ಅಧಿಕಾರ ಶಾಶ್ವತವಲ್ಲ ಸಾರ್ವಜನಿಕರಿಗೆ ನೀಡಿದ ಸೇವೆ ಶಾಶ್ವತ : ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಅಭಿಪ್ರಾಯ

ಚಳ್ಳಕೆರೆ : ಕಳೆದ ಎರಡು ವರ್ಷದಿಂದ ಸರ್ಕಾರಿ ಸವಲತ್ತುಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ನೇರವಾಗಿ ತಲುಪಿವೆ ಎಂದು ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದ್ದಾರೆ.
ಅವರು ನಾಯಕನಹಟ್ಟಿ ಪಟ್ಟಣದ ಕಿಂಗ್ ಪ್ಯಾಲೇಸ್ ಆವರಣದಲ್ಲಿ ಹೋಬಳಿಯ ಮುಖಂಡರಿAದ ತಮ್ಮ 58ನೇ ವರ್ಷದ ಜನ್ಮದಿನ ಆಚರಣೆಯಲ್ಲಿ ಪಾಲ್ಗೊಂಡು ಕೇಕ್ ಕತ್ತರಿಸಿ ಮಾತನಾಡಿರು, ಪ್ರತಿಬಾರಿ ನಾಯಕನಹಟ್ಟಿಗೆ ಬಂದಾಗ ಹಟ್ಟಿ ತಿಪ್ಪೇಶನ ಮರೆಯದೆ, ಹೋಬಳಿಯ ಜನತೆಯನ್ನು ನೆನೆಯದೆ ಇರುವುದಿಲ್ಲ ಅಧಿಕಾರ ಶಾಶ್ವತವಲ್ಲ ಸಾರ್ವಜನಿಕರಿಗೆ ನೀಡಿದ ಸೇವೆ ಶಾಶ್ವತ, ನನ್ನ ಜನ್ಮದಿನದಂದು ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದರ್ಶನ ಪಡೆದು ಮತ್ತು ಹೋಬಳಿಯ ಜನತೆಯ ಸಮ್ಮುಖದಲ್ಲಿ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವುದು ನನ್ನ ಭಾಗ್ಯ,
ಕಳೆದ ಎರಡು ವರ್ಷಗಳ ಕಾಲ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ ಕ್ಷಣದಲ್ಲಿ ನಾಯಕನಹಟ್ಟಿ ತಳಕು ಪರಶುರಾಂಪುರ ಹೋಬಳಿಯ ಜನತೆ ಉತ್ತಮವಾಗಿ ಪ್ರೇರಣೆ ಮತ್ತು ಬೆಂಬಲವನ್ನ ನೀಡಿದರು ಆದ್ದರಿಂದ ಉತ್ತಮವಾಗಿ ಈ ಭಾಗದಲ್ಲಿ ಸೇವೆ ಮಾಡಲು ಅನುವಾಯಿತು ಮೊಳಕಾಲ್ಮುರು ಮತ್ತು ಚಳ್ಳಕೆರೆ ಕ್ಷೇತ್ರದ ಜನತೆ ನನಗೆ ತಹಶಿಲ್ದರಾಗಿ ಸೇವೆ ಸಲ್ಲಿಸಲು ತುಂಬಾ ಸಹಕಾರ ನೀಡಿದರು.
ಕವಿ ಜಿವಿ.ಗುಂಡಪ್ಪ ಒಂದು ಷಟ್ಪದಿಯಲ್ಲಿ ಹೇಳ್ತಾರೆ ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಮಳೆಯಂಗೆ ಸುರಿಯೇ ಎಲ್ಲರೊಳಗೆ ಒಂದಾಗು ದೀನ ದುರ್ಬಲರಿಗೆ ಮಂಕುತಿಮ್ಮ ಎನ್ನುವಂತೆ ಅಂದು ಕವಿ ಜೀವಿ ಗುಂಡಪ್ಪನವರು ಬಡವರು ಸಮಾಜದಲ್ಲಿ ಶೋಷಿತರನ್ನ ಒಳಗೊಂಡAತೆ ಷಟ್ಪದಿಯನ್ನು ಬರೆದಿದ್ದಾರೆ.

ಇದೆ ವೇಳೆ ಮುಖಂಡ ಪಾಟೀಲ್ ಜಿಎಂ.ತಿಪ್ಪೇಸ್ವಾಮಿ ಎತ್ತನಹಟ್ಟಿ ಗೌಡ್ರು ಮಾತನಾಡಿ ಎನ್.ರಘುಮೂರ್ತಿ ಐವತ್ತು ಎಂಟನೇ ವರ್ಷದ ಹುಟ್ಟುಹಬ್ಬವನ್ನು ನಮ್ಮ ಹೋಬಳಿಯಲ್ಲಿ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ದೇವರು ಅವರಿಗೆ ಆರೋಗ್ಯ ಐಶ್ವರ್ಯ ಕೊಟ್ಟು ಇನ್ನ ಹೆಚ್ಚಿನ ಅಧಿಕಾರ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನೀಡುವಂತಾಗಲಿ ಎಂದರು.
ಇನ್ನೂ ಸಭೆಯನ್ನು ಉದ್ದೇಶಿಸಿ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಜಿಬಿ.ಮುದಿಯಪ್ಪ, ಬೋರಸ್ವಾಮಿ, ಚೇರ್ಮನ್ ತಿಪ್ಪೇಸ್ವಾಮಿ, ಏಜೆಂಟ್ರುಪಾಲಯ್ಯ, ಸೇರಿದಂತೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹೋಬಳಿಯ ಹಿರಿಯ ಮುಖಂಡ ಪಾಟೀಲ್ ಜಿ ಎಂ ತಿಪ್ಪೇಸ್ವಾಮಿ ಎತ್ತನಹಟ್ಟಿ ಗೌಡ್ರು, ಟಿ ಬಸಪ್ಪ ನಾಯಕ, ಜೋಗಿಹಟ್ಟಿ ಬಾಲರಾಜ್, ದಳವಾಯಿ ತಿಪ್ಪೇಸ್ವಾಮಿ, ವಕೀಲ ನಾಗೇಂದ್ರಪ್ಪ, ಉಮೇಶ್, ತಿಪ್ಪೇಸ್ವಾಮಿ, ರಾಜು, ಗುಂತಕೊಲಮ್ಮನಹಳ್ಳಿ ಎಸ್ ಶಿವತಿಪ್ಪೇಸ್ವಾಮಿ, ಸೇರಿದಂತೆ ಹೋಬಳಿಯ ಮುಖಂಡರು ಮುಂತಾದವರು ಇದ್ದರು

About The Author

Namma Challakere Local News
error: Content is protected !!