ ಸರ್ವೇಕ್ಷಣ ಅಭಿಯಾನದಲ್ಲಿ ನಗರಸಭೆ ವ್ಯಾಪ್ತಿಯ ಪ್ರತಿಯೊಬ್ಬ ನಾಗರೀಕರು ಈ ಸರ್ವೇಕ್ಷಣದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು ಎಂದು ಪೌರಾಯುಕ್ತ ಸಿ.ಚಂದ್ರಪ್ಪ ಹೇಳಿದ್ದಾರೆ.
ಅವರು ನಗರದಲ್ಲಿ ನಗರಸಭೆ ಸಿಬ್ಬಂದಿ ನಡೆಸುವ ಸ್ವಚ್ಚ ಸರ್ವೇಕ್ಷಣ ಅಭಿಯಾನದಲ್ಲಿ ಪಾಲ್ಗೊಂಡು ನಾಗರೀಕರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು ನಿಮ್ಮ ವಾರ್ಡಗೆ ಕಸದ ವಾಹನ ಬರುತಿದ್ದೆಯೇ, ಹಸಿಕಸ ಒಣಕಸದ ಬಗ್ಗೆ ಮಾಹಿತಿ ಇದೆಯೇ ಎಂಬುದನ್ನು ಸರ್ವೆಕ್ಷಣ ಅಭಿಯಾನದಲ್ಲಿ ಮಾಹಿತಿ ನೀಡುವ ಮೂಲಕ ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಎಂದರು
ಇನ್ನೂ ನಗರಸಭೆಯ ಆರೋಗ್ಯ ನೀರಕ್ಷಿ ಗೀತಾ ಮಾಧ್ಯಮದೊಂದಿಗೆ ಮಾತನಾಡಿ, ಆಗಸ್ಟ್ ಮೊದಲ ವಾರದಿಂದ ಪ್ರಾರಂಭಗೊAಡ ಈ ಸ್ವಚ್ಚ ಭಾರತ ಸರ್ವೇಕ್ಷಣ ಅಭಿಯಾನದಲ್ಲಿ ನಗರದ ಪ್ರತಿಯೊಬ್ಬರು ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ವ್ಯಕ್ಯಪಡಿಸುವ ಮೂಲಕ ಇದೇ ತಿಂಗಳ ಆ.31ರಂದು ಮುಕ್ತಗೊಳ್ಳಲಿರುವ ಅಭಿಯಾನಕ್ಕೆ ಕೈಜೋಡಿಸಿ, ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವ ಮೂಲಕ ನಗರಸಭೆಯೊಂದಿಗೆ ಸಹಕಾರ ನೀಡಬೇಕು ಎಂದರು.
ಈದೇ ಸಂಧರ್ಭದಲ್ಲಿ ಪರಿಸರ ಎಂಜಿನಿಯಾರ್ ನರೇಂದ್ರ ಬಾಬು, ನಗರಸಭೆ ಆರೋಗ್ಯ ನೀರಕ್ಷ ಮಹಾಲಿಂಗಪ್ಪ, ಗಣೇಶ್, ದಾದಪೀರ್, ಇತ್ಯಾದಿ ಸಿಬ್ಬಂದಿ ವರ್ಗದವರು ಇದ್ದರು.