ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೇಸ್ ನೇತೃತ್ವದ ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಸಾಪಲ್ಯ ಮಾಡಲು ಪಣತೊಟ್ಟು ಒಂದೊದಾಗಿ ಜಾರಿಗೊಳಿಸುತ್ತಿದೆ.
ಅದರಂತೆ ಬಯಲು ಸೀಮೆಯಲ್ಲಿ ಜನಪರ ಕಾರ್ಯಗಳ ಮೂಲಕ ಆಧುನಿಕ ಈ ಕಾಲಗಟ್ಟದಲ್ಲಿ ಬುಡಕಟ್ಟು ಸಮುದಾವೇ ಹೆಚ್ಚಿರುವ ಚಳ್ಳಕೆರೆ ಕ್ಷೇತ್ರದಲ್ಲಿ ಶಿಕ್ಷಣದ ಕ್ರಾಂತಿ ಮಾಡಿದ ಸ್ಥಳಿಯ ಶಾಸಕ ಟಿ.ರಘುಮೂರ್ತಿ ಕಳೆದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಅದರಂತೆ ಇವರಲ್ಲಿರುವ ಪ್ರಾಮಾಣಿಕ ಪ್ರಯತ್ನದಲ್ಲಿ ಬಡಜನರ ಕಾಳಜಿಗೆ ನಿರುದ್ಯೋಗವಂತ ಯುವಕ ಯುವತಿಯರಿಗೆ ಉದ್ಯೋಗ ನೀಡುವಂತ ಮಹತ್ವದ ಕಾರ್ಯದ ಮೂಲಕ ಕ್ಷೇತ್ರದಲ್ಲಿ ಎಲ್ಲಾ ಸಮುದಾಯ ವರ್ಗದ ಜನರಿಗೆ ಅವಶ್ಯಕವಾಗಿರುವ ಮೂಲಭೂತ ಸೌಲಭ್ಯಗಳನ್ನು ಹೊದಗಿಸುವ ಮೂಲಕ ಮೂರು ಬಾರಿ ಗೆದ್ದು ಇತಿಹಾಸ ಸೃಷ್ಠಿಸಿದ್ದಾರೆ.
ಅದರಂತೆ ಕ್ಷೇತ್ರದಲ್ಲಿ ಜಾಲ್ವಂತ ಸಮಸ್ಯೆಗಳಾಗಿ ಪ್ರತಿ ಬಾರಿ ಚುನಾವಣೆಯ ಸಂಧರ್ಭದಲ್ಲಿ ಮತದಾರರ ಕೂಗಿಗೆ ಧ್ವನಿಯಾದ ಪರುಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡುವುದು ಕಳೆದ ಹಲವು ವರ್ಷಗಳಿಂದ ಇಲ್ಲಿನ ಜನರ ಕೂಗಾಗಿಯೇ ಉಳಿದಿತ್ತು. ಆದರೆ ಸ್ಥಳೀಯ ಶಾಸಕರು ಕಳದೆ ಹಲವು ಬಾರಿ ಅದಿವೇಶನದಲ್ಲಿ ಧ್ವನಿ ಎತ್ತುತ್ತಾ ಬಂದಿದ್ದಾರೆ ಅದರೆ ಬದಲಾದ ರಾಜಾಕೀಯ ಸ್ಥಿತಿಗತಿಗಳಲ್ಲಿ ಈಡೇರಲಿಲ್ಲ ಇನ್ನೂ ಬಿಟ್ಟು ಬಿಡದೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಪರುಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿಸುವೆ ಎಂಬ ಕೊಟ್ಟ ಭರವಸೆ ಈಡೇರಿಸಿಕೊಳ್ಳಲು ಇಂದು ಸದನದಲ್ಲಿ ಗದ್ದಲ ಮಾಡಿದ್ದಾರೆ. ಅದರಂತೆ ಸಭಾ ಅಧ್ಯಕ್ಷರಿಗೆ ಉತ್ತರ ಕೂಡ ಕೊಡುವಂತೆ ತಾಕೀತು ಮಾಡಿದ್ದಾರೆ.
