ಚಳ್ಳಕೆರೆ ; ದಿನೆ ದಿನೇ ಹೆಚ್ಚುತ್ತಿರುವ ಬಯಲು ಸೀಮೆಯ ಬಿಸಿಲನ್ನು ನೀಗಿಸಲು ಸಾರ್ವಜನಿಕರು ಈ ಪ್ರದೇಶಕ್ಕೆ ಗಿಡ ಮರಗಳನ್ನು ಎತೆಚ್ಚವಾಗಿ ಬೆಳೆಸಿ ಹಸಿರುಕರಣ ಮಾಡಬೇಕು ಎಂದು ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಗೌರವ ಅಧ್ಯಕ್ಷ ಡಿ.ನಾಗಪ್ಪ ಹೇಳಿದರು.
ಅವರು ನಗರದ ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಅರಣ್ಯ ಇಲಾಕೆ ಸಹಯೋಗದೊಂದಿಗೆ ಹಮ್ಮಿಕೊಂಡ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಲಾ ಕಾಲೇಜು, ಸರಕಾರಿ ಬಂಜರು ಭೂಮಿ, ರಸ್ತೆ ಬದಿ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಸುಮ್ಮನಾಗದೆ ಅವುಗಳನ್ನು ಪಾಲನೆ ಪೋಷಣೆ ಮಾಡಿ ಬೆಳೆಸಿ ಬರವನ್ನು ಹೋಗಲಾಡಿಸಲು ಹೆಚ್ಚು ಗಿಡಗಳನ್ನು ನೆಡಲು ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ಮುಂದಾಗುವAತೆ ತಿಳಿಸಿದರು.
ಇನ್ನೂ ಸಂಸ್ಥೆಯ ಕಾರ್ಯದರ್ಶಿ ದಯಾನಂದ್ ಪ್ರಹ್ಲಾದ್ ಮಾತನಾಡಿ, ಬಯಲು ಸೇಮೆ ಎಂಬ ಹಣೆ ಪಟ್ಟಿಯ ಜತೆಗೆ ಬರಪೀಡಿತ ಪ್ರದೇಶ ಎಂಬ ಹೆಸರನ್ನು ಹೋಗಲಾಡಿಸಲು ಹೆಚ್ಚಾಗಿ ಮರಗಿಡಗಳನ್ನು ಬೆಳೆಸಿದರೆ ಅವುಗಳು ಮೋಡಗಳ ಅಕರ್ಷಣೆ ಮಾಡಿಕೊಂಡು ಮಳೆ ಸುರಿಸುತ್ತವೆ, ಸರಕಾರಿ ಕಚೇರಿಗಳ ಆವರಣ ಹಾಗೂ ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಹಾಕಿಕೊಳ್ಳಲು ಮನವಿ ಮಾಡಿದರು
ಈದೇ ಸಂಧರ್ಭದಲ್ಲಿ ಅರಣ್ಯಾಧಿಕಾರಿಗಳು, ಸಂಸ್ಥೆಯ ಉಪಾಧ್ಯಕ್ಷ ಮಧುಸೂದನ್, ರಾಜೇಶ್ ಗುಪ್ತ, ಮುಖ್ಯ ಶಿಕ್ಷಕ ಪ್ರಸಾದ್, ಶೋಭಾ, ಶೈಲಜಾ, ಸಿದ್ದೆಶ್, ರವಿ, ಮಕ್ಕಳು ಹಾಗೂ ಸಿಬ್ಬಂದಿ ಪಾಳ್ಗೊಂಡಿದ್ದರು.