ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.26:
ಇದೇ ಜೂನ್ 27 ರಿಂದ ಧಾರವಾಡ ಹಾಗೂ ಬೆಂಗಳೂರಿನ ನಡುವೆ ಕಾರ್ಯಾರಂಭ ಮಾಡಲಿರುವ ಬಹು ನಿರೀಕ್ಷಿತ “ವಂದೇ ಭಾರತ್ ರೈಲು” ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿನಲ್ಲಿ ನಿಲುಗಡೆ ಹೊಂದಲು ರೈಲ್ವೇ ಸಚಿವಾಲಯ ಅನುಮತಿ ನೀಡಿದೆ.
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಖುದ್ದು ರೈಲ್ವೇ ಸಚಿವಾಲಯವನ್ನು ದೂರವಾಣಿ ಮೂಲಕ ಸಂಪರ್ಕಿಸಿ, ವಂದೇ ಭಾರತ್ ರೈಲು ಚಿಕ್ಕಜಾಜೂರಿನಲ್ಲಿ ಒಂದು ನಿಲುಗಡೆಗೆ ನೀಡುವಂತೆ ಕೋರಿದರು. ಇದಕ್ಕೆ ಸಕಾರಾತ್ಮವಾಗಿ ಸ್ಟಂದಿಸಿದ ರೈಲ್ವೇ ಸಚಿವಾಲಯ ನಿಲುಗಡೆ ಅನುಮತಿ ಆದೇಶಿಸಿದೆ. ರಾಜ್ಯದ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿ, ಸಚಿವರು ಶುಭ ಹಾರೈಸಿ, ಅಭಿನಂದಿಸಿದ್ದಾರೆ.