ಚಳ್ಳಕೆರೆ : ಬಯಲು ಸೀಮೆ ಚಳ್ಳಕೆರೆ ತಾಲೂಕಿನಲ್ಲಿ ಬೆಳೆ ಇಲ್ಲದೆ ರೈತರು ನೆಲ ಕಚ್ಚಿದ್ದಾರೆ, ಇನ್ನೂ ಸರಕಾರದ ಪರಿಹಾರವು ಕೂಡ ಗಗನ ಕುಸುಮದಂತಿದೆ, ದೇವರು ಕೊಟ್ಟರೂ ಪೂಜಾರಿ ಕೊಡೊದಿಲ್ಲ ಎನ್ನುವಾಗೆ ಸಂಕಷ್ಟದಲ್ಲಿ ಇರುವ ರೈತರಿಗೆ ಸರಕಾರ ಬೆಳೆ ನಷ್ಟ ಪರಿಹಾರ ಹಾಕಿವ ನಿಟ್ಟಿನಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ನೆರವಾಗಲಿದೆ ಆದರೆ ರೈತರ ಖಾತೆಗಳಿಗೆ ಹೋಗಬೇಕಾದ ಬೆಳೆ ಪರಿಹಾರ ಖಾಸಗಿ ಅಕ್ರಮದಾರರ ಖಾತೆಗೆ ಹೋಗಿರುವುದು ರೈತರ ಕಣ್ಣಲ್ಲಿ ನೀರು ಬರಿಸುವಂತೆ ಮಾಡಿದೆ ಎಂದು ರೈತ ಸಂಘದ ಪ್ರಸನ್ನ ಆರೋಪ ಮಾಡಿದ್ದಾರೆ.
ಚಳ್ಳಕೆರೆ ತಾಲೂಕಿನ ಸುಮಾರು ಪಂಚಾಯಿತಿಗಳಲ್ಲಿ ಬೆಳೆ ನಷ್ಟ ಪರಿಹಾರದಲ್ಲಿ ಗೋಲ್ ಮಾಲ್ ಹಾಗಿರುವ ಪ್ರಕರಣಗಳು ಒಂದಾದಾಗಿ ಬೆಳಕಿಗೆ ಬರುತ್ತಿವೆ. ಅದರಂತೆ ತಾಲೂಕಿನ ಸುಮಾರು ಆರು ಗ್ರಾಮಗಳ ಬೆಳೆ ನಷ್ಟ ಪರಿಹಾರವನ್ನು ರೈತರೆ ಹೊರ ಹಾಕಿದ್ದು ಈ ರೈತರ ಖಾತೆಗೆ ಬರಬೇಕಾದ ಹಣ ಹಿರಿಯೂರು, ಶಿರಾ, ಚಿತ್ರದುರ್ಗ ಈಗೇ ಜಿಲ್ಲೆಯ ಹಲವು ಅಕ್ರಮದಾರರ ಖಾತೆಗೆ ಹೋಗಿರುವುದು ತಡವಾಗಿ ಬೆಳಕಿಗೆ ಬಂದಿದೆ ಅದರಂತೆ ತಾಲೂಕಿನ ರೈತರು ತಂಡೋಪ ತಂಡವಾಗಿ ಸ್ಥಳಿಯ ಶಾಸಕರಿಗೆ, ತಹಶೀಲ್ದಾರ್‌ಗೆ, ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸುತ್ತಿದ್ದಾರೆ.
ಅದರಂತೆ ಅಕ್ರಮ ಎಸÀಗಿರುವ ಅಧಿಕಾರಿಗಳ ವಿರುದ್ಧ ಹಾರಿಯ್ದಿದ್ದಾರೆ. ಇನ್ನೂ ಶೀಘ್ರವೇ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.
ಬಾಕ್ಸ್ :
ವಿಮಾ ಕಂಪನಿಗಳು ಬೆಳೆ ವಿಮೆ ಕಟ್ಟಿಸಿಕೊಳ್ಳುವಾಗ ಜಾಹೀರಾತು ಮೂಲಕ ರೈತರನ್ನು ಸೆಳೆಯುತ್ತಾರೆ. ಕಟ್ಟಲಿಕ್ಕೆ ಕೊನೆಯ ದಿನಾಂಕ ತಿಳಿಸುತ್ತಾರೆ, ಆದರೆ ಬೆಳೆ ನಷ್ಟ ಹೊಂದಿದ ರೈತರಿಗೆ ಬೆಳೆ ಕೊಡದೆ ಸತಾಯಿಸುತ್ತಾರೆ ಇದರಿಂದಾಗಿ ರೈತರು ಕಷ್ಟಪಟ್ಟು ಬೆಳೆವಿಮೆ ಕಟ್ಟಿ ಬೆಳೆ ಬೆಳೆ ನಷ್ಟ ಹೊಂದಿದ ರೈತರಿಗೆ ಕಂಪನಿಗಳು ಮೋಸ ಮಾಡುತ್ತಿವೆ. ಚಳ್ಳಕೆರೆ ತಾಲೂಕಿನಲ್ಲಿ ಬೆಳೆ ವಿಮೆ ಕಟ್ಟಿದಂತಹ ರೈತರಿಗೆ ಬೆಳೆ ವಿಮೆ ಕಂಪನಿ ಇನ್ನ ಒಂದು ವಾರದೊಳಗೆ ರೈತರ ಖಾತೆಗೆ ಹಣ ಹಾಕದಿದ್ದರೆ ತಾಲೂಕು ಕಚೇರಿ ಮುಂದೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
— ಚಿಕ್ಕಣ್ಣ, ತಾಲೂಕು ಅಧ್ಯಕ್ಷರು
ಅಖಂಡ ಕರ್ನಾಟಕ ರಾಜ್ಯ ರೈತ ಸಂಘ