ಚಿತ್ರದುರ್ಗ ನಗರದ ಶ್ರೀ ಮುರುಘಾಮಠದಲ್ಲಿ ಸೋಮವಾರ ಸಂಜೆ ಶ್ರಾವಣಮಾಸದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ವಿವಿಧ ಸಮಾಜಗಳ ಮುಖಂಡರು, ಭಕ್ತರ ಸಮಾಲೋಚನ ಸಭೆ ನಡೆಯಿತು.
ಸಭೆಯ ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವಪ್ರಭು ಸ್ವಾಮಿಗಳು, ಶ್ರಾವಣಮಾಸದಲ್ಲಿ ಆಗಸ್ಟ್ 17ರಿಂದ ಕರ್ತೃಗದ್ದುಗೆಗೆ ಒಂದುತಿAಗಳ ಕಾಲ ಪ್ರತಿನಿತ್ಯ ಬೆಳಗ್ಗೆ ವಚನಾಭಿಷೇಕ, ದಿ. 8-8-2023ರಂದು ಹೊಳಲ್ಕೆರೆ ಒಂಟಿಕAಬದ ಮುರುಘಾಮಠದಲ್ಲಿ ನಡೆಯುವ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಸ್ಮರಣೋತ್ಸವದಲ್ಲಿ ಜನಪ್ರತಿನಿಧಿಗಳು, ವಿವಿಧ ಸಮಾಜದ ಸ್ವಾಮಿಗಳು, ಶ್ರೀಮಠದ ಶಾಖಾಮಠಗಳ ಸ್ವಾಮಿಗಳು, ಭಕ್ತರು ಭಾಗವಹಿಸುವರು. ಆಸಕ್ತರು ಪ್ರತಿವರ್ಷದಂತೆ ದಿನಾಂಕ ಮತ್ತು ಹೆಸರನ್ನು ನೊಂದಾಯಿಸಿ ಯಶಸ್ವಿಗೊಳಿಸುವಂತೆ ಕೋರಿದರು.
ದಿ. 17-08-23ರಿಂದ ಪ್ರತಿದಿನ ಅಥವಾ ವಾರಕ್ಕೆ ಎರಡು ದಿನ ಚಿಂತನ ಶ್ರಾವಣ ಆಯೋಜಿಸಲಾಗುವುದು. ಈ ಎಲ್ಲ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ರೀತಿಯಲ್ಲಿ ತನುಮನಧನದಿಂದ ಸಹಕಾರವನ್ನು ನೀಡಬೇಕಾಗಿ ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ಭಕ್ತಾದಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಎಸ್.ಎಂ.ಎಲ್. ತಿಪ್ಪೇಸ್ವಾಮಿ, ಎಸ್. ಷಡಾಕ್ಷರಯ್ಯ, ಡಿ.ಎಸ್. ಮಲ್ಲಿಕಾರ್ಜುನ್, ಕೆ.ಎಂ. ವೀರೇಶ್ ಹಾಗೂ ವಿವಿಧ ಸಮಾಜಗಳ ಮುಖಂಡರುಗಳು ಭಾಗವಹಿಸಿದ್ದರು.
ಜಿತೇಂದ್ರ ಹುಲಿಕುಂಟೆ ಸ್ವಾಗತಿಸಿದರು.

About The Author

Namma Challakere Local News
error: Content is protected !!