ಚಳ್ಳಕೆರೆ : ನಾಡ ಪ್ರಭು ಕೆಂಪೇಗೌಡ ಜಯಂತಿಯನ್ನು ಇಂದು ಚಳ್ಳಕೆರೆ ತಾಲೂಕಿನ ತಹಶಿಲ್ದಾರ ಕಛೇರಿಯಲ್ಲಿ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಸರಳವಾಗಿ ಆಚರಿಸಿದರು.
ಇನ್ನೂ ಸರಕಾರ ರಚನೆಯಾದ ಮೊದಲ ಜಯಂತಿ ಕೆಂಪೇಗೌಡ ಜಯಂತಿ ಇದಾಗಿದ್ದು ಕೆಂಪೇಗೌಡ ಭಾವಚಿತ್ರಕ್ಕೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಪುಷ್ಪರ್ಚನೆ ಮಾಡುವ ಮೂಲಕ ಜಯಂತಿಯಲ್ಲಿ ಪಾಲ್ಗೊಂಡರು.
ಇನ್ನೂ ಕೆಂಪೇಗೌಡ ಜಯಂತಿ ಅಂಗವಾಗಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಎಲ್ಲಾರೂ ಎಲ್ಲವನ್ನು ಸಾಧನೆ ಮಾಡಲು ಸಾಧ್ಯವಿಲ್ಲ ಆದರೆ ಕೆಂಪೇಗೌಡರAತ ಮಹಾನಿಯರು ಮಾತ್ರ ಇಂತ ನಾಡ ಕಟ್ಟಿ ಬೆಳೆಸಬಹುದು, 18ನೇ ವಯಸ್ಸಿನಲ್ಲಿ ಪಟ್ಟಾಭಿಷೇಕ ನಂತರ 1537ರಲ್ಲಿ ಬೆಂಗಳೂರು ಕಟ್ಟಲು ಬುನಾದಿ ಹಾಕಿದ್ದರು ಎನ್ನಬಹುದು, ಇಂದು ಒಂದು ನಗರ ಈಡೀ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದೆ ಎಂದರೆ ಅದು ಬೆಂಗಳೂರು ಸಿಲಿಕಾನ್ ಸಿಟಿ ಮಾತ್ರ. ಈ ನಗರದಲ್ಲಿ ಅಂದಿನ ಕಾಲದಲ್ಲಿ ಸುಮಾರು 1200ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದ್ದಾರೆ. ಇನ್ನೂ ಸುಮಾರು ಪೇಟೆ(ನಗರ)ಗಳನ್ನು ನಿರ್ಮಾಣ ಮಾಡಿದ್ದಾರೆ. ಗೌಡರ ಜನಾಂಗದಲ್ಲಿ ಹುಟ್ಟಿದ ಹಲವು ಮಹಾನಿಯರು ಕೂಡ ಇಂದು ರಾಜ್ಯದ ಮೆರು ಪಂಕ್ತಿಯಲ್ಲಿ ಕಿರ್ತಿ ಪತಾಕೆಯಲ್ಲಿದ್ದಾರೆ ಎಂದರು.
ತಹಶಿಲ್ದಾರರ ರೇಹಾನ್ ಪಾಷ ಮಾತನಾಡಿ 1510 ರಲ್ಲಿ ಹುಟ್ಟಿದ್ದ ಕೆಂಪೆಗೌಡರು ಬೆಂಗಳೂರು ನಗರ ಸಂಸ್ಥಾಪಕರು, ಅಂದು ಅವರು ಮಾಡಿದ ಕೆಲಸಗಳು ಇಂದು ಚಿರಸ್ಮರಣೀಯವಾಗಿದೆ ಎಲ್ಲಾ ಸರ್ವ ಧರ್ಮಗಳು ಸಮಾನತೆ ಕಾಪಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಇನ್ನೂ ಪ್ರಾಸ್ತಾವಿಕ ವಾಗಿ ಮಾತನಾಡಿದ ಸರಕಾರಿ ಪಿಯು ಕಾಲೇಜ್ ನ ಪ್ರಾಂಶುಪಾಲರಾದ ಎಂ.ರವೀಶ್ ಕುಮಾರ್ ಮಾತನಾಡಿ ನೂರಾರು ವರ್ಷಗಳ ದೂರದೃಷ್ಟಿ ಇಟ್ಟುಕೊಂಡ ಮಹಾನ್ ನಾಯಕ ಎಂದರೆ ಅದು ಕೆಂಪೆಗೌರು ಮಾತ್ರ, ಅವರ ಕುಟುಂಬಕ್ಕೆ ವಿಜಯ ನಗರ ಸಾಮಾಜ್ರದಿಂದ ಸಹಕಾರದಿಂದ ಜನಪರ ಸೇವೆಗಳನ್ನು ಮಾಡಿದ್ದಾರೆ.
