ಚಿತ್ರದುರ್ಗ(ಕರ್ನಾಟಕ ವಾರ್ತೆ) ಜೂನ್.25: ಅತಿಯಾದ ಮೊಬೈಲ್ ಬಳಕೆಯಿಂದ ಯುವ ಜನತೆಯಲ್ಲಿನ ಕ್ರೀಯಾಶೀಲತೆ ಹಾಳಾಗುತ್ತಿದೆ. ಮೊಬೈಲ್ ಎಂಬ ಯತ್ರೋಪಕರಣ ಲಕ್ಷಾಂತರ ಜನರ ಬದುಕನ್ನು ಕಿತ್ತುಕೊಂಡಿದೆ ಎಂದು ನಿವೃತ್ತ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಬೇಸರ ವ್ಯಕ್ತ ಪಡಿಸಿದರು.
ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾಲಯ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಐ.ಕ್ಯೂ.ಎ.ಸಿ ಸಹಯೋಗದಲ್ಲಿ ಸೋಮವಾರ ನಗರದ ತ.ರಾ.ಸು ರಂಗಮಂದಿರದಲ್ಲಿ ಆಯೋಜಿಸಿದ್ದ ಪ್ರತಿಭೋತ್ಸವ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದಿಕ್ಕನ್ನು ತಪ್ಪಿಸುವ ಅವಿಷ್ಕಾರಗಳಿಂದ ಸಮಾಜದಲ್ಲಿ ನೈತಿಕ ಮೌಲ್ಯಗಳು ಕಳೆದು ಹೋಗುತ್ತಿವೆ. ಇಂತಹ ಆವಿಷ್ಕಾರಗಳನ್ನು ಬಳಸುವಲ್ಲಿ ಯುವ ವಿದ್ಯಾರ್ಥಿಗಳು ಜಾಗೃತರಾಗಿರಬೇಕು. ಸಮಯ ಪ್ರಜ್ಞೆ, ಪ್ರಮಾಣಿಕತೆ ಹೊಂದಬೇಕು. ಯುವ ಜನತೆಯ ಪ್ರತಿಭೆಗಳನ್ನು ಅನಾವರಣ ಮಾಡುವುದಕ್ಕೆ ಹಲವಾರು ಅವಕಾಶಗಳ ಇವೆ ಎಂದರು.
ನಮ್ಮ ವ್ಯಕ್ತಿತ್ವದಿಂದ ನಾವು ಇತರರಿಗೆ ಮಾರ್ಗದರ್ಶಕರಾಗಿರಬೇಕು. ಡಾ.ಬಿ.ಆರ್ ಅಂಬೇಡ್ಕರ್, ಲಾಲ್ ಬಹದ್ದೂರ್ ಶಾಸ್ತ್ರಿ, ಡಾ. ಎಂ.ಸಿ. ಮೋದಿ, ಡಾ. ಅಬ್ದುಲ್ ಕಲಾಂ, ಸಿದ್ದೇಶ್ವರ ಸ್ವಾಮಿ, ಸರ್. ಎಂ.ವಿಶೇಶ್ವರಯ್ಯ ಇವರಂತೆ ಸಾರ್ಥಕ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕವಿ ಮಾತು ಹೇಳಿದರು.
