ಚಳ್ಳಕೆರೆ : ಇಂದು ಚಳ್ಳಕೆರೆ ನಗರದ ಶಿಶುಅಭಿವೃದ್ದಿ ಕಛೇರಿ ಮುಂದೆ ಸುಮಾರು ಅಂಗನವಾಡಿ ಕಾರ್ಯಕರ್ತೆಯರು, ತಮ್ಮಗೆ ಸರ್ಕಾರದಿಂದ ಆಗುತ್ತಿರುವ ದೋರಣೆಗಳ ಕುರಿತು ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದ್ದಿದಾರೆ.
ಹೌದು ಜುಲೈ 10 ರಂದು ಕಛೇರಿ ಮುಂದೆ ಸುಮಾರು ಕಾರ್ಯಕರ್ತೆಯರು ಸೇರಿ ಸಿಐಟಿಯುಸಿ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರಧಾನ ಮಂತ್ರಿಗಳಿಗೆ ಪತ್ರ ರವಾನೆ ಎಂಬ ಸಾಂಕೇತಿಕ ಚಳುವಳಿ ನಡೆಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು
ದೇಶಾದ್ಯಂತ ಪ್ರತಿಭಟನೆ ನಡೆಸಿ, “ಕರಾಳ ದಿನ ಆಚರಿಸುತ್ತಿದ್ದೇವೆ, ದೇಶ ಎದುರುಸುತ್ತಿರುವ ಗಂಭೀರ ಸವಾಲುಗಳ ಬಗ್ಗೆ ನಿಮ್ಮ ಮಂತ್ರಿ ಮಂಡಲದ ನಿರ್ಲಕ್ಷ್ಯಧೋರಣೆ ವಿರೋಧಿಸಿ ಈ ಪ್ರತಿಭಟನೆ ಮಾಡುತ್ತಿದ್ದೇವೆ ಎಂದಿದ್ದಾರೆ.
ದೇಶದ ಜನ, ಭಾರೀ ಪ್ರಮಾಣದ ಅಪೌಷ್ಟಿಕತೆ ಎದುರಿಸುತ್ತಿದ್ದಾರೆ, ದೇಶದ 26 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಜೀವನಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಇದೆ. ಹಾಗೂ ಸಹಾಯಕಿಯರ ಬ್ರಿಟೀಷ್ ವಸಹಾತು ಶಾಹಿ ಆಡಳಿತದಿಂದ ದೇಶಕ್ಕೆ, ಸ್ವಾತಂತ್ರ‍್ಯದ ಅಮ್ಮತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಆದಾಗ್ಯೂ ದೇಶದ ಮಕ್ಕಳ ಜನತೆ ಹಸಿವು ಮತ್ತು ಅಪೌಷ್ಟಿಕತೆಗಳಿಂದ ಹೊರಬರಲು ಸಾಧ್ಯವಾಗಿಲ್ಲ,

ಪ್ರಕಾರ ದೇಶದ ಮಕ್ಕಳ ಮೂರರಲ್ಲಿ ಒಂದು ಮಗು ಕಡಿಮೆ ತೂಕ ಹೊಂದಿದೆ. ಅವರಲ್ಲಿ, 68% ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ, ಅದೇ ಸಂಧರ್ಭದಲ್ಲಿ ದೇಶದಲ್ಲಿನ ಎರಡು ಕೋಟಿ ಗರ್ಭಿಣಿ ಮಹಿಳೆಯರು, ಹಾಲುಣಿಸುವ ಬಾಣಂತಿಯರು ಹಾಗೂ ಆರು ವರ್ಷಗಳ ಒಳಗಿನ ಎಂಟು ಕೋಟಿ ಮಕ್ಕಳಿಗೆ ಆರೋಗ್ಯದ ವಿಷಯಗಳನ್ನು ತಲುಪಿಸುವ ಕಾರ್ಯವನ್ನು ದೇಶದ 26 ಲಕ್ಷಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತ್ಯಾಗ ಮತ್ತು ಶ್ರಮದಿಂದ ಮಾಡುತ್ತಿದ್ದಾರೆ. ಆದರೆ, ಅವರ ಜೀವನವೇ ಅತ್ಯಂತ ದಯನೀಯ ಸ್ಥಿತಿಯನ್ನು ತಲುಪಿರುವುದೂ ಅಷ್ಟೇ ಸತ್ಯ,
ಒಟ್ಟಾರೆಯಾಗಿ , ಅಂಗನವಾಡಿ ಕೆಲಸಗಾರರನ್ನು ನಿರ್ಲಕ್ಷ್ಯಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ಮತ್ತು ರಾಜ್ಯದಲ್ಲಿ ಹೊಸ ಮೊಬೈಲ್ ಗಳಿಗಾಗಿ ಹಾಗೂ 2023 ರ ಬಜೆಟ್ ನಲ್ಲಿ ಹೆಚ್ಚಳವಾದ 1000 ರೂ.ಗಳ ಗೌರವಧನ ಬಿಡುಗಡೆಗಾಗಿ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದವರು ಮಾನ್ಯ ಪ್ರಧಾನ ಮಂತ್ರಿ ” ನರೇಂದ್ರ ಮೋದಿ” ಯಾವರಿಗೆ , ಚಳ್ಳಕೆರೆ ಯಾ ಅಆPಔ̧ ಮುಖಾಂತರ ,ಇಂದು ಮನವಿ ಪತ್ರವನ್ನು ಸಲ್ಲಿಸಲ್ಲಿಸಿದ್ದಾರೆ.
ಐಯುಟಿಸಿ ಸಂಘದ ಪದಾಧಿಕಾರಿಯಾದ ತಿಪ್ಪೆಸ್ವಾಮಿ ಇದ್ದರು.

About The Author

Namma Challakere Local News
error: Content is protected !!