ಸೊಳ್ಳೆಗಳ ಬಗ್ಗೆ ಹೆಚ್ಚರವಿರಲಿ : ಮಲೇರೀಯಾ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿ : ಕುದಾಪುರ ತಿಪ್ಪೆಸ್ವಾಮಿ
ಚಳ್ಳಕೆರೆ: ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಮಲೇರಿಯಾ ಈ ರೋಗ ಹರಡಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮನೆ ಮುಂದೆ ನೀರು ನಿಲ್ಲದಂತೆ ನೋಡಿಕೋಳ್ಳಬೇಕು, ಮನೆಯಲ್ಲಿ ತೋಟ್ಟಿ, ಇದ್ದರೆ ಎರಡು ದಿನಕ್ಕೋಮ್ಮೆಯಾದರು ಸ್ವಚ್ಚ ಮಾಡಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕುದಾಪುರ ತಿಪ್ಪೆಸ್ವಾಮಿ ಹೇಳಿದರು.
ಅವರು ನಗರದ ಹೆಗ್ಗೆರೆ ತಾಯಮ್ಮ ಪ್ರೌಢ ಶಾಲಾ ಮಕ್ಕಳೊಂದಿಗೆ ಮಲೇರಿಯಾ ಜಾಗೃತಿ ಜಾಥದಲ್ಲಿ ಪಾಲ್ಗೊಂಡು ಮಾತನಾಡಿದರು. ಮಳೆಗಾಲದಲ್ಲಿ ಮನೆ ಸುತ್ತಮುತ್ತ ನಿಲ್ಲುವ ನೀರಿನಲ್ಲಿ ಲಾರ್ವಗಳು ಹೆಚ್ಚಾಗಿ ಸೊಳ್ಳೆಗಳು ಉತ್ಪತಿಯಾಗುತ್ತವೆ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ ಎನ್ನುವ ಘೋಷಣೆಯಂತೆ ಮಲೇರಿಯಾ ರೋಗದ ಬಗ್ಗೆ ಪ್ರತಿಯೊಬ್ಬರು ಜಾಗೃತಿ ಮೂಡಿಸಬೇಕು ಎಂದರು.
ನಗರ ಘಟಕದ ಡಾ.ಉದಯ್ ಚೌದರಿ ಮಾತನಾಡಿ, ತಾಲ್ಲೂಕಿನಲ್ಲಿ ಮಲೇರಿಯಾ ಡೆಂಗೆ ರೋಗರಹಿತ ಸಮಾಜ ನಿರ್ಮಾಣ ಗುರಿಯನ್ನು ಆರೋಗ್ಯಇಲಾಖೆ ಹೊಂದಿದೆ. ಮಳೇಗಾಲವಾದುದ್ದರಿಂದ ಮಲೇರಿಯಾ, ಡೆಂಗೆ ಹರಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ನಗರದ ಪ್ರತಿಶಾಲೆಯಿಂದ ಮಲೇರಿಯಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಮುಖ್ಯ ಶಿಕ್ಷಕರಾದ ವೇಣಿ ಮಾತನಾಡಿ, ಮಲೇರಿಯಾ ಹಬ್ಬಿಸುವ ಸೊಳ್ಳೆಗಳು ಹೆಚ್ಚಾಗಿ ತಗ್ಗು ಪ್ರದೇಶಗಳಲ್ಲಿ ಇರುತ್ತವೆ ಇಂತಹ ತಗ್ಗು ಪ್ರದೇಶಗಳನ್ನು ಮಣ್ಣಿನಿಂದ ಮುಚ್ಚುವುದರ ಮೂಲಕ ಕೊಳಚೆ ನೀರು ಹರಿದು ಹೋಗುವಂತೆ ಕಾಲುವೆಗಳನ್ನು ನಿರ್ಮಿಸವ ಅಗತ್ಯವಿದ್ದು ಇದರಿಂದ ಮಲೇರಿಯಾ ಹರಡದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಮೇಲ್ವಿಚಾರಕರಾದ ಟಿ.ಎನ್. ಲೋಕೇಶ್, ರಾಜು .ಬಿ.ಹೆಚ್., ಪ್ರಾ.ಆ.ಸುರಕ್ಷತಾಧಿಕಾರಿ ಅನಿತ .ಎಂ.ಜಿ., ಆಶಾ ಕಾರ್ಯಕರ್ತೆ ಅನಸೂಯಾ, ಶಾಲೆಯ ಶಿಕ್ಷಕರಾದ ಪ್ರದೀಪ್ .ಎಂ.ಪಿ., ರಾಜಕುಮಾರ್ .ಬಿ., ಪ್ರಾಣೇಶ್ .ಬಿ.ಡಿ., ಉಮಾ, ಪ್ರಕಾಶ್, ಶಿವಣ್ಣ, ಕುಸುಮಾವತಿ ಮತ್ತು ಜಮುನಾ ಇತರರು ಭಾಗವಹಿಸಿದ್ದರು.