ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಹೇರಿದ ಶಾಸಕ ಟಿ.ರಘುಮೂರ್ತಿ ಸರಕಾರ ರಚನೆಯಾದ ನಂತರ ಮೊದಲ ಸಭೆ ನಡೆಸಿ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.
ಅದರಂತೆ ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ದ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರ ಪೆಂಡಿಗ್ ಇರುವ ಕಡತಗಳನ್ನು ಹೊರ ತನ್ನಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡುವ ಮೂಲಕ ಚಳ್ಳಕೆರೆ ತಾಲೂಕು ಕಛೇರಿಗೆ ಬಂದು ನೀವು ಎಷ್ಟು ವರ್ಷಗಳಾಗಿವೆ ನಿಮ್ಮ ಸೇವೆ ಏನು ಎಂಬುದು ದಾಖಲೆಯಲ್ಲಿ ನಮೂದು ಹಾಗಿರಬೇಕು,
ರೈತರ ಪಹಣಿ ಹಾಗೂ ಪೌತಿಖಾತೆ, ಹಕ್ಕು ಬದಲಾವಣೆ ಈಗೇ ಹಲವು ಪ್ರಕರಣಗಳು ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿವೆ ಇನ್ನೂ ಒಂದೇ ಸ್ಥಳದಲ್ಲಿ ಕಳೆದ ಹತ್ತರಿಂದ ಹದಿನೈದು ವರ್ಷಗಳವರೆಗೆ ಇರುವುದು ನಿಮ್ಮ ಕಾರ್ಯ ಎಂಬುದು ತೋರಿಸಬೇಕು, ಇಲ್ಲ ನಿಮಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬೇರೆಡೆಗೆ ಹೋಗಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇನ್ನೂ ಈಗಾಗಲೇ ಸುಮಾರು ಅಧಿಕಾರಿಗಳು ಚಳ್ಳಕೆರೆ ತಾಲೂಕು ಕಛೆರಿಯಲ್ಲಿ ಖಾಲಿ ಹುದ್ದೆಗಳಿವೆ ಎಂದು ನನ್ನ ಲೆಟರ್ ಪಡೆದಿದ್ದಾರೆ ಆದ್ದರಿಂದ ನಿಮಗೆ ಇಷ್ಟ ಇದ್ದರೆ ಇದ್ದು ಕೆಲಸ ಮಾಡಿ ಇಲ್ಲವಾದರೆ ಬೆರೆಡೆಗೆ ಹೋಗಿ ಎಂದರು.
ಇನ್ನೂ ಪರಿಶಿಷ್ಟ ಜಾತಿಗಳ ಜಮೀನುಗಳಿಗೆ ಎನ್‌ಓಸಿ ನೀಡುವುದು, ಎಷ್ಟು ಪ್ರಕರಗಳ ಇವೆ ಎಂದಾಗ ಅಧಿಕಾರಿಗಳು ಕಳೆದ ಒಂದು ವರ್ಷದಿಂದ 130 ಎನ್‌ಓಸಿ ನೀಡಿದೆ ಎಂದು ಉತ್ತರಿಸಿದರು.
ಇನ್ನೂ ಸಬ್ ರಿಜಿಸ್ಟçಟರ್ ಕಛೇರಿಯಲ್ಲಿ ದೂರುಗಳು ಕೇಳಿ ಬರುತ್ತಿವೆ, ಅತೀ ಹೆಚ್ಚಿನದಾಗಿ ಭೂಮಿ ಮಂಜೂರಾತಿ ಪ್ರಕರಣಗಳು ಇಲ್ಲಿ ದಾಖಲಾಗಿವೆ ಇಲ್ಲಿ ತಹಶೀಲ್ದಾರ್ ನೀಡಿದ ಎನ್‌ಓಸಿ ಪ್ರಮುಖ ಎಂದು ಸಬ್‌ರಿಜಿಸ್ಟçರ್ ಭಾಗ್ಯಮ್ಮ ಹೇಳಿದರು.
