ನಾಯಕನಹಟ್ಟಿ ಹೋಬಳಿ ಮಟ್ಟದ ಮುಸ್ಟಲಗುಮ್ಮಿ ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಕ್ರೀಡಾಕೂಟಕ್ಕೆ ಚಾಲನೆ

ನಾಯಕನಹಟ್ಟಿ:: ತೀರ್ಪು ನೀಡುವಾಗ ನೀಡುವಾಗ ನ್ಯಾಯ ಸಮ್ಮತವಾಗಿ ತೀರ್ಪನ್ನು ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಸುರೇಶ್ ಹೇಳಿದ್ದಾರೆ

ಅವರು ಗುರುವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಸ್ಟಲಗುಮ್ಮಿ ಗ್ರಾಮದ ಶ್ರೀ ವೀರಭದ್ರೇಶ್ವರ ಪ್ರೌಢಶಾಲಾ ಅವರಣದಲ್ಲಿ ನಾಯಕನಹಟ್ಟಿ ಹೋಬಳಿಯ ಉತ್ತರ ವಲಯ ಹಿರಿಯ ಪ್ರಾಥಮಿಕ ಶಾಲೆಗಳ 2023 -24 ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ. ತೀರ್ಪು ನೀಡುವಾಗ ನ್ಯಾಯ ಸಮತವಾಗಿ ನೀಡಬೇಕು ತೀರ್ಪು ಸ್ವೀಕರಿಸುವ ಆರೋಗ್ಯಕರ ಮನಸ್ಸು ಗ್ರಾಮದವರಿಗೂ ಶಿಕ್ಷಕರಿಗೂ ಪೋಷಕರಿಗೂ ಕ್ರೀಡಾ ಅಭಿಮಾನಿಗಳಿಗೂ ಒಪ್ಪುವಂತೆ ತೀರ್ಪು ನೀಡಬೇಕು ನ್ಯಾಯಚತವಾಗಿ ತತ್ವವನ್ನು ಪರಿಪಾಲಿಸುವ ತೀರ್ಪು ನೀಡಿದಾಗ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಜಯಗಳಿಸಲು ಸಾಧ್ಯ ಇಂತಹ ಕ್ರೀಡಾಕೂಟ ಆಯೋಜನೆ ಮಾಡಿದ ನಿಯೋಜಕರಿಗೂ ಶಿಕ್ಷಕರಿಗೂ ಅಭಿನಂದನೆಯನ್ನು ತಿಳಿಸಿದರು.

ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷರು ಬಿ ಶಂಕರ್ ಸ್ವಾಮಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿರಬಾರದು ದೈಹಿಕವಾಗಿ ಮಾನಸಿಕವಾಗಿ ಕ್ರೀಡೆಗಳಲ್ಲಿ ಭಾಗವಹಿಸಲು ಮುಂಚೂಣಿಯಲ್ಲಿರಬೇಕು.
ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂತಹ ಕ್ರೀಡಾಕೂಟಗಳು ನಡೆಯಬೇಕು ಹಾಗಾದರೆ ವಿದ್ಯಾರ್ಥಿಗಳಲ್ಲಿ ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಂತಹ ಕ್ರೀಡೆಗಳನ್ನು ಪ್ರೋತ್ಸಾಹಿಸುವುದು ತುಂಬಾ ಸಂತೋಷದ ವಿಷಯ ಎಂದರು.

ಇನ್ನೂ ಅಬ್ಬೇನಹಳ್ಳಿ ಯುವ ಮುಖಂಡ ಎ ಪಿ ರೇವಣ್ಣ ಮಾತನಾಡಿ ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂತಹ ಕ್ರೀಡಾಕೂಟಗಳು ನಡೆಸುತ್ತಿರುವುದು ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರೋತ್ಸಾಹ ಅತಿ ಮುಖ್ಯವಾದದ್ದು ಅಂತಹ ಶಿಕ್ಷಣಾಧಿಕಾರಿಗಳನ್ನು ಪಡೆದಿರುವುದು ನಮ್ಮ ಹೋಬಳಿಯ ಶಿಕ್ಷಕರ ಪುಣ್ಯ ಎಂದರು.

ಇದೇ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್, ಎಸ್ ಡಿ ಎಂ ಸಿ ಅಧ್ಯಕ್ಷ ಡಿ ಬಿ ನಿಂಗಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷ ಬಿ ಶಂಕರಸ್ವಾಮಿ, ಉಪಾಧ್ಯಕ್ಷೆ ಕೆ ಸಿ ರಾಧಮ್ಮ ಎ ಪಿ ರೇವಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಪ್ರಿಯಾಂಕ ಪಾಲಯ್ಯ, ಸಣ್ಣ ಓಬಯ್ಯ, ಚಳ್ಳಕೆರೆ ತಾಲೂಕು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಬಿ. ಸಣ್ಣ ಪಾಲಯ್ಯ, ನಾಗೇಶ್, ಅಬ್ಬೇನಹಳ್ಳಿ ಯುವ ಮುಖಂಡ ಎ ಪಿ ರೇವಣ್ಣ, ಕುಮಾರ್, ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ಕ್ರೀಡಾಕೂಟ ಆಯೋಜಕರು ಪಿ ಎಂ ವಿಶ್ವನಾಥ್, ಸಿಆರ್ ಪಿ
ಜಿ. ಪಾಲಯ್ಯ, ಅಬ್ಬೇನಹಳ್ಳಿ, ಶಿಕ್ಷಕರಾದ ಜಿ ವೈ ತಿಪ್ಪೇಸ್ವಾಮಿ ನಲಗೇತನಹಟ್ಟಿ, ಎನ್ ಮಹಾಂತೇಶ್ ನಾಯಕನಹಟ್ಟಿ, ನಾಗರಾಜ್ ಪೆನ್ನಬಳಿ, ಸೇರಿದಂತೆ ನಾಯಕನಹಟ್ಟಿ ಹೋಬಳಿಯ ಶಿಕ್ಷಕರು ಶಿಕ್ಷಕಿಯರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!