ಚಿತ್ರದರ‍್ಗ
ಕಣ್ಣಿನ ಉರಿ ಊತಕ್ಕೆ ಭಯಬೇಡ. ಸೂಕ್ತ ಆರೈಕೆ ಚಿಕಿತ್ಸೆಯಿಂದ ಗುಣಮುಖವಾಗುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದರ‍್ಗ ತಾಲೂಕಿನ ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುರುವಾರ ತಾಲ್ಲೂಕು ಆರೋಗ್ಯ ಅಧಿಕಾರಿಗಳ ತಂಡ ಕಣ್ಣಿನ ಉರಿ ಊತ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಭೇಟಿ ನೀಡಿ ಮಾಹಿತಿ ಶಿಕ್ಷಣ ನೀಡಿದರು.
ಕೆಲವು ದಿನಗಳಿಂದ ಹವಾಮಾನ ವ್ಯತ್ಯಾಸದಿಂದ ಮತ್ತು ನಿರಂತರವಾಗಿ ಬರುತ್ತಿರುವ ಮಳೆಯಿಂದ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಕೆಲವು ಜನರಲ್ಲಿ ಕಣ್ಣಿನ ಉರಿ ಊತ ಕಂಜೆಂಟಿವ್ವಿಟಿಸ್ ಸಮಸ್ಯೆ ಕಂಡು ಬರುತ್ತಿರುವ ಸರ‍್ವಜನಿಕರಲ್ಲಿ ಅರಿವು ಮೂಡಿಸಿ ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ನೋವು ನಿವಾರಕ ಮಾತ್ರೆ ಮತ್ತು ಕಣ್ಣಿನ ಡ್ರಾಪ್ಸ್ ಚಿಕಿತ್ಸೆ ನೀಡುವುದು ಎಂದರು.
ಮೂಗಿನ ಮತ್ತು ಗಂಟಲಿನ ಸೋಂಕು ಇದ್ದಲ್ಲಿ ಅದಕ್ಕೆ ಬೇಕಾದ ಚಿಕಿತ್ಸೆ ನೀಡುವುದು ಸಾಮಾನ್ಯವಾಗಿ ಕಣ್ಣಿನ ಬಿಳಿ ಭಾಗವೋ ಕೆಂಪಾಗುತ್ತದೆ. ಕಣ್ಣುಗಳಲ್ಲಿ ಉರಿ ಮತ್ತು ನೋವು ಇರುತ್ತದೆ. ಕಣ್ಣುಗಳಿಂದ ನಿರಂತರವಾಗಿ ನೀರು ಹೊರ ಬರುತ್ತಿರುತ್ತದೆ. ಕಣ್ಣುಗಳು ಊದಿಕೊಳ್ಳುತ್ತದೆ. ಇಂಥ ಸಂರ‍್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಸೂಕ್ತ ಚಿಕಿತ್ಸೆ ಪಡೆಯುವುದು ಎಂದು ಸಲಹೆ ನೀಡಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಜನ ಇರುವ ಪ್ರದೇಶಗಳಿಗೆ ಹೋಗುವುದು ಕಡಿಮೆ ಮಾಡಬೇಕು. ಪದೇ ಪದೇ ಕಣ್ಣುಗಳನ್ನು ಮುಟ್ಟುವುದನ್ನು ಕಡಿಮೆ ಮಾಡಬೇಕು. ಸೋಪ್ನಲ್ಲಿ ಆಗಾಗ ಕೈ ತೊಳೆಯುವುದನ್ನು ಅಭ್ಯಾಸ ಮಾಡಬೇಕು. ಕಣ್ಣಿನ ಉರಿ ಊತ ಬಂದ ವ್ಯಕ್ತಿ ಬೇರೆಯವರ ಜೊತೆ ನಿಕಟ ಸಂರ‍್ಕ ಹೊಂದುವುದನ್ನು ತಪ್ಪಿಸಬೇಕು. ಸೋಂಕಿತ ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿಮುಗಪ್ಪ ಮಾತನಾಡಿ ಕಣ್ಣಿನ ಡ್ರಾಪ್ಸ್ ಅನ್ನ ಬಳಸುವ ಬಗ್ಗೆ ಔಷಧಿಗಳನ್ನು ನುಂಗುವ ವಿಧಾನದ ಬಗ್ಗೆ ತಿಳಿಸಿದರು ಕರ‍್ಯಕ್ರಮದಲ್ಲಿ ಡಾ. ದುಶಾಂತ್, ಡಾ.ಅಕ್ಷಯ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀಧರ್ ರಾಮಪ್ಪ ರೇಣುಕಾ ಸ್ವಾಮಿ ಕಿರಣ್ ಕುಮಾರ್ ಆಶಾ ಕರ‍್ಯರ‍್ತೆ ಸರ‍್ವಜನಿಕರು ಭಾಗವಹಿಸಿದ್ದರು.
ಕರ‍್ಯಕ್ರಮದಲ್ಲಿ ಸೋಂಕಿತ ಪ್ರಕರಣಗಳಿಗೆ ಕಣ್ಣಿನ ಡ್ರಾಪ್ಸ್, ನೋವು ನಿವಾರಕ ಔಷಧಿ ವಿತರಿಸಲಾಯಿತು.

About The Author

Namma Challakere Local News
error: Content is protected !!