ಚಳ್ಳಕೆರೆ : ಪ್ರತೊಯೊಂದು ಕುಟುಂಬಕ್ಕೆ ರಕ್ಷಾ ಕವಚದಂತೆ ಮುಂದಿನ ದಿನಗಳಲ್ಲಿ ಕುಟುಂಬಕ್ಕೆ ಆಶ್ರಯ ನೀಡುವ ಎಲ್‌ಐಸಿ ಪಾಲಿಸಿ ವಿಮೆಯನ್ನು ಪ್ರತಿಯೊಬ್ಬರು ಮಾಡಿಸಿಕೊಳ್ಳಬೇಕು ಎಂದು ಡಿವೈಎಸ್‌ಪಿ ರಮೇಶ್ ಕುಮಾರ್ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ದುರ್ಗಾವಾರ ಎಲ್‌ಐಸಿ ರಂಗಸ್ವಾಮಿ ಸ್ನೇಹ ಬಳಗದಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಕಳೆದ 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಪಡೆದ ನಿವೃತ್ತ ಎಲ್‌ಐಸಿ ಅಭಿವೃಧ್ದಿ ಅಧಿಕಾರಿಯಾದ ಪಿಸಿ.ತಿಮ್ಮಣ್ಣನವರಿಗೆ ಹಮ್ಮಿಕೊಂಡ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು, ಮನುಷ್ಯ ತನ್ನ ಜೀವಕ್ಕೆ ಆಶಾದಾಯಕವಾಗಿ ಜೀವನ ನಡೆಸಲು ಎಲ್‌ಐಸಿ ಒಂದು ವರದಾನವಾಗಿದೆ ಇಂತಹ ಒಂದು ಕಛೇರಿಯಲ್ಲಿ ಕಳೆದ 34 ವರ್ಷಗಳ ಸೇವೆ ಸಲ್ಲಿಸಿದ ಅವರು ವಯೋ ನಿವೃತ್ತಿ ಹೊಂದಿರುವುದು ಸಂತಸ ತಂದಿದೆ ಎಂದರು.
ಇನ್ನೂ ಸ್ನೇಹ ಬಳಗದ ದುರ್ಗಾವಾರ ಎಲ್‌ಐಸಿ ರಂಗಸ್ವಾಮಿ ಮಾತನಾಡಿ, ಮನುಷ್ಯನು ಇರುವಷ್ಟು ದಿನಗಳ ಕಾಲ ಅವನು ಮಾಡಿದ ಕಾರ್ಯವನ್ನು ಕ್ಷಣಿಕವಾಗಿ ಮರೆಯಬಹುದು ಆದರೆ ಅವನು ಮಾಡಿದ ಸೇವೆ ಎಂದಿಗೂ ಮರೆಯಲಾಗದು, ಹಸ್ನಮುಖಿಯಾದ ಸದಾ ಕ್ರೀಯಾಶಿಲತೆಯಿಂದ ಇವರು ಈಡೀ ಕಛೇರಿಯಲ್ಲಿ ಸುಮಾರು 34 ವರ್ಷಗಳ ಸೇವೆ ಸಲ್ಲಿಸಿರುವುದು ಶ್ಲಾಘನೀಯ ಎಂದರು. ಪ್ರತಿಯೊಬ್ಬರಿಗೆ ಜೀವ ವಿಮೆ ಮುಖ್ಯ ಜೀವನಕ್ಕೆ ಎಲ್‌ಐಸಿ ಪಾಲಿಸಿ ರಕ್ಷಣೆ ಕೊಡುತ್ತವೆ ಕುಟುಂಬ ನಿರ್ವಾಹಣೆ ಅತೀ ಮುಖ್ಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಅಧಿಕಾರಿ ಪಿಸಿ.ತಿಮ್ಮಣ್ಣ ನವರು, ಚಳ್ಳಕೆರೆ ಜನ ನನ್ನ ಜನ ನಾನು ಬೇರೆ ಭಾಗದಿಂದ ಬಂದವನಾದರೂ ಕೂಡ ಇಲ್ಲಿನ ಜನ ಅತೀವ ಗೌರವ ವಿಶ್ವಾದಿಂದ ಸ್ನೇಹಮಹಿ ಜೀವನ ನಡೆಸುತ್ತಿದ್ದಾರೆ ಅಧಿಕಾರಿ ಒಂದು ಭಾಗವಾದರೆ ಪರಸ್ಪರ ಸ್ನೇಹ ಇನ್ನೋಂದು ಬಾಗವಾಗಿದೆ, ಇಲ್ಲಿನ ಜನರು ಸುಮಾರು 34 ವರ್ಷಗಳ ಸುದೀರ್ಗ ಸೇವೆ ಸಲ್ಲಿಸಲು ಅವಕಾಶ ಮಾಡಿಕೊರುವುದು ನಮ್ಮ ಪುಣ್ಯ ಎಂದರು.

ಈದೇ ಸಂಧರ್ಭದಲ್ಲಿ ಡಿವೈಎಸ್‌ಪಿ ರಮೇಶ್ ಕುಮಾರ್, ಬ್ರಾಂಚ್ ಮ್ಯಾನೆಜರ್ ಕೆ.ಪಿ.ಚನ್ನಪ್ಪ, ಟಿ.ವೆಂಕಟೇಶ್, ಕೆ.ಬೋರಯ್ಯ ಪ್ರತಿನಿಧಿಗಳು, ಮೈಲಾರಪ್ಪ, ಎ.ತಿಪ್ಪೆಸ್ವಾಮಿ, ಚಿತ್ರಲಿಂಗಪ್ಪ, ನೂರಅಹಮ್ಮದ್, ಮಂಜುನಾಥ್, ಬಷೀರ್ ಹಾಯತ್, ಗಂಗಾದರ್ ಶಿರಾ, ಜಬಿವುಲ್ಲ ಹಿರಿಯೂರು, ತಿಪ್ಪೆಸ್ವಾಮಿ, ಜಬಿವುಲ್ಲಾ, ಇತರರು ಪಾಲ್ಗೊಂಡಿದ್ದರು.

Namma Challakere Local News
error: Content is protected !!