ಚಳ್ಳಕೆರೆ : ಒಬ್ಬ ಮನುಷ್ಯನ ಯಶಸ್ಸಿನ‌ ಹಿಂದೆ ಒಂದು ತಪಸ್ಸು ಅಡಗಿರುತ್ತದೆ ಆದರಂತೆ ಕಳೆದ ಮೂರು ಬಾರಿ ಶಾಸಕರಾದ ಟಿ.ರಘುಮೂರ್ತಿ ಯಶಸ್ಸು ಹಿಂದೆ ತಪಸ್ಸು ಕೂಡ ಇದೆ ಎಂದು ಸಾಹಿತಿ ತಿಪ್ಪಣ್ಣ ಮರಿಕುಂಟೆ ಹೇಳಿದರು.

ಅವರು ನಗರದ ಶಾಸಕರ ಭವನದ ಆವರಣದಲ್ಲಿ ಆಯೋಜಿಸಿದ್ದ ಹ್ಯಾಟ್ರಿಕ್ ಶಾಸಕ ಟಿ.ರಘುಮೂರ್ತಿ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು, ಈಡೀ ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಏಕೈಕ ಶಾಸಕ ಎಂದರೆ ಅದು ರಘುಮೂರ್ತಿ ಒಬ್ಬರೇ…ಕಳೆದ ಹದಿನೈದು ವರ್ಷಗಳ ಕಾಲ ಮತದಾರರ ನಾಡಿ ಮಿಡಿತ ಹರಿತವ ಶಾಸಕರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಇವರು‌ ನೀಡಿದ ಯೋಜನೆಗಳು ಜನಪರವಾಗಿ ಎಲ್ಲಾ ವರ್ಗದ ಜನರಿಗೆ ಮುಟ್ಟಿವುಂತ ಯೋಜನೆಗಳನ್ನು ರೂಪಿಸಿದ್ದಾರೆ ಎಂದರು.

ಇನ್ನೂ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೆ.ವೀರಭದ್ರಯ್ಯ ಮಾತನಾಡಿ, ಕ್ಷೇತ್ರದಲ್ಲಿ ಯಾರು ಅಭಿವೃದ್ಧಿ ಮಾಡಿದ್ದಾರೆ ಅವರು ಮಾತ್ರ ಗೆಲ್ಲುತ್ತಾರೆ ಇಲ್ಲಾವಾದರೆ ಜನರೇ ತೀರ್ಮಾನ ಮಾಡುತ್ತಾರೆ, ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಹಲವಾರು ಟೀಕೆಗಳನ್ನು ಮಾಡಿದರು ಆದರೆ ಅವರಿಗೆ ಪ್ರತಿ ಉತ್ತರವಾಗಿ ಒಂದು ಟೀಕೆ ಮಾಡದೆ ಫಲಿತಾಂಶದಲ್ಲಿ ಅವರ ಗುರಿ ತೋರಿಸಿದ್ದಾರೆ. ತನ್ನ ಕಾರ್ಯಕರ್ತರನ್ನು ಉತ್ತಮ ಬಾಂಧವ್ಯ ದಿಂದ ಕಾಣುವ ಇವರು, ಮೂರನೇ ಬಾರಿಗೆ ಆಯ್ಕೆ ಯಾಗಿರುವುದು ಸಂತಸ ತಂದಿದೆ ಎಂದರು.

ವಿಶ್ವಕರ್ಮ ಸಮಾಜದ ರಾಜ್ಯಾದ್ಯಕ್ಷ ಆರ್.ಪ್ರಸನ್ನ ಕುಮಾರ್ ಮಾತನಾಡಿ, ಈಡೀ ಕ್ಷೇತ್ರದಲ್ಲಿ ಶಿಕ್ಷಣದ ಕ್ರಾಂತಿಯನ್ನು ಮಾಡಿದ ಅಭಿವೃದ್ಧಿ ಹರಿಕಾರ ಶಾಸಕರು, ಎಲ್ಲಾ ವರ್ಗದ ಶ್ರೇಯೋಭಿವೃದ್ದಿಗೆ ಸ್ಪಂದಿಸು ಮೂಲಕ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ನಮ್ಮ ಕಣ್ಣಾ ಮುಂದೆ ಇವೆ ಅದರಂತೆ ನೂತನ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುವ ನೀರಿಕ್ಷೆ ಇತ್ತು ಆದರೆ ಕೆಲವು ಕಾರಣಾಂತರಗಳಿಂದ ಕೈತಪ್ಪಿದೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದರು.

ಈದೇ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಸಾಹಿತಿ ತಿಪ್ಪಣ್ಣ ಮರಿಕುಂಟೆ, ಚೋಳರು ಪ್ರಕಾಶ್, ನಗರಸಭೆ ಸದಸ್ಯ ಕೆ.ವೀರಭದ್ರಯ್ಯ, ರಾಘವೇಂದ್ರ, ರಮೇಶ್ ಗೌಡ, ಮಲ್ಲಿಕಾರ್ಜುನಾ, ವೈ.ಪ್ರಕಾಶ್, ಮಂಜುಳಾ, ಸಾಕಮ್ಮ, ಸುಜಾತಾ ಪಾಲಯ್ಯ, ಕವಿತಾ ಬೋರಯ್ಯ, ಸುಮಕ್ಕ ಆಂಜನೇಯ, ಜಯಲಕ್ಷ್ಮಿ, ಜೈ ತುಂಬಿ, ಸುಮಾ ಭರಮಣ್ಣ, ವಿರೂಪಾಕ್ಷಪ್ಪ, ಚಳ್ಳಕೆರೆಪ್ಪ, ಮಾಜಿ ಜಿಪಂ.ಅಧ್ಯಕ್ಷ ರವಿಕುಮಾರ್, ಜಿಪಂ.ಸದಸ್ಯ ಬಿ.ಪಿ‌.ಪ್ರಕಾಶ್ ಮೂರ್ತಿ, ನೇತಾಜಿ ಪ್ರಸನ್ನ, ವೀರಭದ್ರಿ, ಮಹಿಳಾ ಕಾರ್ಯಕರ್ತೆ ಗೀತಾಬಾಯಿ, ಭಾಗ್ಯಮ್ಮ, ಉಷಾ, ಸರಸ್ವತಿ, ರಾಜೇಶ್ವರಿ, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!