ನಾಯಕನಹಟ್ಟಿ:: ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆ ಎಸ್ ಅನಿತಾ ರವಿಕುಮಾರ್ ಮತ್ತು ಉಪಾಧ್ಯಕ್ಷೆ ಲಕ್ಷ್ಮಿ ಮಹಾದೇವಪ್ಪ ಗ್ರಾಮ ಪಂಚಾಯತಿಯಲ್ಲಿ ಗುರುವಾರ ವಿಶೇಷ ಪೂಜ್ಯ ಸಲ್ಲಿಸಿ ಪದಗ್ರಹಣ ಮಾಡಿ ಅಧಿಕಾರ ಸ್ವೀಕರಿಸಿದರು.
ಅಧ್ಯಕ್ಷೆ ಎಸ್ ಅನಿತಾ ರವಿಕುಮಾರ್ ಮಾತನಾಡಿ ಅಧಿಕಾರ ಶಾಶ್ವತವಲ್ಲ ನಾವು ಮಾಡಿದ ಸೇವೆ ಮಾತ್ರ ಶಾಶ್ವತ ನಮ್ಮ ಗ್ರಾಮ ಪಂಚಾಯತಿಯ ಎಲ್ಲಾ ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಚರಂಡಿ ಸಿಸಿ ರಸ್ತೆ ಸ್ವಚ್ಛತೆ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಸಭೆಯಲ್ಲಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆ ಎಸ್ ಅನಿತಾ ರವಿಕುಮಾರ್, ಉಪಾಧ್ಯಕ್ಷೆ ಲಕ್ಷ್ಮಿ ಮಹಾದೇವಪ್ಪ, ಸದಸ್ಯರಾದ ರಾಮಸಾಗರ ಎಂ ತಿಪ್ಪೇಸ್ವಾಮಿ, ಓ ಓಬಣ್ಣ ಬಂಡೆ ಕಪಿಲೆ, ಕೆ ಎಸ್ ಮಂಜಣ್ಣ, ಪಾಲಮ್ಮ ಜಿ ಬೋರಯ್ಯ, ಟಿ ಅಶೋಕ್, ಡಿ ರೇವಣ್ಣ, ಡಿ ಎನ್ ಶೈಲಾ, ಜಿಎಸ್ ವಿಜಯ್ ಕುಮಾರ್, ಕೆ ತಿಪ್ಪೇಸ್ವಾಮಿ, ರಾಧಮ್ಮ, ಶಾಂತಮ್ಮ, ಪ್ರೇಮಲತಾ, ಬಸಕ್ಕ ತಿಪ್ಪೇಸ್ವಾಮಿ, ಮಲ್ಲಮ್ಮ ಕಾಮಯ್ಯ, ಸೋಮಶೇಖರ್, ಗೀತಮ್ಮ ಕುಮಾರ್,
ಗ್ರಾಮಸ್ಥರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮಸ್ತ ವಿವಿಧ ಹಳ್ಳಿಗಳ ಗ್ರಾಮಸ್ಥರು ಇದ್ದರು