ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ವ್ಯವಸ್ಥಪಕರಿಗೆ ಮನವಿ :
ಆದರ್ಶ ಶಾಲೆಯ ಶಿಕ್ಷಕರು ಹಾಗು ಎಸ್‌ಡಿಎಸ್‌ಎಂಸಿ ಸದಸ್ಯರಿಂದ
ಚಳ್ಳಕೆರೆ : ಸಾರಿಗೆ ವ್ಯವಸ್ಥೆ ಇಲ್ಲದೆ ಶಾಲೆಗೆ ಬರುವ ಮಕ್ಕಳು ದಿನವೀಡಿ ರಸ್ತೆ ಮೇಲೆ ಆಟೋ ಟೆಂಪೋ ಹಿಡಿಯುವ ಅನಿವಾರ್ಯತೆ ಇದೆ, ಪಕ್ಕದಲ್ಲೆ ಸಾರಿಗೆ ಡಿಪೋ ಇದ್ದರೂ ಸೌಲಭ್ಯ ಸಿಗಂದಾಗಿದೆ ಆದ್ದರಿಂದ ಶಾಲಾ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಇಂದು ಸಾರಿಗೆ ಡಿಪೋ ವ್ಯವಸ್ಥಾಪಕ ಪ್ರಭುರವರಿಗೆ ಮನವಿ ಸಲ್ಲಿಸಿದರು.
ನಗರದ ಆದರ್ಶ ಶಾಲೆಯ ಮುಖ್ಯ ಶಿಕ್ಷಕರು ಹಾಗು ಎಸ್‌ಡಿಎಸ್‌ಎಂಸಿ ಅಧ್ಯಕ್ಷ ನಾಗರಾಜ್, ಹಾಗೂ ಸದಸ್ಯರು ಕೆಎಸ್‌ಆರ್‌ಟಿಸಿ ಸಾರಿಗೆ ಡಿಪೋ ವ್ಯವಸ್ಥಾಪಕ ಪ್ರಭು ರವರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದಾರೆ.
ಇನ್ನೂ ನಗರದ ಆದರ್ಶ ಶಾಲೆಗೆ ಮಕ್ಕಳು ಆಗಮಿಸಲು ನಗರದ ಚಿತ್ರದುರ್ಗ ರಸ್ತೆಯ ಕೆಇಬಿ ಕಛೇರಿ ಬಳಿ, ವಾಲ್ಮಿಕಿ ವೃತ್ತ, ಬಿಇಓ ಕಛೇರಿ, ಪಾವಗಡ ರಸ್ತೆ, ಸೋಮಗುದ್ದು ರಸ್ತೆ ಕೋರ್ಟ್ಗೇಟ್, ಬಳ್ಳಾರಿ ರಸ್ತೆ, ಕಾಟಪ್ಪನಹಟ್ಟಿ, ಈ ಸ್ಥಳಗಳಲ್ಲಿ ಬಸ್ ನಿಲ್ದಾಣ ಮಾಡಿ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿಯಲ್ಲಿ ಉಲ್ಲೆಖಿಸಿದ್ದಾರೆ.
ಶಾಲಾ ಮುಖ್ಯ ಶಿಕ್ಷಕ ಅಶೋಕ್‌ರೆಡ್ಡಿ, ಎಸ್‌ಡಿಎಮ್‌ಸಿ ಉಪಾಧ್ಯಕ್ಷ ಆರ್.ಗಾದ್ರಿಪಾಲಯ್ಯ, ಸದಸ್ಯರಾದ ರಾಮಚಂದ್ರ ರೆಡ್ಡಿ, ನಾಗರಾಜ್, ಸೋಮಶೇಖರ್, ಪೋಷಕರಾದ ಕುಮಾರಸ್ವಾಮಿ ಹಾಗೂ ಜಯಲಕ್ಷ್ಮಿ ಆರ್‌ಟಿ.ಸ್ವಾಮಿ ಕನ್ನಡ ಶಿಕ್ಷಕರಾದ ರುದ್ರಮುನಿ ಭಾಗವಹಿಸಿದ್ದರು