ದೇವನಹಳ್ಳಿ ಗ್ರಾಮದ ಅಹುತಿ ಗ್ರಾಮದಲ್ಲಿ ಜನಪರ ಕಾರ್ಯಗಳನ್ನು ಮಾಡುವುದರ ಮೂಲಕ ಆಳ್ವಿಕೆಯ ಮಾಡುತ್ತಾರೆ. ನವರಾತ್ರಿ ದಿನಗಳಲ್ಲಿ ಕಂಡ ಕನಸು ಕೆಂಪೇಗೌಡರು ನಾಡ ಕಟ್ಟಬೇಕು ಎಂಬುದು ಈಡೀ ದೇಶದಲ್ಲಿ ಮೊದಲ ಸ್ಥಾನ ಗಳಿಸಿದೆ. ಅಂದು ಕೆಂಪೇಗೌಡರು ನಿರ್ಮಾಣ ಮಾಡಿದ ಸಾವಿರಾರು ಕೆರೆಗಳು ನಿರಿನ ಮೂಲಗಳಾಗಿವೆ ಎಂದರು.

ಉಪನ್ಯಾಸಕ ವಸಂತ ಕುಮಾರ್ ಮಾತನಾಡಿ, ಜೀವನದ ಕಡಿಮೆ ಅವಧಿಯಲ್ಲಿ ನಾಡ ಮೆಚ್ಚುವಂತ ಕಾರ್ಯಮಾಡಿದ ಅಪ್ರತಿಮ ವೀರ ಎಂದರೆ ಅದು ಕೆಂಪೇಗೌಡ ಮಾತ್ರ ಸರ್ವ ಜನಾಂಗದ ಸುಖಿಕಂಡ ಮಹಾನ್ ಯುಗ ಪುರುಷ, ಅಂದು ಮಾಡಿದ ಕಾರ್ಯಗಳು ಇಂದು ಅವಿಸ್ಮರಣೀಯ ಎಂದರು.
ಈದೇ ಸಂಧರ್ಭದಲ್ಲಿ ತಹಶಿಲ್ದಾರ ರೇಹಾನ್ ಪಾಷ, ಮುಖಂಡ ಚೆನ್ನಕೇಶವ, ನಗರಸಭೆ ಸದಸ್ಯ ರಮೇಶ್ ಗೌಡ, ಸಹಾಯಕ ಕೃಷಿ ಅಧಿಕಾರಿ ಜೆ.ಅಶೋಕ, ಜಿಪಂ.ಕಾರ್ಯಪಾಲಕ ಇಂಜಿನಿಯಾರ್ ಕಾವ್ಯ, ರೇಷ್ಮೆ ಇಲಾಖೆಯ ಅಧಿಕಾರಿ ಕೆಂಚಾಜಿರಾವೋ, ಪಶು ಇಲಾಖೆಯ ಅಧಿಕಾರಿ ಡಾ.ರೇವಣ್ಣ, ದಿವಕರ್, ಅಬಕಾರಿ ಇನ್ಸ್ಪೆಕ್ಟರ್, ಪ್ರಸನ್ನ, ಆನಂದಪ್ಪ, ಚಂದ್ರಪ್ಪ, ಶಾಂತಿರಪ್ಪ, ಒಂಕಾರಣ್ಣ, ರಾಜಣ್ಣ, ದೇವರಾಜ್, ಸಿದ್ದಣ್ಣ, ಸುರೇಶ್, ಶೇಶಾದ್ರಿ ವೆಂಕಟೇಶ್, ಇತರರು ಇದ್ದರು.

Namma Challakere Local News
error: Content is protected !!