ಡಾ.ಬಿ.ಯೋಗೇಶ್ ಬಾಬು ಜನ್ಮದಿನಕ್ಕೆ ರೋಗಿಗಳಿಗೆ ಹಾಲು ಬ್ರೇಡ್ ವಿತರಣೆ
ಚಳ್ಳಕೆರೆ : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಕಾಂಗ್ರೆಸ್ ಮುಖಂಡರು ಹಾಗು ಕೆಪಿಸಿಸಿ ಸದಸ್ಯರಾದ ಡಾ.ಬಿ.ಯೋಗೇಶ್ ಬಾಬು ರವರ ಜನ್ಮದಿನದ ಅಂಗವಾಗಿ ಯೋಗೇಶ್ ಬಾಬುರವರ ಅಭಿಮಾನಿಗಳು ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ
ನಾಯಕನಹಟ್ಟಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಾಲು, ಬ್ರೆಡ್, ಹಣ್ಣು ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ರಾಜುನಾಯಕ, ತಿಪ್ಪೇಸ್ವಾಮಿ ಚನ್ನಬಸಯ್ಯನಹಟ್ಟಿ, ತಿಪ್ಪೇಸ್ವಾಮಿ, ಪಾಪಣ್ಣ ಕೆರೆಯಾಗಳಹಳ್ಳಿ, ತಿಪ್ಪೇಸ್ವಾಮಿ ಗೌಡಗೆರೆ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.