ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.26:
ಚಿತ್ರದುರ್ಗ ತಾಲ್ಲೂಕಿನಲ್ಲಿ ಬಾಲ್ಯವಾಸ್ಥೆ ಹಾಗೂ ಕಿಶೋರವಾಸ್ಥೆ ಕಾರ್ಮಿಕ ನಿಷೇಧ -1986 ಕಾಯ್ದೆಯಡಿ ಚಿತ್ರದುರ್ಗ ನಗರದ ಗ್ಯಾರೇಜ್ಗಳಿಗೆ ಸೋಮವಾರ ಭೇಟಿ ನೀಡಿ ಈ ಕಾಯ್ದೆಯಡಿ ತಪಾಸಣೆ ನಡೆಸಲಾಯಿತು.
ತಪಾಸಣೆ ಸಂದರ್ಭದಲ್ಲಿ ಒಟ್ಟು 6 ಮಕ್ಕಳು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಯಿತು. ಇದನ್ನು ಪರಿಶೀಲಿಸಿದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಡಾ.ಆರ್.ಪ್ರಭಾಕರ್, ಇಬ್ಬರು ಮಕ್ಕಳಿಗೆ 18 ವರ್ಷ ಪೂರ್ಣಗೊಂಡಿದ್ದರಿಂದ ಮಕ್ಕಳನ್ನು ಪೋಷಕರ ವಶಕ್ಕೆ ಬಿಡಲಾಯಿತು. 3 ಮಕ್ಕಳು 10ನೇ ತರಗತಿ ಉತ್ತೀರ್ಣರಾಗಿದ್ದಾರೆ. ಇವರನ್ನು ಪ್ರಥಮ ಪಿಯುಸಿಗೆ ದಾಖಲು ಮಾಡಲು ಪೋಷಕರಿಗೆ ಮಾಹಿತಿಯನ್ನು ನೀಡಲಾಯಿತು. ಒಬ್ಬ ಬಾಲಕನು 9ನೇ ತರಗತಿ ಉತ್ತೀರ್ಣನಾಗಿದ್ದು, 10ನೇ ತರಗತಿಗೆ ದಾಖಲು ಮಾಡಲು ಪೋಷಕರಿಗೆ ಮಾಹಿತಿಯನ್ನು ನೀಡಲಾಯಿತು. ಒಟ್ಟು 4 ಮಕ್ಕಳನ್ನು ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ತಾತ್ಕಾಲಿಕವಾಗಿ ಪುನರ್ವಸತಿ ಕಲ್ಪಿಸಲು ಸೂಚಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕಾರ್ಮಿಕ ನಿರೀಕ್ಷಕ ಡಿ,.ರಾಜಣ್ಣ, ಯೋಜನಾ ನಿರ್ದೇಶಕ ಪಿ.ಸತೀಶ್ ಕುಮಾರ್, ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿಗಳಾದ ರೇಣುಕಾ, ಸಂತೋಷ್ ಹಾಗೂ ಪೊಲೀಸ್ ಸಿಬ್ಬಂದಿ ನಾಗರಾಜ ನಾಯಕ ಹಾಜರಿದ್ದರು.