ಚಳ್ಳಕೆರೆ
ಗ್ರಾಹಕರು ಸುಮಾರು ವರ್ಷಗಳಿಂದ ಡೀಫಾಲ್ಟ್ ಆದ ಗ್ರಾಹಕರಿಗೆ OTS. ಮುಖಾಂತರ ಅಂದರೆ ಒನ್ ಟೈಮ್ ಸೆಟ್ಲ್ಮೆಂಟ್ ವ್ಯವಸ್ಥೆಯನ್ನು ಕೋರ್ಟ್ ಆಜಾದ್ ಮೂಲಕ ಗ್ರಾಹಕರಿಗೆ ಮಾಡಿಕೊಡಲಾಗುತ್ತದೆ ಹಾಗೂ ನೀವು ಕೂಡ ಬ್ಯಾಂಕಿಗೆ ಋಣದಿಂದ ಹೊರಗೆ ಬರಬಹುದು ಎಂದು ,ಎಸ್ ಬಿ ಐ ಬ್ಯಾಂಕ್ ಮ್ಯಾನೇಜರ್ ರಾಜೇಶ್ ಹೇಳಿದರು,

ಇವರು ನಗರದ ಚಿತ್ರದುರ್ಗ ರಸ್ತೆ ವಾಲ್ಮೀಕಿ ಸರ್ಕಲ್ ಬಳಿ ಬರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 68ನೇ ವಾರ್ಷಿಕೋತ್ಸವ ಹಾಗೂ ವೈದ್ಯರ ದಿನಾಚರಣೆ ಅಂಗವಾಗಿ ಬ್ಯಾಂಕಿನ ಸಿಬ್ಬಂದಿಯೊಂದಿಗೆ ಕೇಕ್ ಕತ್ತರಿಸಿ ಮಾತನಾಡಿದರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬ್ಯಾಂಕ್ ಇತಿಹಾಸದ ಬ್ಯಾಂಕ್ ಆಗಿದ್ದು ಈ ವರ್ಷದಲ್ಲಿ ನಮ್ಮ ಬ್ಯಾಂಕಿಗೆ ಸುಮಾರು ಮೂರುವರೆ ಕೋಟಿ ಆದಾಯ ಬಂದಿದೆ ,ಅಲ್ಲದೆ 73 ಕೋಟಿ ಡೆಪಾಸಿಟ್ ಇದೆ ಹಾಗೂ 74 ಕೋಟಿ ಅಡ್ವಾನ್ಸ್ ಇದೆ, ನಮ್ಮ ಬ್ಯಾಂಕಿನಲ್ಲಿ ವ್ಯವಹರಿಸುವ ಗ್ರಾಹಕರಿಗೆ ಮನೆ ಮೇಲಿನ ಸಾಲ ಚಿನ್ನದ ಮೇಲಿನ ಸಾಲ ಕೃಷಿ ಸಾಲ ಆಭರಣ ಮೇಲಿನ ಸಾಲ ಇನ್ನು ಅನೇಕ ಸಾಲಗಳನ್ನು ಗ್ರಾಹಕರಿಗಾಗಿ ಕೊಡುತ್ತಿದ್ದೇವೆ ಅಲ್ಲದೆ ಕೇವಲ 20 ರೂಪಾಯಿಯಲ್ಲಿ 2 ಲಕ್ಷದವರೆಗೆ ಇನ್ಸೂರೆನ್ಸ್ ಕೊಡಲಾಗುವುದು ಹಾಗೂ ಡಿ ಪಾರ್ಟ್ ಆದ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು ಸಾಲ ಮರುಪಾವತಿ ಮಾಡಲಾಗದ ಅಂತವರಿಗೆ ಓ ಟಿ ಎಸ್ ಮುಖಾಂತರ ಅದಾಲತ್ ಕೋರ್ಟ್ ಅಡಿಯಲ್ಲಿ ಒನ್ ಟೈಮ್ ಸೆಟ್ಲಿಮೆಂಟ್ ಗ್ರಾಹಕರಿಗೆ ಸೇವೆಯನ್ನು ಒದಗಿಸಿಕೊಡುತ್ತೇವೆ ಇಂತಹ ಅವಕಾಶವನ್ನು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದು ಬ್ಯಾಂಕಿಗೆ ಋಣಮುಕ್ತರಾಗಿರಿ ಎಂದು ತಿಳಿಸಿದರು

ಇನ್ನು ಈ ಸಂದರ್ಭದಲ್ಲಿ ಶಾಕ ಉಪನಿರ್ವಾಹಕರು ಸುನಿಲ್ ಸುರೇಶ್ ಗೀತವಾಣಿ ಜೀಜೊ ಜಾರ್ಜ್ ರಶ್ಮಿ ಅರ್ಜುನ್ ಅಮಿತ್ ಬ್ಯಾಂಕ್ ಅಪ್ರೋಜರಾದ ಸತ್ಯನಾರಾಯಣಚಾರ್ ಕೇಶವಾಚಾರ್ ವಾಹನ ಚಾಲಕ ಚಾಮು ಫಾತಿಮಾ ಸೇರಿದಂತೆ ಬ್ಯಾಂಕಿನ ಗ್ರಾಹಕರು ಉಪಸ್ಥಿತರಿದ್ದರು.

Namma Challakere Local News

You missed

error: Content is protected !!