ನಲಗೇತನಹಟ್ಡಿಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿಎನ್ ಮುತ್ತಯ್ಯ

ನಲಗೇತನಹಟ್ಟಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನೂರಾರು ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶನ.

ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣ ಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ ಎನ್ ಮುತ್ತಯ್ಯ ಹೇಳಿದ್ದಾರೆ.

ಅವರು ಮಂಗಳವಾರ ಸಮೀಪದ ನಲಗೇತನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ 2023 -24ನೇ ಸಾಲಿನ ನಲಗೇತನಹಟ್ಟಿ ಕ್ಲಸ್ಟರ್ ವತಿಯಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಹೊರತೆಗೆಯಲು ಶಾಲೆಗಳಲ್ಲಿ ಪ್ರತಿಭಾ ಕಾರಂಜಿ ಇದೊಂದು ಉತ್ತಮ ವೇದಿಕೆಯಾಗಿದೆ ನಮ್ಮ ಗ್ರಾಮದ ವಿದ್ಯಾರ್ಥಿಗಳು ತಾಲೂಕು ಮಟ್ಟ ಜಿಲ್ಲಾ ಮಟ್ಟ ರಾಜ್ಯಮಟ್ಟದಲ್ಲಿ ಪ್ರತಿಭೆಯನ್ನು ಪ್ರದರ್ಶಿಸುವಂತಹಾಗಲಿ ಸರ್ಕಾರಿ ಶಾಲೆಗಳ ಉಳಿವಿಗೆ ಪ್ರತಿಯೊಬ್ಬ ಶಿಕ್ಷಕರ ಮತ್ತು ಗ್ರಾಮಸ್ಥರ ಕಾರ್ಯ ಅತಿ ಮುಖ್ಯವಾದದ್ದು ನಮ್ಮೂರಿನ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಶೀಘ್ರದಲ್ಲೇ ಶಾಲೆಗೆ ಕಾಂಪೌಂಡ್ ವ್ಯವಸ್ಥೆ ಮತ್ತು ಎರಡು ಕೊಠಡಿಗಳ ಕಲ್ಪಿಸುವುದಾಗಿ ಭರವಸೆ ನೀಡಿದ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ ಎನ್ ಮುತ್ತಯ್ಯ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಸಿ ಬಿ ಉಮೇಶ್ ಮಾತನಾಡಿ ನಮ್ಮನಲಗೇತನಹಟ್ಟಿ ಕ್ಲಸ್ಟರ್ 10 ಶಾಲೆಗಳಾದ ನಲಗೇತನಹಟ್ಟಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ ಪ್ರೌಢಶಾಲೆ ಹಿರೇಕೆರೆ ಕಾವಲು, ಎನ್ ಉಪ್ಪಾರಹಟ್ಟಿ,ಸರವ್ಜನಹಳ್ಳಿ, ಗೊಲ್ಲಹಳ್ಳಿ, ಬೋಸೆದೇವರಹಟ್ಟಿ, ರಾಮದುರ್ಗ, ದೊರೆಗಳಹಟ್ಟಿ, ಭೀಮಗೊಂಡನಹಳ್ಳಿ, ಶಾಲೆಗಳ ಜೊತೆಗೂಡಿ ಮಕ್ಕಳಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮೂಲಕ ಅವರ ಪ್ರತಿಭೆ ಗುರುತಿಸುತ್ತದೆ ಇದರ ಮೂಲಕ ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ವೈಭವವನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತದೆ ಮನೋರಂಜನಾತ್ಮಕ ಕಾರ್ಯಕ್ರಮದಿಂದ ಶೈಕ್ಷಣಿಕ ಗುಣಮಟ್ಟದ ಫಲಿತಾಂಶಕ್ಕೂ ಸಹಕಾರಿಯಾಗಲಿದೆ ಮಕ್ಕಳನ್ನು ಮನೆಯ ಮತ್ತು ಶಾಲೆಯ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಿದೆ ಓದಿನ ಜೊತೆಗೆ ಪಟ್ಟಿ ತರ ಚಟುವಟಿಕೆಗಳಿಗೆ ಆದ್ಯತೆ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಪೋಷಕರು ಪ್ರೇರೇಪಿಸಬೇಕು ನಿವೃತ್ತ ಮುಖ್ಯ ಶಿಕ್ಷಕ ಸಿ ಬಿ ಉಮೇಶ್ ,ಎಂದರು.

ಇನ್ನೂಇ ಸಿ ಒ ಈರಸ್ವಾಮಿ ಮಾತನಾಡಿ ನಮ್ಮ ನಲಗೇತನಹಟ್ಟಿ ಕ್ಲಸ್ಟರ್ ವತಿಯಿಂದ ಪ್ರತಿ ವರ್ಷವೂ 2023 ರಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಒಂದು ಕಾರ್ಯಕ್ರಮವು ಗ್ರಾಮೀಣ ಪ್ರದೇಶದ ರಂಗೋಲಿ ಸ್ಪರ್ಧೆ ಚಿತ್ರಕಲೆ ಭಾವಗೀತೆ ಭಕ್ತಿಗೀತೆ ಸಂಗೀತ ಕಲೆಗಳನ್ನ ವಿದ್ಯಾರ್ಥಿಗಳಲ್ಲಿ ಕಲಿಯನ್ನು ಗುರುತಿಸಲು ಈ ಒಂದು ವೇದಿಕೆ ಸಜ್ಜು ಮಾಡಿರುವುದು ತುಂಬಾ ಸಂತೋಷದ ವಿಷಯ ಎಂದು ಇ ಸಿ ಒ ಈರಸ್ವಾಮಿ ತಿಳಿಸಿದ್ದಾರೆ .

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಈಗಲೂ ಬೋರಯ್ಯ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ ಎನ್ ಮುತ್ತಯ್ಯ, ಸದಸ್ಯ ಬಂಗಾರಪ್ಪ. ಪಿಡಿಒ ಎನ್ ಬಿ ವೀರನಾಯಕ, ಗ್ರಾಮಸ್ಥರಾದ ನಿಂಗರಾಜ್, ಎಂ ಬಿ ಮಹಾಸ್ವಾಮಿ, ಇಸಿಓ ಈರಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ. ತಿಪ್ಪೇಸ್ವಾಮಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ ವಿಶ್ವನಾಥ್, ನಿವೃತ್ತ ಶಿಕ್ಷಕ ಸಿ ಬಿ ಉಮೇಶ್, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕ ಆರ್ ಮುಷ್ಟೂರಪ್ಪ, ನಲಗೇತನಹಟ್ಟಿ ಕ್ಲಸ್ಟರ್ ಸಿಆರ್‌ಪಿ ಎಚ್ ಜಗನ್ನಾಥ್, ನಾಯಕನಹಟ್ಟಿ ಕ್ಲಸ್ಟರ್ ಆರ್. ಈಶ್ವರಪ್ಪ, ಬಿ ಆರ್ ಪಿ ಜಗದೀಶ್ ,ಶಿಕ್ಷಕಿ ದೀಪಾ, ಹಾಗೂ ನಲಗೇತನಹಟ್ಟಿ ಕ್ಲಸ್ಟರ್ ಎಲ್ಲಾ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಶಿಕ್ಷಕ – ಶಿಕ್ಷಕಿಯರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಲಗೇತನಹಟ್ಟಿ ಸಮಸ್ತ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!