ಚಿತ್ರದುರ್ಗ, ಆ. 17 – ಹೆಚ್ಚು ಗಳಿಕೆ ಮನುಷ್ಯನನ್ನು ದುಃಖಿತನನ್ನಾಗಿಸುತ್ತದೆ. ಬಹಿರಂಗದ ಸಿರಿ ಸಂಪತ್ತಿನಿAದ ಸುಖ ದೊರಕಲು ಸಾಧ್ಯವಿಲ್ಲ. ಹಾಗಾಗಿ ಮಾನವ ನೆಮ್ಮದಿಯ ಬದುಕು ಸಾಗಿಸಲು ಪಾರಮಾರ್ಥದ ಕಡೆ ವಾಲಬೇಕಿದೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ನುಡಿದರು.
ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಹಮ್ಮಿಕೊಂಡಿರುವ ಶ್ರಾವಣಮಾಸದ ವಿಶೇಷ ಚಿಂತನ ನಿತ್ಯಕಲ್ಯಾಣ ಉದ್ಘಾಟನಾ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.
ನಮ್ಮ ದೃಷ್ಟಿ ಆಧ್ಯಾತ್ಮದ ಕಡೆ ಬರಬೇಕು. ಆಧ್ಯಾತ್ಮ ಎಂದರೆ ಸಂಸಾರದಲ್ಲಿದ್ದು ಅರಿತುಕೊಳ್ಳುವುದು. ನಿಜವಾದ ಸಂತೋಷ ಆಧ್ಯಾತ್ಮದಿಂದ ಸಿಗುತ್ತದೆ. ಪ್ರತಿದಿನ ಧ್ಯಾನಾಸಕ್ತರಾಗಬೇಕು. ಬೇಕು ಎನ್ನುವುದಕ್ಕಿಂತ ಸಾಕು ಎನ್ನುವ ಮನೋಭಾವ ಬೇಕೆಂದರು.
ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಗಳನ್ನು ಹಾಕುವುದರ ಮೂಲಕ ಹಾಗು ಸಸಿಗೆ ನೀರೆರೆಯುವುದರ ಮೂಲಕ ಶ್ರಾವಣಮಾಸದ ವಿಶೇಷ ಚಿಂತನ ನಿತ್ಯಕಲ್ಯಾಣ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಶ್ರೀ ಬಸವನಾಗೀದೇವ ಸ್ವಾಮಿಗಳು ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಬಂದ ಮೇಲೆ ಪುರುಷಾರ್ಥ ಹೋಗಿ ಪಾರಮಾರ್ಥ ಬಂದಿತು. ದೇಹದಿಂದ ಮಾಯೆಯನ್ನು ತೆಗೆಯಬೇಕು. ನಮ್ಮ ಪೂರ್ವಜರು ಆಧ್ಯಾತ್ಮಿಕ ಅನುಭವವನ್ನು ನೀಡಿದ್ದಾರೆ. ಮಾದಾರಚೆನ್ನಯ್ಯನವರು ನೂರಕ್ಕೆ ನೂರರಷ್ಟು ಶರಣರಾಗಿದ್ದಾರೆ. ಶಿವಯೋಗ, ಶಿವಪೂಜೆಯನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ. ವಾಸ್ತವತೆಯನ್ನು ನಾವು ಒಪ್ಪಬೇಕಿದೆ. ಲಿಂಗಾAಗ ಸಾಮರಸ್ಯದ ಅನುಭವ ಪಡೆಯಬೇಕಿದೆ ಎಂದು ನುಡಿದರು.
ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಮಾತನಾಡಿ, ಮನಸ್ಸು, ಕನಸು ಮತ್ತು ಕಲ್ಪನೆಗಳಲ್ಲಿ ನಾವು ಏನೇನೋ ಸಾಧನೆ ಮಾಡಿದ್ದೇವೆ. ವಚನಸಾಹಿತ್ಯ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಬೇಕಿದೆ. ನಮ್ಮ ಮನಸ್ಸನ್ನು ಸರಿ ದಾರಿಗೆ ತರುವ ಕೆಲಸ ಆಗಬೇಕಿದೆ. ಕರ್ಕೇರಿಯನ್ ರೇಸ್, ಮಂಗೋಲಿಯನ್ ರೇಸ್, ನೀಗ್ರೋಸ್ ಈ ಮೂರನ್ನು ಭಗವಂತ ಏಕೆ ಸೃಷ್ಟಿಸಿದ್ದಾನೋ ಗೊತ್ತಿಲ್ಲ. ಈ ಭೂಮಂಡಲ ಹೇಗೆ ಸೃಷ್ಟಿ ಆಯಿತೋ ಗೊತ್ತಿಲ್ಲ. ಆದರೆ ಅವರುಗಳು ಪರಸ್ಪರ ಒಬ್ಬರನ್ನೊಬ್ಬರು ಒಪ್ಪಿಕೊಂಡಿದ್ದಾರೆ. ಭಾರತದಲ್ಲಿ ಪ್ರವರ್ತಕರಾದ ಬಸವಣ್ಣನವರು ಜನಿಸಿ ಸಮಾನತೆಗಾಗಿ ಹೋರಾಟ ಮಾಡಿದರು. ಆಗ ನಮ್ಮ ಸಾಹಿತ್ಯ ಅಂದರೆ ವಚನ ಸಾಹಿತ್ಯ ಸರಳವಾಯಿತು. ಮನೆ ಮನೆಗೆ ಸಾಹಿತ್ಯ ತಲುಪಿಸಿದರು. ಸ್ತಿçÃಯರಿಗೆ ಸಮಾನತೆ ಕೊಟ್ಟರು. ಇಂತಹ ಚಿಂತನೆಗಳು ಬೀದಿ ಬೀದಿಯಲ್ಲಿ ನಡೆಯಬೇಕು. ಮನೆ ಮನೆಯಲ್ಲಿ ನಡೆಯಬೇಕು. ಆಧ್ಯಾತ್ಮವನ್ನು ಬಿಟ್ಟು ನಮ್ಮ ಬದುಕಿಲ್ಲ ಎಂದರು.
ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮಾತನಾಡಿ, ಈ ಕಾರ್ಯಕ್ರಮ ನಮ್ಮ ಕಾರ್ಯಾಲಯದಿಂದ ಪ್ರಾರಂಭವಾಗಿರುವುದು ನಮ್ಮ ಪುಣ್ಯ. ಪ್ರತಿ ಊರಿನ ಪ್ರತಿ ವಾರ್ಡಿನ ಸಮಸ್ಯೆಗಳನ್ನು ಬಗೆಹರಿಸುವ ಕಛೇರಿ ನಮ್ಮದು. ನಾನು ಸಹ ಶ್ರೀಮಠದ ಹಾಗು ಜನರ ಸೇವಕ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಐಸಿಯು ಘಟಕವನ್ನು ಪ್ರಾರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರೋಗ್ಯವೇ ನಮ್ಮ ಸಂಪತ್ತು ಎಂದರು.
ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಶಾಸಕ ಕೆ.ಸಿ. ನಾಗರಾಜು, ಶ್ರೀಮತಿ ವೀಣಾ ಸುರೇಶ್‌ಬಾಬು, ಸುರೇಶ್‌ಬಾಬು, ಪರಮೇಶ್ವರಪ್ಪ, ಜಯಕುಮಾರ್, ಕಾರ್ತಿಕ್, ಮಂಜುನಾಥ್ ಮೊದಲಾದವರಿದ್ದರು.
ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರು ವಚನ ಪ್ರಾರ್ಥನೆ ಮಾಡಿದರು. ವಿ. ತಿಪ್ಪೇಸ್ವಾಮಿ ಸ್ವಾಗತಿಸಿದರು. ಶ್ರೀಮತಿ ಸ್ಮಿತಾ ವಂದಿಸಿದರು. ಜ್ಞಾನಮೂರ್ತಿ ನಿರೂಪಿಸಿದರು.

About The Author

Namma Challakere Local News
error: Content is protected !!