ಇನ್ನೂ ಕ್ಷೇತ್ರದಲ್ಲಿ ಸುಮಾರು ಜಾಲ್ವಂತ ಸಮಸ್ಯೆಗಳನ್ನು ಒಂದೊAದಾಗಿ ಬಗೆಹರಿಸುವ ಶಾಸಕರು ಈಗಾಗಲೇ ಶಿಕ್ಷಣದ ಕ್ರಾಂತಿಯನ್ನು ಮಾಡಿದ್ದಾರೆ ಅದರಂತೆ ಪ್ರತಿ ಸಮುದಾಯಗಳಿಗೆ ನ್ಯಾಯ ಸಮ್ಮತವಾದ ಅಗತ್ಯ ಮೂಲಭೂತ ಸೌಲಭ್ಯ ಹೊದಗಿಸಿದ್ದಾರೆ. ಅದರಂತೆ ಕ್ಷೇತ್ರದ ಯುವ ಜನತೆಯ ಕನಸನಂತೆ ನ್ಯಾಷನಲ್ ಕ್ರೀಡಾಂಗಣ, ನಿರುದ್ಯೋಗ ಹೋಗಲಾಡಿಸಲು ಉದ್ಯೋಗದ ಕೈಗರೀಕರದ ಕಂಪನಿಗಳ ಸ್ಥಾಪನೆ, ಹೈಟೆಕ್ ಆಸ್ವತ್ರೆ, ಗ್ರಾಮಾಂತರ ಪೊಲೀಸ್ ಠಾಣೆ, ಹೈಟೆಕ್ ಖಾಸಗಿ ಬಸ್ ನಿಲ್ದಾಣ, ಹೈಟೆಕ್ ಸಂತೆ ಮಾರುಕಟ್ಟೆ, ಭದ್ರಾ ಮೇಲ್ದೆಂಡೆ ಯೋಜನೆ ತ್ವರಿತಗತಿಯಲ್ಲಿ ಪೂರೈಸುವಿಕೆ, ಪಾವಗಡ ರಸ್ತೆಯ ರೈಲ್ವೆ ಮೇಲ್ಸುತೇವೆ, ಈಗೇ ಪರುಶುರಾಂಪುರ ತಾಲೂಕು ಕೇಂದ್ರದ ಕನಸನ್ನು ನನಸು ಮಾಡಲು ಸ್ಥಳೀಯ ಶಾಸಕರು ಒತ್ತಾಯ ಕೂಡ ಬಲವಾಗಿದೆ ಈಗೇ ಕ್ಷೇತ್ರದ ಅಭಿವೃದ್ದಿಗೆ ಪಣತೊಟ್ಟ ಶಾಸಕರು ಒಬ್ಬರಾಗಿದ್ದಾರೆ.
ಬಾಕ್ಸ್ :
1.ಸ್ಥಳೀಯ ಶಾಸಕರು ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರೊಟ್ಟಿಗೆ ನಿರಂತರ ಸಂಪರ್ಕದಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದಿವೇಶನದಲ್ಲಿ ಒಂದೊದಾಗಿ ಪರಿಹಾರ ಕಂಡುಕೊಳ್ಳುತ್ತಿದ್ದಾರೆ, ಅದರೆ ರಾಜ್ಯ ಸರಕಾರ ಮನವಿಯನ್ನು ಪರಿಗಣಿಸದೆ ಹೋದರೆ ಹೋರಾಟಕ್ಕೂ ಸಿದ್ದ.—ಕೆ.ಪಿ.ಭೂತಯ್ಯ ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ
- ಕಳೆದ ಸುಮಾರು ವರ್ಷಗಳಿಂದ ತಾಲೂಕು ಕೇಂದ್ರಕ್ಕೆ ಹೋರಾಟಗಳನ್ನು ಮಾಡುತ್ತ ಬಂದಿದ್ದೆವೆ ಆದರೆ ಸರಕಾರ ಮಣಿದಿಲ್ಲ ಮುಂದಿನ ದಿನಗಳಲ್ಲಿ ಸರಕಾರ ಕುಂಟ ನೆಪ ಹೇಳಿದೆ ಪರುಶುರಾಂಪುರ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು.
—ಮಂಜುನಾಥ್ ಅಧ್ಯಕ್ಷರು, ಕನ್ನಡ ರಕ್ಷಣಾವೇದಿಕೆ (ಪ್ರವೀಣ್ ಶೆಟ್ಟಿ ಬಣ)