ವಿದ್ಯಾರ್ಥಿಗಳಲ್ಲಿ ಧೃಡ ಸಂಕಲ್ಪ ಹೊಂದಿ ಗಟ್ಟಿಯಾಗಿ ನಿಂತುಕೊಳ್ಳಬೇಕು. ನಿಮ್ಮ ಬದುಕಿನ ನಿರ್ಮಾಪಕ, ನಿರ್ದೇಶಕ ನೀವೇ ಆಗಿರಬೇಕು. ದ್ವೇಷ ಬಿಟ್ಟು ಜೀವನದಲ್ಲಿ ಮುನ್ನೆಡೆಯಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಹೆಚ್. ಗುಡ್ಡದೇಶ್ವರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಂಡಲ್ಲಿ ಉತ್ತಮವಾದ ಬದುಕನ್ನು ಹಾಗೂ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಸಮಾಜ ಹಾಗೂ ಕುಟುಂಬವನ್ನು ಬದಲಾವಣೆ ಮಾಡುವ ಕನಸು ಕಾಣಬೇಕು. ಸಮಾಜದಲ್ಲಿ ಮಹಿಳೆಯರು ವಿಶೇಷ ಸ್ಥಾನಮಾನ ಪಡೆದುಕೊಂಡಿದ್ದಾರೆ. ಶಿಕ್ಷಣ ಮುಖಾಂತರ ಸಮಾಜವನ್ನು ಬದಲಾವಣೆ ಮಾಡಬಹುದು. ಶಿಕ್ಷಣ ಸಮೃದ್ಧಿಯಾಗಬೇಕಾದರೆ ದೈಹಿಕ ಮತ್ತು ಮಾನಸಿಕವಾಗಿ ಸಧೃಢರಾಗಿರಬೇಕು. ಸಾಂಸ್ಕøತಿಕ ಮತ್ತು ಕ್ರೀಡೆ ಪರಂಪರೆಯ ಬೀಜ ಬಿತ್ತುವಂತರವರಾಗಬೇಕು, ಮೌಲ್ಯ ಆಧಾರಿತ ಶಿಕ್ಷಣದಿಂದ ಸ್ವರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಧ್ಯ ಆದ್ದರಿಂದ ಯೋಗ್ಯಶಿಕ್ಷಣ ಪಡೆಯಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆ ವ್ಯಕಿತ್ವ ವಿಕಸನಕ್ಕೂ ಗಮನ ಹರಿಸಬೇಕು. 43 ವಿದ್ಯಾರ್ಥಿಗಳಿಂದ ಆರಂಭವಾದ ಮಹಿಳಾ ಪ್ರಥಮ ದರ್ಜೆ ಕಾಲೇಜು ಇಂದು 800 ಹೆಚ್ಚು ವಿದ್ಯಾರ್ಥಿಗಳಿಂದ ಕೂಡಿದೆ ಎಂದು ಹೇಳಿದರು.
ಎನ್‍ಎಸ್.ಎಸ್ ಸಂಚಾಲಕ ಡಾ.ಸಿ. ಚನ್ನಕೇಶವ ಪ್ರಾಸ್ತವಿಕವಾಗಿ ಮಾತನಾಡಿ, ಸರ್ಕಾರಿ ಮಹಿಳಾ ಕಾಲೇಜು ದೊಡ್ಡ ಹೆಮ್ಮರವಾಗಿ ಇಂದು ಬೆಳೆದಿದೆ. ದಾಖಲಾತಿ ಮತ್ತು ಫಲಿತಾಂಶವು ಉತ್ತಮವಾಗಿದೆ. ಕಳೆದ ವರ್ಷ ಎರಡು ರ್ಯಾಂಕ್‍ಗಳನ್ನು ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪಡೆದುಕೊಂಡಿದೆ. ಎನ್.ಎಸ್.ಎಸ್. ಸ್ಪೋಟ್ಸ್, ರೇಡ್‍ಕ್ರಾಸ್, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ 2021-22 ನೇ ಸಾಲಿನಲ್ಲಿ ಅತಿಹೆಚು ಅಂಕ ಗಳಿದ ವಾಣಿಜ್ಯ ವಿಭಾಗ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಕಾಲೇಜಿನಿಂದ ಆಯೋಜಿಸಿದ್ದ ಎನ್‍ಎಸ್‍ಎಸ್, ವಾಲಿಬಾಲ್, ಥ್ರೋಬಾಲ್, ಓಟ, ಚೆಸ್, ಭರತನಾಟ್ಯ, ಭಾವಗೀತೆ, ಚೆರ್ಚ, ಯೋಗ, ಪ್ರಬಂಧ, ಆಶುಭಾಷಣ, ಏಕಪಾತ್ರ ಅಭಿನಯ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಬಿ. ಮಂಜುನಾಥ, ಸಾಂಸ್ಕøತಿಕ ಸಮಿತಿಯ ಸಂಚಾಲಕಿ ಆರ್. ಲೀಲಾವತಿ, ಕ್ರೀಡಾ ಸಮಿತಿ ಸಂಚಾಲಕ ಆರ್. ಶಿವಪ್ರಸಾದ್, ಗ್ರಂಥಪಾಲಕ ಬಿ.ಹೆಚ್. ಕುಮಾರಸ್ವಾಮಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಿದ್ದಪ್ಪ, ಸಿ.ಡಿ.ಸಿ ಸದಸ್ಯರು, ಎಲ್ಲಾ ವಿಭಾಗದ ಉಪನ್ಯಾಸಕರು, ಭೋಧಕ-ಭೋಧಕೇತರ ಸಿಬ್ಬದಿಗಳು, ವಿದ್ಯಾರ್ಥಿಗಳು ಇದ್ದರು.

About The Author

Namma Challakere Local News
error: Content is protected !!