ರೈತರ ಮನವಿಗೆ ಸ್ಪಂದಿಸಿ ಸಾರಿಗೆ ಸಂಚಾರ ವ್ಯವಸ್ಥೆ ಕಲ್ಪಿಸಿದ ಅಧಿಕಾರಿಗಳು

ಚಳ್ಳಕೆರೆ : ತಾಲೂಕಿನ ಪರಶುರಾಂಪುರ ಹೋಬಳಿಯ ದೋಡ್ಡಚೆಲ್ಲೂರು ಗ್ರಾಮಕ್ಕೆ ರೈತರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಾರಿಗೆ ಅಧಿಕಾರಿಗಳು ಬುಧವಾರದಿಂದ ಕೆಎಸ್‌ಆರ್‌ಟಿಸಿ ಬಸ್ಸು ವ್ಯವಸ್ಥೆಯನ್ನು ಮಾಡಿದ್ದಾರೆ. ಗ್ರಾಮಕ್ಕೆ ಬಂದ ಬಸ್‌ನ್ನು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದವರು ಹಾಗೂ ಗ್ರಾಮಸ್ಥರು ಸ್ವಾಗತಿಸಿ, ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ ರೈತರು ಮೂರು ನಾಲ್ಕು ಬಾರಿ ಅಧಿಕಾರಿಗೆ ಮನವಿಯನ್ನು ಮಾಡಿದ್ದು ಇದಕ್ಕೆ ಸಂಬAಧಿಸಿದ ಸಾರಿಗೆ ಇಲಾಖೆ ಹಾಗೂ ಜನಸಾಮಾನ್ಯರು ಈ ಹಿಂದೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟ ಸಾರಿಗೆ ಅಧಿಕಾರಿಗಳಿಗೆ ಧನ್ಯವಾದಗಳನ್ನ ತಿಳಿಸಿದರು.

ಈ ಮೊದಲು ಕಡೇವುಡೆ ಗ್ರಾಮದಿಂದ ಹೊರಟು ಓಬನಹಳ್ಳಿ ಮುಖಾಂತರ ಪರಶುರಾಂಪುರ ಮುಖಾಂತರ ಚಳ್ಳಕೆರೆಗೆ ಮಾಗ9 ಇತ್ತು.ಪ್ರಸ್ತುತ ಓಬನಹಳ್ಳಿಂದ ದೋಡ್ಡಚೆಲ್ಲೂರು ಗ್ರಾಮಕ್ಕೂ ಬರುವಂತೆ ಮನವಿ ಮಾಡಿದ್ದರು ಇದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಂದಿಸಿದ್ದಾರೆ.

ಪ್ರತಿದಿನ ಗ್ರಾಮೀಣ ವಿದ್ಯಾರ್ಥಿಗಳು, ರೈತರು, ನೌಕರರು, ಕಾರ್ಮಿಕರು ಬೆಳಿಗ್ಗೆ ಸರಿಯಾದ ಸಮಯಕ್ಕೆ ಸಾರಿಗೆ ಬಸ್ ಸೌಕರ್ಯ ಇಲ್ಲದೆ ತೊಂದರೆ ಅನುಭವಿಸಿದ್ದಾರೆ. ಇಂದು ಸರಕಾರಿ ಬಸ್ ಸೌಕರ್ಯದಿಂದ ಅನುಕೂಲವಾಗಿದೆ’’ ಎಂದು ಈ ವೇಳೆಯಲ್ಲಿ ಸ್ಥಳೀಯರು ಸಂತಸ ವ್ಯಕ್ತಪಡಿಸಿದರು.

About The Author

Namma Challakere Local News
error: Content is protected !!