ಚಳ್ಳಕೆರೆ : ಕೇವಲ ಮಕ್ಕಳಿಗೆ ಅಕ್ಷರ ರೂಪದ ಪಾಠವನ್ನು ನಾಲ್ಕು ಗೋಡೆಯ ಮಧ್ಯೆ ಕಲಿಸುವುದು ಒಂದು ಭಾಗವಾದರೆ ಮಕ್ಕಳ ಮಾನಸೀಕ ಬುದ್ದಿಮಟ್ಟಕ್ಕೆ ತಕ್ಕಂತೆ ಅವರ ವಿವೇಚನಗೆ ತಕ್ಕಂತೆ ಅವರ ಏಕಾಗ್ರತೆಯನ್ನು ಸೆಳೆಯಲು ಬಣ್ಣಗಳ ಮೂಲಕ ಮಕ್ಕಳ ಗ್ರಹಿಕೆ ಹಾಗೂ ಆಲೋಚನೆಗೆ ಹಿಂಬು ನೀಡುವ ಚಿತ್ರಕಲೆ ಒಂದಾಗಿದೆ ಎಂದು ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಡಿ.ದಯಾನಂದ ಪ್ರಹ್ಲಾದ್ ಹೇಳಿದರು.
ಅವರು ನಗರದ ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಬಣ್ಣಗಳ ಏಕಾಗ್ರತೆ ವೃದ್ದಿಗೆ ಮಕ್ಕಳ ಚಿತ್ತ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಮಕ್ಕಳ ಮಾನಸೀಕ ಬುದ್ದಿಮಟ್ಟವನ್ನು ಒಂದೆಡೆ ಸೆಳೆಯಲು ಶಿಕ್ಷಕರು ಹಲವಾರು ಪ್ರಯೋಗಗಳ ಮೂಲಕ ಅವರ ವಿವೇಚನೆಗೆ ತಕ್ಕಂತೆ ಅರಿವು ಮೂಡಿಸುತ್ತಾರೆ ಆದರೆ ಬಣ್ಣಗಳ ಚಿತ್ತಾರದಿಂದ ಮೊಟ್ಟ ಮೊದಲ ಬಾರಿಗೆ ನಮ್ಮ ಶಾಲೆಯಲ್ಲಿ ಆಯೋಜಿಸಿರುವುದು ಸಂತಸ ತಂದಿದೆ ಎಂದರು.
ಇನ್ನೂ ಚಿತ್ರಕಲಾ ಆಯೋಜಕರಾದ ಸಂತೋಷ ನಿನಾಸಂ ಮಾತನಾಡಿ, ಮಕ್ಕಳ ಮುಗ್ದ ಮನಸ್ಸುಗಳನ್ನು ತಮ್ಮತ್ತ ಸೆಳೆದು ಕೇವಲ ಬಣ್ಣಗಳ ಮೂಲಕ ಅವರಿಗೆ ಪರಿಸರ ಹಾಗೂ ಸಮಾಜದ ಸ್ಥರ ವ್ಯವಸ್ಥೆಯ ಬಗ್ಗೆ ಗ್ರಹಿಕೆ ಮೂಲಕ ಅವರ ವಿವೇಚನಾತ್ಮಕ ಆಲೋಚನೆಗೆ ತಕ್ಕಂತೆ ಅವರ ಕಲಿಕೆಗೆ ಹಿಂಬು ನೀಡುತ್ತದೆ ಆದ್ದರಿಂದ ಇಂತಹ ಬಣ್ಣಗಳ ಚಿತ್ತಾರದಿಂದ ಅವರ ಏಕಾಗ್ರತೆ ವೃದ್ದಿಯಗುವುದಲ್ಲದೆ ಅವರ ಬುದ್ದಿಶಕ್ತಿ ಮಟ್ಟ ಹೆಚ್ಚಳವಾಗುತ್ತದೆ ಎಂದರು
ಇನ್ನೂ ಮುಖ್ಯ ಶಿಕ್ಷಕ ಡಿ.ವಿ.ಎನ್.ಪ್ರಸಾದ್ ಮಾತನಾಡಿ, ಮಕ್ಕಳ ಮಾನಸಿಕ ಮಟ್ಟವನ್ನು ಹರಿಯಲು ಈ ಚಿತ್ರಕಲಿಕೆಯ ಬಣ್ಣಗಳು ಅವರ ಕಲಿಕೆಗೆ ಹಿಂಬು ನೀಡುತ್ತಾವೆ ಅದರಂತೆ ಇಂದಿನ ಆಧುನಿಕ ಯುಗದಲ್ಲಿ ಕೇವಲ ನಿಮ್ಮ ಪ್ರಮಾಣ ಪತ್ರಕ್ಕೆ ಬೆಲೆ ಇರಲ್ಲ, ನಿಮ್ಮ ಕೌಶಲ್ಯಕ್ಕೆ ಮಾತ್ರ ಬೆಲೆ ಇರುತ್ತದೆ, ವಿದ್ಯಾರ್ಥಿಯ ಕಲಿಕೆ ಸಮಯದಲ್ಲಿ ಅವನ ಗ್ರಹಿಕೆ ಹಾಗೂ ಬುದ್ದಿ ಶಕ್ತಿ ಮಾತ್ರ ಇಲಿ ತೋರಿಕೆಯಾಗುತ್ತದೆ ಎಂದರು.

ಈದೇ ಸಂದAರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶೋಭಾ ಸುರೇಶ್, ಶೈಲಜಾ, ಮಾಲಿನಿ, ಸಿದ್ದೇಶ್, ಶಾಂತಕುಮಾರ್, ಪ್ರಿಯಾಂಕ್ ಅರ್ಜುನ್, ಈಶಾ ಎಂಸಿ ಹಳ್ಳಿ, ಹಾಗು ಶಾಲೆಯ ಸಿಬ್ಬಂದಿ ಮಕ್ಕಳು ಹಾಜರಿದ್ದರು.

About The Author

Namma Challakere Local News
error: Content is protected !!