ನಾಯಕನಹಟ್ಟಿ : ತಳಕು ಹೋಬಳಿಯ ದೊಡ್ಡಉಳ್ಳಾರ್ತಿ ಕಾವಲಿನಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ನೂತನವಾಗಿ ನಿರ್ಮಿಸಿರುವ ಕೆಎಸ್‌ಎಸ್‌ಐಡಿಸಿ ಬಡಾವಣೆಯಲ್ಲಿರುವ 40 ವಿದ್ಯುತ್ ಪರಿವರ್ತಕಗಳನ್ನು ಶುಕ್ರವಾರ ಚಾಲನೆಗೊಳಿಸಲಾಗುವುದು ಎಂದು ತಳಕು ಬೆಸ್ಕಾಂ ಉಪವಿಭಾಗದ ಎಇಇ ತಿಮ್ಮರಾಜು ತಿಳಿಸಿದ್ದಾರೆ.
ದೊಡ್ಡಉಳ್ಳಾರ್ತಿ ಗ್ರಾಮದ ಹೊರವಲಯದಲ್ಲಿರುವ ಕಾವಲಿನಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಸರ್ಕಾರ ಉದ್ದೇಶಿಸಿದ್ದು, ಅದಕ್ಕಾಗಿ ಸುಸಜ್ಜಿತವಾದ ಬಡಾವಣೆಯನ್ನು ನಿರ್ಮಿಸಿದೆ. ಆ ಬಡಾವಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮೈಲನಹಳ್ಳಿ ವಿದ್ಯುತ್ ಸರಬರಾಜು ಕೇಂದ್ರದಿAದ 11ಕೆವಿ ಮಾರ್ಗವನ್ನು ಹಾಕಲಾಗಿದೆ. ಮತ್ತು ಬಡಾವಣೆಯಲ್ಲಿ 40 ವಿದ್ಯುತ್ ಪರಿವರ್ತಕಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಅವುಗಳನ್ನು ಶುಕ್ರವಾರ ಬೆಳಿಗ್ಗೆ ಚಾಲನೆಗೊಳಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ದೊಡ್ಡಉಳ್ಳಾರ್ತಿ ಗ್ರಾಮದ ಸುತ್ತಮುತ್ತಲ ಸಾರ್ವಜನಿಕರು, ರೈತರು, ಕುರಿಗಾಹಿಗಳು ನೂತನವಾಗಿ ನಿರ್ಮಿಸಿರುವ ವಿದ್ಯುತ್ ಪರಿವರ್ತಕಗಳ ಬಳಿಯಾಗಲಿ, ವಿದ್ಯುತ್‌ಕಂಬಗಳ ಬಳಿಯಾಗಲಿ ತೆರಳದೆ ಜಾಗರೂಕತೆಯಿಂದ ಇರಲು ಮನವಿ ಮಾಡಿದ್ದಾರೆ.

About The Author

Namma Challakere Local News
error: Content is protected !!