ಚಿತ್ರದುರ್ಗ(ಕರ್ನಾಟಕ ವಾರ್ತೆ)ಆಗಸ್ಟ್.2:
ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ಆಡಿಯೋ-ವೀಡಿಯೋ ಎಡಿಟಿಂಗ್ ತರಬೇತಿ ಕಾರ್ಯಾಗಾರವನ್ನು ಉಪನ್ಯಾಸಕರಿಗೆ, ಶಿಕ್ಷಕರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳಿಗೆ 2023ರ ಆಗಸ್ಟ್ 29 ರಿಂದ ಸೆಪ್ಟೆಂಬರ್ 02 ರವರೆಗೆ ಬೆಂಗಳೂರಿನ ಅಕಾಡಮಿ ಕಚೇರಿಯಲ್ಲಿ (ಯು.ಆರ್.ರಾವ್ ವಿಜ್ಞಾನ ಭವನ, ತೋಟಗಾರಿಕಾ ವಿಜ್ಞಾನಗಳ ಕಾಲೇಜು ಮಹಾದ್ವಾರ, ಜಿ.ಕೆ.ವಿ.ಕೆ. ಆವರಣ, ದೊಡ್ಡಬೆಟ್ಟಹಳ್ಳಿ ಬಸ್ ನಿಲ್ದಾಣ, ವಿದ್ಯಾರಣ್ಯಪುರ, ಬೆಂಗಳೂರು) ಕಾರ್ಯಾಗಾರ ಆಯೋಜಿಸಲಾಗಿದೆ.
ಆಸಕ್ತರು ಆನ್‍ಲೈನ್‍ನಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಕಾಡೆಮಿ ವೆಬ್‍ಸೈಟ್ https://forms.gle/2qH2JmtMfCBFq7zv5 ನಲ್ಲಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ವೆಬ್‍ಸೈಟ್ kstacademy.in ನಲ್ಲಿ ಮತ್ತು ಅಕಾಡೆಮಿಯ ದೂರವಾಣಿ ಸಂಖ್ಯೆ 080 29721550 ಗೆ ಸಂಪರ್ಕಿಸಬಹುದು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ. ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Namma Challakere Local News
error: Content is protected !!