ಕೇಂದ್ರ ಸರಕಾರದ ನಡೆಯ ಬಗ್ಗೆ ಕಪ್ಪು ಪಟ್ಟಿಧರಿಸಿ ಮೌನ ಪ್ರತಿಭಟನೆ

ಚಳ್ಳಕೆರೆ : ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಮಾತನಾಡುವುದನ್ನೆ ದೇಶದ್ರೋಹ, ಜಾತಿಯೊಂದಕ್ಕೆ ಮಾಡಿದ ಅಪಮಾನ ಎಂಬ ರೀತಿಯಲ್ಲಿ ಬಿಂಬಿಸುವ ಷಡ್ಯಂತರ ನಿರಂತರವಾಗಿ ನಡೆಯುತ್ತಿದೆ ಎಂದು ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ಕೆ.ವೀರಭದ್ರಯ್ಯ ಆರೋಪಿಸಿದ್ದಾರೆ
ಅವರು ನಗರದ ತಾಲೂಕು ಕಛೇರಿಯ ಮುಂಬಾಗ ನೂರಾರು ಕಾಂಗ್ರೇಸ್ ಕಾರ್ಯಕರ್ತರು ಬಾಗಿಯಾಗಿ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿ ಕಿಡಿಕಾರಿದ್ದಾರೆ. ರಾಷ್ಟç ರಾಜಕಾರಣದಲ್ಲಿ ಸರಳತೆ, ನಿರಂತರ ಹೋರಾಟದ ಮೂಲಕ ಜನಮೆಚ್ಚುಗೆ ಗಳಿಸುವ ಭಾವಿ ಪ್ರಧಾನಿ ರಾಹುಲ್ ಗಾಂಧಿ ಅವರ ಧ್ವನಿ ಅಡಗಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ ಎಂದರು.
ಪ್ರಸ್ತುತ ರಾಜ್ಯವೊಂದರ ಹೈಕೋರ್ಟ್ ಎರಡು ವರ್ಷ ಶಿಕ್ಷೆ ವಿಧಿಸಿದ್ದು ಇಂತಹ ಸಂಕಷ್ಟ ಸಂದರ್ಭದಲ್ಲಿ ನೀವು ಒಬ್ಬಂಟಿ ಅಲ್ಲ ನಿಮ್ಮೊಂದಿಗೆ ಈಡೀ ಭಾರತದ ಜನ ಇದ್ದಾರೆ ಎಂಬ ನೈತಿಕ ಬೆಂಬಲ ನೀಡಲು ನಾಡಿನಾದ್ಯಾಂತ ಜು.12ರಂದು ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಮಾಜಿ ಜಿಪಂ ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ಮತ್ತು ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಂಸತ್ತಿನ ಸದಸ್ಯತ್ವವನ್ನು ಅನರ್ಹ ಮಾಡಲು ಹೊರಟಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಇದೇ ಸಂಧರ್ಭದಲ್ಲಿ ತಾಲೂಕಿನ ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ಕೆ.ವೀರಭದ್ರಯ್ಯ, ಹಾಗೂ ಪರುಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಹಾಗೂ ಮಾಜಿ ಬ್ಲಾಕ್ ಅಧ್ಯಕ್ಷರಾದ ತಿಪ್ಪೆಸ್ವಾಮಿ, ಮಾಜಿ ಜಿಪಂ ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ, ಸುರಕ್ಷಾ ಕ್ಲಿನಿಕ್ ಮಾಲೀಕರಾದ ಬಿ.ಪರೀಧ್ ಖಾನ್, ಸೈಯದ್, ತಿಪ್ಪೆಸ್ವಾಮಿ, ಚೇತನ್ ಕುಮಾರ್, ನಯಾಜ್, ಗೀತಾಬಾಯಿ, ಉಷಾ, ಭಾಗ್ಯಮ್ಮ, ನಗರಸಭೆ ಸದಸ್ಯರುಗಳು, ಗ್ರಾಮ ಪಂಚಾಯಿತಿ ಸದಸ್ಯರುಗಳು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!