ನಾಯಕನಹಟ್ಟಿ:: ಪಟ್ಟಣದ ನಾಡಕಚೇರಿಯಲ್ಲಿ 77ನೇ ಸ್ವತಂತ್ರ ಮಹೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಉಪತಾಶಿಲ್ದಾರ್ ಶಕುಂತಲಾ ನೆರವೇರಿಸಿ ಮಾತನಾಡಿದ್ದಾರೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ಇಂದು ದೇಶದಾದ್ಯಂತ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಮಹಾತ್ಮ ಗಾಂಧೀಜಿ ಜವಾಹರಲಾಲ್ ನೆಹರೂ ಬಾಲ ಗಂಗಾಧರತಿಲಕ್ ಸುಭಾಷ್ ಚಂದ್ರ ಬೋಸ್ ಸೇರಿದಂತೆ ಅನೇಕ ಮಹನೀಯರ ಕೆಚ್ಚೆದೆಯ ಹೋರಾಟದ ತ್ಯಾಗ ಬಲಿದಾನದ ಫಲವಾಗಿ ಬ್ರಿಟಿಷರ ದಾಸ್ಯದಿಂದ ಭಾರತಾಂಬೆಯನ್ನು ಮುಕ್ತಿಗೊಳಿಸಿ ಭಾರತೀಯರಿಗೆ ಸ್ವಾತಂತ್ರ್ಯವನ್ನು ಕೊಡಿಸಿದ್ದರಿಂದ ಭಾರತ ಇಂದು ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ಉಪ ತಹಸಿಲ್ದಾರ್ ಶಕುಂತಲಾ ಅಭಿಪ್ರಾಯ ಪಟ್ಟರು.
ಇನ್ನೂ 77ನೇ ಸ್ವಾತಂತ್ರ ಮಹೋತ್ಸವದ ಪ್ರಯುಕ್ತ ಉಪ ತಹಸಿಲ್ದಾರ್ ಶಕುಂತಲಾ ಹಾಗೂ ಸಿಬ್ಬಂದಿಗಳ ಜೊತೆಗೂಡಿ ನಾಡಕಚೇರಿ ಆವರಣದಲ್ಲಿ ವಿವಿಧ ಬಗೆಯ ಸಸಿ ನೆಟ್ಟರು
ಈ ಸಂದರ್ಭದಲ್ಲಿ ಆರ್ ಐ ಚೇತನ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ವಿ ಎ ಹರೀಶ್, ಜಗದೀಶ್, ಜೈರಾಮ್, ರವಿ,ಶಂಕರ್, ಶರಣಬಸಪ್ಪ, ಪುಷ್ಪಲತಾ, ಗ್ರಾಮ ಸಹಾಯಕರಾದ ಪಿ ಬಿ ಓಬಣ್ಣ ಕುದಾಪುರ, ಚನ್ನಬಸಪ್ಪ, ಹರೀಶ್, ಹೇಮಂತ್ ನಾಯ್ಕ, ಕುಮಾರ್, ನಾಗರಾಜ್, ಓ ತಿಮ್ಮಣ್ಣ, ಗಜ್ಜುಗಾನಹಳ್ಳಿ ತಿಪ್ಪೇಸ್ವಾಮಿ, ಚಿತ್ರದುರ್ಗ ವೀರೇಶ್, ನೇರಲಗುಂಟೆ ಪಾಪಮ್ಮ, ಇದ್ದರು