ಚಳ್ಳಕೆರೆ : ಹಿಂದೂ ಮುಸ್ಲಿಂ ಶಾಂತಿ ಸಂಕೇತದ ಮೊಹರಂ ಹಬ್ಬವನ್ನು ಹಿಂದು ಮತ್ತು ಮುಸ್ಲಿಂ ಭಾಂದವರೆಲ್ಲಾರು ಒಟ್ಟಿಗೆ ಸೇರಿ ಆಚರಿಸುವಂತ ಹಬ್ಬವಾಗಿದೆ ಎಂದು
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಹೇಳಿದರು.
ಅವರು ತಾಲೂಕಿನ ತಳಕು ಹೋಬಳಿಯ ಚನ್ನಗಾನಹಳ್ಳಿ ಗ್ರಾಮದಲ್ಲಿ ನಡೆದ ಮೊಹರಂ ಹಬ್ಬದ ಕೊನೆಯ ದಿನದಂದು ಆಚರಿಸುವ ಕೆಂಡಾ ಹಾಯುವುದು ವಿಶೇಷ ಸಂಧರ್ಭದಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದೂ ಮುಸ್ಲಿಂ
ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ, . ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ನಡುವೆ ಭಾವೈಕ್ಯತೆ ಮೂಡಿಸುವಲ್ಲಿ ಮೊಹರಂ ಅಥವಾ ಪೀರಲು ಹಬ್ಬ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ ಎಂದರು.
ಇನ್ನೂ ಗ್ರಾಮದ ಹಿರಿಯರಾದ ತಿಮ್ಮರೆಡ್ಡಿ ಮಾತನಾಡಿ, ಮೊಹರಂ ನಿಮಿತ್ತ ನಗರದ ನಾನಾ ಕಡೆಗಳಲ್ಲಿ ಮುಸ್ಲಿಂ ಸಮುದಾಯದವರು ಪೀರಲು ದೇವರ ಮೆರವಣಿಗೆ ನಡೆಸುವ ಮೂಲಕ
ಹುಸೇನ್ ಮತ್ತು ಸಹೋದರರ ಹೆಸರಿನಲ್ಲಿ ಆಚರಿಸುವ ಮೊಹರಂ ಹಬ್ಬವನ್ನು ಜಾತಿ, ಧರ್ಮ ಭೇದವಿಲ್ಲದೆ ಬಹುತೇಕ ಕಡೆಗಳಲ್ಲಿ ಹಿಂದೂ-ಮುಸ್ಲಿಮರು ಒಟ್ಟಾಗಿ ಆಚರಿಸುವುದು ವಿಶೇಷ. ಕೆಂಡ ಹಾಯುವುದು ಪ್ರಮುಖ ಆಚರಣೆ ಮಾಡುತ್ತಾರೆ ಎಂದರು.
ಇನ್ನೂ ಗ್ರಾಮದ ಗೊಂಚಿಕಾರ್ ಪ್ರಕಾಶ್ ರೆಡ್ಡಿ ಮಾತನಾಡಿ,
ಹತ್ತು ದಿನಗಳ ಕಾಲ ಆಚರಿಸುವ ಪೀರಲು ಹಬ್ಬದಲ್ಲಿ ಪೆಟ್ಟಿಗೆಯಲ್ಲಿನ ದೇವರನ್ನು ಹೊರತೆಗೆದು ಪ್ರತಿಷ್ಠಾಪನೆ ಮಾಡಿ ನಿತ್ಯ ಒಂದೊಂದು ಪೂಜೆ ನೆರವೇರಿಸುವುದು ಇಲ್ಲಿನ ವಾಡಿಕೆ. ಇನ್ನೂ ಕೊನೆಯ ದಿನದ ಮೊಹರಂ ಹಬ್ಬವನ್ನು ಬಹಳಷ್ಟು ವಿಜೃಂಬಣೆ ಎರಡು ಸಮುದಾಯದವರು ಸೇರಿ ಅಹಳ ಅದ್ದೂರಿಯಾಗಿ ಆಚರಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಪ್ರಕಾಶ್ ರೆಡ್ಡಿ, ಗೌಡರ ಚೆನ್ನಪ್ಪ, ಪೂಜಾರಿ ಭಿಮ್ಣಣ್ಣ, ತಳವಾರ ತಿಮ್ಮೆಶ್, ದಳಪತಿ ತಿಮ್ಮರೆಡ್ಡಿ, ರಾಮಾಂಜನೇಯರೆಡ್ಡಿ, ದನಂಜಯ್, ಶಿಕ್ಷಕರಾದ ವೆಂಕಟೇಶ್, ರುದ್ರಪ್ಪ, ಓಬಣ್ಣ, ಮಲ್ಲೇಶ್, ವೆಂಕಟರೆಡ್ಡಿ, ವಿಶ್ವನಾಥ್, ಗ್ರಾಪಂ.ಸದಸ್ಯರಾದ ಮಂಜುಳಾ ತಿಪ್ಪಶ್, ಅಶ್ವಿನಿ ರುದ್ರಪ್ಪ, ಮಲ್ಲೇಶ್, ಮಾರಣ್ಣ, ಮೈಕ್ ಸೆಟ್ ತಿಪ್ಪೇಸ್ವಾಮಿ, ರಾಮಣ್ಣ, ಪಾಪಣ್ಣ, ಆಂಜನೇಯ, ಹುಸೇನ್ ಸಾಬ್, ದಾದ ಪೀರ್, ಕಾಲೇಗಜ್ಜ, ಇತರರು ಭಾಗಿಯಾಗಿದ್ದರು.