ಇನ್ನೂ ಒಂದು ವರ್ಷದಲ್ಲಿ ಸುಮಾರು 600ವಿವಾಹಗಳು ನಡೆಯುತ್ತಿವೆ ಅದರಲ್ಲಿ ಆದರ್ಶ ಮಧುವೆಗಳು, ಪ್ರೇಮವಿವಾಹ ಈಗೇ ಪೊಲೀಸ್‌ಠಾಣೆ ಮೆಟ್ಟಿಲೆರಿದ ಪ್ರಕರಣಗಳು ಇಲ್ಲಿ ದಾಖಲಾಗುತ್ತಿವೆ ಎಂದರು.
ಇನ್ನೂ ಜನ ಸಂಪರ್ಕ ಸಭೆಯ ಮಾಹಿತಿ ಕೊಡಿ ಸಭೆ ನಡೆಸಿದ ಗ್ರಾಮಗಳಲ್ಲಿ ಯಾವ ಸಮಸ್ಯೆ ಇತ್ತು ಪ್ರಸ್ತುತ ಸಮಸ್ಯೆ ಇದೆಯೆ ಎಂಬುದು ಪಟ್ಟಿಮಾಡಿ ವರದಿ ಸಲ್ಲಿಸಿ, 94ಸಿಸಿ ಗೆ ಸಂಬAಸಿದ ಮಾಹಿತಿ ಬೇಕು. ಬಗರ್ ಹುಕ್ಕುಂ ಮಾಹಿತಿ ಬೇಕು ಯಾವ ರೀತಿಯಲ್ಲಿ ಬಡವರ ಭೂಮಿಗಳು ಉಳ್ಳವರ ಕೈ ವಶವಗುತ್ತಿವೆ ಎಂಬುದು ಮನಗಾಣಬೇಕು ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಗಡಿ ಭಾಗದ ಪರುಶುರಾಂಪುರ ಹೋಬಳಿಯಲ್ಲಿ ನಿತ್ಯವೂ ಮಕ್ಕಳ ವ್ಯಾಸಂಗಕ್ಕೆ ಹೊರನಾಡು ಕನ್ನಡಿಗರು ಎಂಬುದು ಸಮಸ್ಯೆ ತಲೆದೂರುತ್ತದೆ ಆದ್ದರಿಂದ ಇದರ ಬಗ್ಗೆ ಮಾಹಿತಿ ನೀಡಿ ಎಂದು ಶಾಸಕರು ಕೇಳಿದಾಗ ಕಂದಾಯ ಅಧಿಕಾರಿ ಲಿಂಗೇಗೌಡ ಮಾತನಾಡಿ, ಒಂದರಿAದ ಹತ್ತನೆ ತರಗತಿವರೆಗೆ ಕರ್ನಾಟಕ ರಾಜ್ಯದಲ್ಲಿ ವ್ಯಾಸಂಗ ಮಾಡಿರಬೆಕು ಮತ್ತು ಪೋಷಕರು ಬೇರೆ ರಾಜ್ಯದಲ್ಲಿ ವಾಸವಿರುಬೇಕು ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದರು.
ತಾಲೂಕಿನಲ್ಲಿ 59 ಸಾವಿರ ಜನರಿಗೆ ಸಾಮಾಜಿಕ ಭದ್ರತೆ ಪಿಂಚಣಿ ನೀಡುತ್ತಿದ್ದೆವೆ ಎಂದರು.
ತಾಲೂಕು ಕಛೇರಿಯಲ್ಲಿ ಹತ್ತು ಖಾಲಿ ಹುದ್ದೆಗಳು ಖಾಲಿ ಇದ್ದು ಒಂದು ವಾಹನ ಚಾಲಕ, ಒಂದು ಬೆರಳಚ್ಚು ಹುದ್ದೆ ಖಾಲಿ ಇವೆ ಎಂದು ತಹಶೀಲ್ದಾರ್ ರೆಹಾನ್ ಪಾಷರವರಿಂದ ಮಾಹಿತಿ ಪಡೆದರು.